ಶಾಸಕ ಎನ್ ಟಿ ಶ್ರೀನಿವಾಸ್ ನೇತೃತ್ವದಲ್ಲಿ , ಮತಗಳ್ಳತನ ಆರೋಪಿಸಿ ಸಹಿ ಸಂಗ್ರಹ ಅಭಿಯಾನ…

ಶಾಸಕ ಎನ್ ಟಿ ಶ್ರೀನಿವಾಸ್ ನೇತೃತ್ವದಲ್ಲಿ , ಮತಗಳ್ಳತನ ಆರೋಪಿಸಿ ಸಹಿ ಸಂಗ್ರಹ ಅಭಿಯಾನ…

ವಿಜಯನಗರ ಜಿಲ್ಲೆ ಕೂಡ್ಲಿಗಿ : ಅ 15ರಂದು ಪಟ್ಟಣದಲ್ಲಿ , ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ವಿಜಯ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ, ಕೂಡ್ಲಿಗಿ ಮತ್ತು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ. ಮತಗಳ್ಳತನ ವಿರುದ್ಧ , ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್. ರವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು , ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ . ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ , ನಡೆಯುತ್ತಿರುವ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ. ತಾವು ಎಲ್ಲರೊಡಗೂಡಿ ಸಾರ್ವಜನಿಕರ ಅಭಿಮತ ಸಂಗ್ರಹಿಸುತ್ತಿದ್ದು , ದೂರವಾಣಿಯ ಕರೆಗೆ ನಮ್ಮ ಮೇಲಿನ ಅಭಿಮಾನ, ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದಾರೆ . ಪಕ್ಷದ ವರಿಷ್ಠರ ಕೈಯನ್ನು ಬಲಪಡಿಸುವ ನಿಟ್ಟಿನಲ್ಲಿ , ಹಾಗೂ ಕಾಂಗ್ರೆಸ್ ಪಕ್ಷದ ತಳಮಟ್ಟದ ಬಲವರ್ಧನೆಗಾಗಿ ಸೇರಿರುವಂತದ್ದು ಅತ್ಯಂತ ಹೆಮ್ಮೆ ಅನಿಸುತ್ತದೆ ಎಂದರು. ಸಂವಿಧಾನದ ಕಾನೂನು ಚೌಕಟ್ಟಿನ ಪ್ರಜಾಪ್ರಭುತ್ವದಲ್ಲಿ , ಭಾರತೀಯ ಪ್ರತಿಯೊಬ್ಬ ನಾಗರೀಕರಿಗೂ ಪ್ರದೇಶ, ಧರ್ಮ, ವರ್ಗ, ಜಾತಿ, ಲಿಂಗ ಎಂಬ ಭೇದ ಭಾವ ಮರೆತು ಮುಕ್ತವಾಗಿ ಮತದಾನ ಮಾಡುವ ಹಕ್ಕು ಇದೆ. ಪ್ರಜಾಪ್ರಭುತ್ವ ಎಂಬುದು ಒಂದು ಸುಂದರ ಪರಿಕಲ್ಪನೆ. ಅಷ್ಟೇ ಅಲ್ಲದೇ, ಅದೊಂದು ಮೌಲ್ಯ. ಹೀಗಾಗಿ, ಪ್ರಜಾಪ್ರಭುತ್ವದಿಂದಾಗಿ. ಎಲ್ಲರೂ ಮುಕ್ತವಾಗಿ ಮತದಾನ ಮಾಡುವುದರಿಂದ ,ರಾಷ್ಟ್ರದ ಏಕತೆ, ಐಕ್ಯತೆ ಮತ್ತು ಸಾರ್ವ ಭೌಮತೆಗಾಗಿ ಶ್ರಮಿಸಲು ಸಾಧ್ಯವಾಗುತ್ತದೆ ಎಂದರು. ಎಐಸಿಸಿ ಕಾರ್ಯದರ್ಶಿಗಳಾದ , ಗೋಪಿನಾಥ ಪಳಣಿಯಪ್ಪ. ಕೆಪಿಸಿಸಿ ಉಪಾಧ್ಯಕ್ಷರು ಮಾನ್ಯ ಮೋಹನ್ ಲಿಂಬಿಕಾಯಿ, ಕೆಪಿಸಿಸಿ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಅಶೋಕ ನಾಯ್ಕ , ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ, ಮಾಜಿ ಜಿ. ಪಂ. ಸದಸ್ಯರು ನರಸಿಂಹಗಿರಿ ಎಸ್. ವೆಂಕಟೇಶ, ಶಶಿಧರಸ್ವಾಮಿ, ಸಮಾಜ ಸೇವಕರಾದ ಎನ್ ಟಿ ತಮ್ಮಣ್ಣ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಗುರುಸಿದ್ದನ ಗೌಡ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ , ಕುಮಾರ್ ಗೌಡ, ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷರಾದ ಬೋಸಣ್ಣ, ಉಪಾಧ್ಯಕ್ಷರಾದ ಮಹಾದೇವಣ್ಣ, ಮುಖಂಡರಾದ ನಾಗರಕಟ್ಟೆ ರಾಜಣ್ಣ, ಕುರಿಹಟ್ಟಿ ಓಬಣ್ಣ , ಸಿದ್ದಪ್ಪಸೂಲದಹಳ್ಳಿ ಶಾಂತನಗೌಡ, ಬುಡ್ಡಾರೆಡ್ಡಿ, ಹಿರೇಕುಂಬಳಗುಂಟೆ ಉಮೇಶ , ಪಟ್ಟಣ ಪಂಚಾಯ್ತಿ , ಗ್ರಾಮ ಪಾಚಾಯ್ತಿ ಸೇರಿದಂತೆ ವಿವಿದ ಜನ ಪ್ರತಿನಿಧಿಗಳು , ತಾಲೂಕಿನ ವಿವಿದೆಡೆಯ ಪಕ್ಷದ ಮುಖಂಡರು, ಕ್ಷೇತ್ರದ ನೂರಾರು ಕಾಂಗ್ರೆಸ್ ಕಾರ್ಯಕರ್ತರು , ಸಾರ್ವಜನಿಕರು ಉಪಸ್ಥಿತರಿದ್ದರು. ಮಹಾತ್ಮ ಗಾಂಧೀ ಚಿತಾಭಸ್ಮ ಸ್ಮಾರಕಕ್ಕೆ ಗೌರವ ಸಮರ್ಪಣೆ ಮಾಡುವ ಮೂಲಕ , ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು , ಪಟ್ಟಣದೆಲ್ಲೆಡೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮಹುಲಕ ಅಭಿಯಾನ ಯಶಸ್ವೀಗೊಳಿಸಿದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Leave a Reply

Your email address will not be published. Required fields are marked *