ಮಾರೆಮ್ಮ ದೇವಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ….

ಮಾರೆಮ್ಮ ದೇವಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ….

ಬಳ್ಳಾರಿ / ಕಂಪ್ಲಿ : ಪಟ್ಟಣದ ಕೊರವರ ಓಣಿಯಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ಹಾಗೂ ಕೊರವರ ಸಮುದಾಯದ ಆರಾಧ್ಯ ದೇವಿಯಾದ ಶ್ರೀ ಕೊರವರ ಮಾರೆಮ್ಮ ದೇವಿ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆಯನ್ನು ನೆರವೇರಿಸಿದರು.ಪಟ್ಟಣದ ಕೊರವರ ಓಣಿಯಲ್ಲಿರುವ ಕೊರವರ ಮಾರೆಮ್ಮ ದೇವಿ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು, ಶಿಥಿಲಗೊಂಡಿದ್ದು, ಕೊರವರ ಸಮುದಾಯದವರು ದೇವಸ್ಥಾನ ಪುನರ್ ನಿರ್ಮಾಣಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೇ 5 ಲಕ್ಷರೂಗಳನ್ನು ತಮ್ಮ ಶಾಸಕರ ಅನುನದಾನದಲ್ಲಿ ಒದಗಿಸಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನೂ ನೀಡಲಾಗುವುದು ಎಂದರು.ಕಂಪ್ಲಿ ತಾಲ್ಲೂಕು ಕೊರವರ ಸಮುದಾಯದ ಕಾರ್ಯದರ್ಶಿ ವಿರೂಪಾಕ್ಷಿ ಮಾತನಾಡಿ, ನಮ್ಮ ಸಮುದಾಯದ ಹಿರಿಯರು ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ದೇವಿಯ ದೇವಸ್ಥಾನ ಶಿಥಿಲಗೊಂಡಿದ್ದು, ಅದನ್ನು ಪುನರ್ಮಿಸಲು ಸಮುದಾಯದವರು ಮುಂದಾಗಿದ್ದು, ಸುಮಾರು 35 ರಿಂದ 40 ಲಕ್ಷ ರೂಗಳ ವೆಚ್ಚದಲ್ಲಿ ಶಿಲಾದೇವಸ್ಥಾನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಶಾಸಕರು ಅನುದಾನ ಒದಗಿಸುವುದಾಗಿ ಭರವಸೆಯನ್ನು ನೀಡಿದ್ದು, ಈಗಾಗಲೇ 5 ಲಕ್ಷರೂಗಳನ್ನು ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಅದ್ಯಕ್ಷ ಎನ್.ಹಬೀಬ್ ರೆಹಮಾನ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಕೊರವರ ಸಮಾಜದ ಗೌರವಾಧ್ಯಕ್ಷ ಮಲ್ಲಪ್ಪ, ಅಧ್ಯಕ್ಷ ಯಂಕಪ್ಪ, ಮುಖಂಡರಾ ಹೊಳೆಯಪ್ಪ, ಗಂಗಾಧರ್, ಹನುಮಂತಪ್ಪ, ಜಂತಕಲ್ ಹನುಮಂತಪ್ಪ, ಹುಲುಗಪ್ಪ, ಶ್ರೀನಿವಾಸ್, ದರೋಜಿ ಬಸವರಾಜ, ತೆಕ್ಕಲಕೋಟೆ ಹುಲುಗಪ್ಪ, ಕೆ.ರಾಮಾಲಿಸ್ವಾಮಿ, ಕೆ.ಸುರೇಶ, ಸೀನಪ್ಪ, ಬಿ.ರಾಮ, ಜಂತಕಲ್ ಸಣ್ಣ ಹನುಮಂತ ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *