ಶಂಕರ ಮಠದಲ್ಲಿ ಗುರು ದ್ವಾದಶಿ ಆಚರಣೆಮಠದ ನಿರ್ಮಾಣಕ್ಕೆಭೀಮಸೇನ ರಾವ್ ಅಳವಂಡಿ ಕರ್ ಹಾಗೂಅಯೋಧ್ಯ ರಾಮಾಚಾರಅತ್ಯಂತಸ್ಮರಣೀಯರು ಧರ್ಮದರ್ಶಿ… ನಾರಾಯಣ ವೈದ್ಯ…

ಗಂಗಾವತಿ,ಕಳೆದ 25 ವರ್ಷಗಳಿಂದಲೂಗಂಗಾವತಿಯಲ್ಲಿ ಶಂಕರ ಮಠ ನಿರ್ಮಾಣಕ್ಕೆ ಸಂಬಂಧಿಸಿದಂತೆಹಾಗೆಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವದಿವಂಗತ ಭೀಮ್ಸೇನ್ ರಾವ್ ಅಳವಂಡಿ ಕರ್ ಹಾಗೂಅದ್ವೈತ ಸಿದ್ದಾಂತದ ಬಗ್ಗೆ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯರ ಬಗ್ಗೆಅತ್ಯಂತ ಅಭಿಮಾನ ಹೊಂದಿರುವದಿವಂಗತ ಅಯೋದ್ಯ ರಾಮಾಚಾರಅವರನ್ನುಸ್ಮರಿಸ ಮಾಡಿಸಬೇಕಾದ ಅವಶ್ಯಕತೆ ಇದೆ ಎಂದುಶೃಂಗೇರಿ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯಹೇಳಿದರು.ಅವರು ಶಾರದಾ ದೇವಸ್ಥಾನದಲ್ಲಿ ಗುರು ದ್ವಾದಶಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಈ ಹಿಂದೆ ಪಂಪಾಪತಿ ದೇವಸ್ಥಾನ ನಗರೇಶ್ವರ ದೇವಸ್ಥಾನ ದೇವಸ್ಥಾನಈ ಭಾಗಗಳಲ್ಲಿ ಶಂಕರ ಜಯಂತಿ ದತ್ತಾತ್ರೇಯ ಜಯಂತಿ ಸೇರಿದಂತೆಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದ್ದು

ಈ ಸಂದರ್ಭದಲ್ಲಿ ಮೇಲಿನ ಹಿರಿಯರು ಹಾಗೂ ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ನಗರದಲ್ಲಿ ಅತ್ಯಂತ ಸುಸಜ್ಜಿತವಾದ ಶಾರದಾ ದೇವಸ್ಥಾನ ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಿಕ್ಷಕಿ ಶಕುಂತಲಾ ಆಚರಣೆಯ ಮಹತ್ವ ಕುರಿತು ಮಾತನಾಡಿ ದತ್ತಾತ್ರೇಯ ಅವತಾರಿಗಳಾದ ಶ್ರೀಪಾದ ವಲ್ಲಭರು ಸಮೀಪದ ರಾಯಚೂರಿನ ಕುರುವಪುರ ಎಂಬಲ್ಲಿ ಹಲವಾರು ವರ್ಷಗಳ ಕಾಲ ವಾಸವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸೋದರ ಮೂಲಕ ಈ ದಿನ ನಿಜಾಂಶವನ್ನು ಹೊಂದಿದ ದಿನಾಚರಣೆಯನ್ನು ಗುರು ದ್ವಾದಶಿ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು.ಜೊತೆಗೆ ದತ್ತ ನಾಮಗಳಿಂದ ಸಂಕಷ್ಟಗಳು ದೂರವಾಗುವುದು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು ಇದಕ್ಕೂ ಪೂರ್ವದಲ್ಲಿಗೊತ್ತ ಪಾದುಕೆಗಳಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ ಪುಷ್ಪಾರ್ಚನೆ ಸೇರಿದಂತೆ ಭಜನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು ಜೊತೆಗೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಮಹಾಪ್ರಸಾದ ನಡೆಸಲಾಯಿತು ಈ ಸಂದರ್ಭದಲ್ಲಿಜಗನ್ನಾಥ್ ಅಳವಂಡಿಕರ್.ರಾಘವೇಂದ್ರ ಅಳವಂಡಿ.ಪ್ರಳದ ರಾವ್ ಮಾಸ್ಟರ್ ಕಾಶಿನಾಥ್ ಜೋಶಿ ಮಹೇಶ್ ಜೋಶಿ ಭೀಮಸೇನ್ ಭಟ್ ಬಾಲಕೃಷ್ಣ ದೇಸಾಯಿ ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು

