ಜಗದ್ಗುರು ಡಾಕ್ಟರ್ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಪ್ರಮುಖ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಮಹತ್ವವಾದ ಸಭೆ…

ಜಗದ್ಗುರು ಡಾಕ್ಟರ್ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಪ್ರಮುಖ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಮಹತ್ವವಾದ ಸಭೆ…

ಶ್ರೀಮಠದ ಪ್ರಕಟಣೆ ದಿನಾಂಕ07-08-2025 ಶುಕ್ರವಾರ ಸ್ಥಳ: ಲೋಕೋಪಯೋಗಿ ಸಚಿವರ ನಿವಾಸ ಬೆಂಗಳೂರು ಸಮಯ: ರಾತ್ರಿ 8:00 ರಿಂದ 10:30 ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸಮುದಾಯದ ಶಾಸಕರು ಶ್ರೀಮಠದ ಧರ್ಮದರ್ಶಿಗಳು ಜಿಲ್ಲಾಧ್ಯಕ್ಷರು ಸಮುದಾಯದ ಮುಖಂಡರ ಸಮಕ್ಷಮದಲ್ಲಿ ಸಮುದಾಯದ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಸಚಿವರ ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು ಸಭೆಯಲ್ಲಿ ಪೂಜ್ಯಶ್ರೀಗಳು ಹಾಗೂ ಶ್ರೀಮಠದ ಧರ್ಮದರ್ಶಿಗಳು ಜಿಲ್ಲಾಧ್ಯಕ್ಷರು ಹಾಗೂ ಸಮಾಜದ ಮುಖಂಡರು ಮಾನ್ಯ ಸಚಿವರಿಗೆ ಹಾಗೂ ಶಾಸಕರುಗಳಿಗೆ ಈ ಕೆಳಕಂಡಂತೆ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿಸಲ್ಲಿಸಿ ಶೀಘ್ರವೇ ಈಡೇರಿಸುವ ಕುರಿತು ಸುಧೀರ್ಘ ಚರ್ಚೆ ನಡೆಸಲಾಯಿತು ಸಮುದಾಯದ ಪ್ರಮುಖ ಬೇಡಿಕೆಗಳು ಕರ್ನಾಟಕ ಸರ್ಕಾರ ದಿನಾಂಕ:23.10.2022ರ ಆದ್ಯಾದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದ್ದು ತತ್ಸಂಬಂಧವಾಗಿ ಸರ್ಕಾರ ಆದೇಶ ದಿನಾಂಕ: 28.12.2022ರಲ್ಲಿ ರೋಷ್ಟರ್‌ ಬಿಂದುಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ. ಈ ಸಂಬಂಧವಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯು ತನ್ನ ಆದೇಶದಲ್ಲಿ ದಿನಾಂಕ:28.05.2025 ರಲ್ಲಿ ಸೆಟ್ ಅಸೈಡ್ ಮಾಡಿರುತ್ತದೆ.

ಈ ಸಂಬಂಧ ರಾಜ್ಯ ಸರ್ಕಾರ ಕೂಡಲೇ ಆಗಿರುವ ನ್ಯೂನ್ಯತೆಯನ್ನು ಸರಿಪಡಿಸಿ ಸಾವಿರಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಎದುರಾಗುವ ತೊಂದರೆಗಳಿಂದ ಪಾರುಮಾಡುವ ಕುರಿತು**ಪರಿಶಿಷ್ಟ ಪಂಗಡದವರಿಗೆ ಬಡ್ತಿಯಲ್ಲಿ ಮೀಸಲಿರುವ ಹುದ್ದೆಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿರದ ಅನ್ಯ ಜಾತಿಯವರು ಪಡೆಯುತ್ತಿರುವುದನ್ನು ತಡೆಗಟ್ಟುವ ಕುರಿತು. ಕರ್ನಾಟಕ ರಾಜ್ಯದ ವಿವಿಧ ಇಲಾಖೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಗುರುತಿಸಿ ಕೂಡಲೇ ಭರ್ತಿಮಾಡುವ ಬಗ್ಗೆ ಸರ್ಕಾರ ಕ್ರಮವಹಿಸುವುದು. ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳನ್ನು ಅರ್ಹರಿಗೆ ಸಮರ್ಪಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವುದು. ರಾಜ್ಯದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನ/ವಾಲ್ಮೀಕಿ ಭವನಗಳನ್ನು ಸಮುದಾಯದ ಸುಪರ್ದಿಗೆ ನೀಡುವ ಸಂಬಂಧ. ರಾಜ್ಯದಲ್ಲಿ ಸ್ವತಂತ್ರ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆ. ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಬುಡಕಟ್ಟು ಸಂಶೋಧನ ಕೇಂದ್ರ ಸ್ಥಾಪಿಸುವ ಬಗ್ಗೆ. ರಾಜ್ಯದ ಯಾದಗಿರಿ ಜಿಲ್ಲೆ ಸುರುಪುರ ತಾಲ್ಲೂಕು ಬಂಡೊಳ್ಳಿ ಗ್ರಾಮದಲ್ಲಿ ಶ್ರೀಮಠ ಜಮೀನು ಹೊಂದಿದ್ದು ಅದರಲ್ಲಿ ಶಿಕ್ಷಣ ಸಂಸ್ಥೆ ಕಟ್ಟಲು ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಕೊಡುವ ಬಗ್ಗೆ. ರಾಜ್ಯದ ಪ್ರತಿ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. ಶ್ರೀಮಠಕ್ಕೆ ಸಂಬಂಧಿಸಿದ ಸರ್ವೋದಯ ಶಿಕ್ಷಣ ಸಂಸ್ಥೆ ಶ್ರೀ ಬಸವರಾಜ ಹೊರಟ್ಟಿಯವರ ಸುಪರ್ದಿನಲ್ಲಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅದನ್ನು ಮನಃ ಶ್ರೀಮಠಕ್ಕೆ ಮರಳಿಸುವ ಬಗ್ಗೆ. ಚಿತ್ರದುರ್ಗದಲ್ಲಿ ಸರ್ಕಾರದಿಂದ ದುಗೋತ್ಸವ ಆಚರಿಸುವಂತೆ ಕ್ರಮ ವಹಿಸುವ ಕುರಿತು. ಹಾಗೂ ಸಭೆಯಲ್ಲಿ ಚರ್ಚಿಸಲಾದ ಇತರೆ ವಿಷಯಗಳು ಈ ಮೇಲ್ಕಂಡ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿದ ಸನ್ಮಾನ್ಯ ಸಚಿವರು ಹಾಗೂ ಶಾಸಕರುಗಳು ಸಮುದಾಯದ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿ ಈ ಬಗ್ಗೆ ಪೂಜ್ಯ ಶ್ರೀಗಳು ಹೇಳಿದಂತೆ ಅದಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದು ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಸಿಗಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ರವರು, ಚಳ್ಳಕೆರೆ ಶಾಸಕರಾದ ಸನ್ಮಾನ್ಯ ಶ್ರೀ ಟಿ. ರಘುಮೂರ್ತಿ ರವರು, ಜಗಳೂರು ಶಾಸಕರಾದ ಸನ್ಮಾನ್ಯ ಶ್ರೀ ಶ್ರೀ ದೇವೇಂದ್ರಪ್ಪ ರವರು, ಸಿರುಗುಪ್ಪ ಶಾಸಕರಾದ ಸನ್ಮಾನ್ಯ ಶ್ರೀ ಬಿ ಎಂ ನಾಗರಾಜ್ ರವರು, ಸುರಪುರ ಶಾಸಕರಾದ ಸನ್ಮಾನ್ಯ ಶ್ರೀ ರಾಜ ವೇಣುಗೋಪಾಲ ನಾಯಕರವರು, ಕೂಡ್ಲಿಗಿ ಶಾಸಕರಾದ ಸನ್ಮಾನ್ಯ ಶ್ರೀ ಎನ್ ಟಿ ಶ್ರೀನಿವಾಸ್ ರವರು, ಎಚ್ ಡಿ ಕೋಟೆ ಶಾಸಕರಾದ ಸನ್ಮಾನ್ಯ ಶ್ರೀ ಅನಿಲ್ ಚಿಕ್ಕಮಾದು ರವರು, ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ಯೋಗೇಶ್ ಬಾಬು ರವರು ಸೇರಿದಂತೆ ಶ್ರೀಮಠದ ಧರ್ಮದರ್ಶಿಗಳು ರಾಜ್ಯಾಧ್ಯಕ್ಷರು ನಿವೃತ್ತ ಅಧಿಕಾರಿಗಳು ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರುಗಳು ಸಮಾಜದ ಮುಖಂಡರು ಯುವಕರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *