ವಾಲ್ಮೀಕಿ ಸಮುದಾಯದ ವಿರುದ್ಧ ಅವ ಹೇಳನಕಾ ರಿ ಹೇಳಿಕೆ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ದೂರು ದಾಖಲಿಸುವಂತೆ ವಾಲ್ಮೀಕಿ ಮಹಾಸಭಾ ಗಂಗಾವತಿ ಘಟಕ ಮನವಿ….

ಗಂಗಾವತಿ. ಕರ್ನಾಟಕ ರಾಜ್ಯದಲ್ಲಿ ಸುಮಾರು 75 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಸಮಾಜದ ಬಗ್ಗೆ ಅತ್ಯಂತ ಕೀಳುಮಟ್ಟದಿಂದ ಮಾತನಾಡಿದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಹಾಗೂ ತಕ್ಷಣವೇ ಬಂಧಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಗಂಗಾವತಿ ತಾಲೂಕ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಗುರುವಾರದಂದು ನಗರ ಪೊಲೀಸ್ ಠಾಣೆಗೆ ತೆರಳಿ ಪಿಎಸ್ಐ ಟಿಜಿ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ. ವೀರಭದ್ರಪ್ಪ ನಾಯಕ ಮಾತನಾಡಿ ಅಕ್ಟೋಬರ್ 19 ರಂದು ಬೆಳಗಾವಿಯಲ್ಲಿ ಜರುಗಿದ ಡಿಸಿಸಿ ಬ್ಯಾಂಕಿನ ಚುನಾವಣೆಯ ಮತದಾನದ ಪ್ರಕ್ರಿಯೆಯಲ್ಲಿರುವಾಗ ಬಾಗೇವಾಡಿಯ ಮಾಜಿ ಸಂಸದ ರಮೇಶ್ ಕತ್ತಿ ಇವರು ವಾಲ್ಮೀಕಿ ಸಮುದಾಯದ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದು ಜೊತೆಗೆ ಜಾತಿ ನಿಂದನೆ ಮಾಡಿದ್ದು ನಾಯಕ ಸಮಾಜ ಬಾಂಧವರಿಗೆ ಘಾಸಿ ಉಂಟು ಮಾಡಿದೆ ಇದರಿಂದ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡಿದ ಮಾಜಿ ಸಂಸದ ರನ್ನು ತಕ್ಷಣವೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ ನಾಯಕ್. ಹನುಮಂತಪ್ಪ ನಾಯಕ್. ಬಸಪ್ಪ ನಾಯಕ್. ಬಳ್ಳಾರಿ ರಾಮಣ್ಣ ಮತ್ತಿತರರು ಮಾತನಾಡಿದರು. ಮಹಾಸಭಾದ ಕಾರ್ಯದರ್ಶಿ ಎ ಜೆ ರಂಗನಾಥ್ ದೂರು ಪತ್ರದ ವಿವರಣೆಯನ್ನು ಓದಿದರು. ಬಳಿಕ ಪಿಎಸ್ಐ ಮನವಿ ಪತ್ರ ಸ್ವೀಕರಿಸಿ ಹಿರಿಯ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಕಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಂಪಣ್ಣ ನಾಯಕ್. ಅರ್ಜುನ್ ನಾಯಕ್. ಮಹದೇವಪ್ಪ ನಾಯಕ್. ಇತರೆ ಸಮಾಜದ ಮುಖಂಡರು ಭಾಗವಹಿಸಿದ್ದರು

