ರಂಗ ಕಲಾ ತಪಸ್ವಿ ಡಾ” ಸಿ. ಮಹಲಿಂಗಪ್ಪರವರಿಗೆ , ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಒತ್ತಾಯ…

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಬಾವಿ : ಗ್ರಾಮದ ಚಲುವಾದಿ(SC) ಪರಿಶಿಷ್ಟ ಜಾತಿ ಸಮಾಜದ ಹಿರಿಯರು , ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರು , ನಿವೃತ್ತ ಉಪ ಪ್ರಾಚಾರ್ಯರಾದ ಡಾ” ಸಿ ಮಹಲಿಂಗಪ್ಪರವರಿಗೆ. ರಂಗ ಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವುದಕ್ಕಾಗಿ , ಕರ್ನಾಟಕ ಸರ್ಕಾರ. 2025ನೇ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ , ಗೌರವಿಸಬೇಕೆಂದು ತಾಲೂಕಿನ ಗಣ್ಯರು ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ. 73 ವಸಂತಗಳನ್ನು ಹಿಂದಿಕ್ಕಿರುವ ಡಾ” ಸಿ ಮಹಲಿಂಗಪ್ಪರವರು , ಹಲವು ದಶಕಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಕರ್ಥವ್ಯ ನಿರ್ವಹಿಸಿದ್ದಾರೆ. ಮತ್ತು ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ , ತಮ್ಮನ್ನು ರಂಗ ಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿಸಿಕೊಂಡದ್ದರ ಫಲವಾಗಿ , ಅವರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪೌರಾಣಿಕ ನಾಟಕಗಳಲ್ಲಿಯೇ ತಮ್ಮನ್ನು ಗುತುತಿಸಿಕೊಂಡಿರುವ ಮಹಲಿಂಗಪ್ಪರವರು , ಕೃಷ್ಣ ನ ಪಾತ್ರದಲ್ಲಿಯೇ ಅತಿ ಹೆಚ್ಚಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈವರೆಗೆ ಡಾ” ಸಿ ಮಹಲಿಂಗಪ್ಪರವರು , ಸುಮಾರು ಸಾವಿರಕ್ಕೂ ಅಧಿಕ ನಾಟಕ ಪ್ರದರ್ಶನಗಳಲ್ಲಿ ಬಣ್ಣ ಹಚ್ಚಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾವು ವಹಸಿಕೊಂಡಿರುವ ಜವಾಬ್ದಾರಿಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುವ ಮಹಲಿಂಗಪ್ಪರವರು , ಬಣ್ಣ ಹಚ್ಚಿಕೊಂಡರೆ ಮುಗಿಯಿತು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ , ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ , ಅಭಿನಯಿಸಿ ಯಶಸ್ವಿಗೊಳಿಸಿದ್ದಾರೆ. *ಪ್ರಶಸ್ತಿಗಳ ಸರಮಾಲೆ , ಸನ್ಮಾನ ಬಿರುದಾವಳಿಗಳ ಮಹಾಪೂರ*- ಇಂತಹ ಕಲಾ ತಪಸ್ವಿಗೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ಥಿಗಳು , ಗೌರವ ಸನ್ಮಾನಗಳು ಸಹಜವಾಗಿಯೇ ಅವರನ್ನು ಹುಡುಕಿಕೊಂಡು ಬಂದು ಅಪ್ಪಿಕೊಂಡಿವೆ. ಗುಲ್ಬರ್ಗ ಯ್ಯೂನಿವರ್ಸಿಟಿಯಿಂದ ರಂಗಕಲಾ ಕ್ಷೇತ್ರದಲ್ಲಿಗೈದ ಗಣನೀಯ ಸೇವೆಗೆ , ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ತಾಲೂಕಾಡಳಿತ ತಾಲೂಕು ಮಟ್ಟದಿಂದ , ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೂರಾರು ವಿವಿದ ಬಗೆಯ ಪ್ರಶಸ್ತಿ , ಸನ್ಮಾನಗಳಿಗೆ ಭಾಜನರಾಗಿದ್ದಾರೆ ಡಾ ॥ ಸಿ. ಮಹಲಿಪ್ಪರವರು. *ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತೆ ಸರ್ಕಾರಕ್ಕೆ ಒತ್ತಾಯ*-ಅಂತೆಯೇ 2025 ನೇ ಸಾಲಿನ ನವಂಬರ್ 1 ರಂದು ರಾಜ್ಯ ಸರ್ಕಾರ ನೀಡುವ , ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕಿದೆ ಎಂಬುದು ಕೂಡ್ಲಿಗಿ ತಾಲೂಕಿನ ಸಮಸ್ತ ಜನತೆಯ ಆಶಯವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ , ಸಲಹಾ ಸಮಿತಿ ಹಾಗೂ ಉನ್ನತ ಮಟ್ಟದ ಆಯ್ಕೆ ಸಮಿತಿಗಳು ನಿರ್ವಹಿಸುತ್ತಿವೆ. ಈ ಬಾರಿ 70ನೇ ರಾಜ್ಯೋತ್ಸವದ ಅಂಗವಾಗಿ 70 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು , ಈ ಸಿಸಂದರ್ಭದಲ್ಲಿ ರಂಗ ಕಲಾ ತಪಸ್ವಿಗಳಾದ ಡಾ” ಸಿ.ಮಹಲಿಂಗಪ್ಪರವರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಈ ಮೂಲಕ ಕೋರಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳುಳ್ಳ ಅಂತಿಮ ಪಟ್ಟಿಯನ್ನು , ಸಾಮಾನ್ಯವಾಗಿ ಅಕ್ಟೋಬರ್ 31ರ ಸಂಜೆ ಪ್ರಕಟಿಸಲಾಗುತ್ತದೆ. ಸಾಧಕರಾರ ರಂಗ ತಪಸ್ವಿಗಳಾದ ಡಾ” ಮಹಲಿಂಗಪ್ಪರವರು , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕಾಗಿ ಕಳದ ಹತ್ತಾರು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ.. ಅವರಿಗೆ ಈವರೆಗೆ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿಲ್ಲ. ಕಾರಣ ನಿಖರವಾಗಿಲ್ಲ ನಿಗೂಢವಾಗಿದೆ , ಕಾರಣ ಕೂಡ್ಲಿಗಿ ಪಟ್ಟಣ ಸೇರಿದಂತೆ. ಕೂಡ್ಲಿಗಿ ತಾಲೂಕಿನ ಸಮಸ್ತ ಹಿರಿಯರು , ನಾಗರೀಕರು ಪ್ರಜ್ಞಾವಂತರು , ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಸೇರಿದಂತೆ , ಹಾಗೂ ಸಚಿವರಾದ ಶಿವರಾಜ ತಂಗಡಿಗಿ. ಸಂಸದ ಈ ತುಕಾರಾಂ ಒಳಗೊಂಡು. ಗ್ರಾ ಪಂ , ಪ ಪಂ ಸರ್ವ ಸದಸ್ಯರು. ತಾಲೂಕಿನ ಬಹುತೇಕ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳು , ಗಣ್ಯರು , ಡಾ” ಸಿ.ಮಹಲಿಂಗಪ್ಪರವರಿಗೆ 2025ರ ಸಾಲಿನ , ರಾಜ್ಯ ಮಟ್ಥದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕೆಂದು. ರಾಜ್ಯ ಸರ್ಕಾರಕ್ಕೆ , ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ. ವಂದೇ ಮಾತರಂ ಜಾಗೃತಿ ವೇದಿಕೆ , ಕನ್ನಡ ಪರ , ಮಹಿಳಾ ಸಂಘಟನೆಗಳು , ಕಾರ್ಮಿಕ ಸಂಘಟನೆಗಳು. ದಲಿತ ಪರ ಸಂಘಟನೆಗಳು . ಪತ್ರಕರ್ತರು , ಸಾಹಿತಿಗಳು , ವಕೀಲರ ಸಂಘ , ಸಾಹಿತಿಗಳು , ಹೋರಾಟಗಾರರು. ನಾಗರೀಕರು , ಹಿರಿಯ ನಾಗರೀಕರು , ಸರ್ಕಾರಿ ನೌಕರರ ಸಂಘದವರು , ನಿವೃತ್ತ ಸರ್ಕಾರಿ ನೌಕರರ ಸಂಘದವರು. ರಂಗಕಲಾವಿದರು , ವಿದ್ಯಾರ್ಥಿ ಸಂಘಟನೆಗಳು , ಕಾಂಗ್ರೇಾ್ ಬಿಜೆಪಿ ಸೇರಿದಂತೆ , ಎಲ್ಲಾ ಪಕ್ಷಗಳ ಪ್ರಮುಖರು , ಚಲುವಾದಿ ಸಮುದಾಯ ಒಳಗೊಂಡಂತೆ , ಎಲ್ಲಾ ಸಮುದಾಯಗಳ ಮುಖಂಡರು ಈ ಮೂಲಕ ಒತ್ತಾಯಿಸಿದ್ದಾರೆ. *ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ , ಶಿಪಾರಸ್ಸು ಮಾಡಬೇಕಿದೆ*- ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು , ರಂಗಕಲಾ ತಪಸ್ವಿಗಳಾದ. ಹಿರಿಯರಾದ ಡಾ ” ಸಿ.ಮಹಲಿಂಗಪ್ಪರವರಿಗೆ ನೀಡುವಂತೆ , ವಿಜಯನಗರ ಜಿಲ್ಲೆಯ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ. ಕನ್ನಡ ಸಂಸ್ಕೃತಿ ಇಲಾಖೆ , ಹಾಗೂ ರಾಜ್ಯ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಂದು. ಕೂಡ್ಲಿಗಿ ತಾಲೂಕಿನ ತಾಲೂಕಿನ ಸಮಸ್ತ ಪ್ರಜ್ಞಾವಂತರು , ಹೋರಾಟಗಾರರು ಒತ್ತಾಯಿಸಿದ್ದಾರೆ.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
