ಕರೋಕೆ ಟ್ಯಾಕ್ ಹಲವು ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯಾಗಿದೆ: ತಿಪ್ಪೇರುದ್ರಸ್ವಾಮಿ…

ಗಂಗಾವತಿ.04 ಯುವಜಾಗೃತಿ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಕರೋಕೆ ಹಾಡಿನ ಸ್ಪರ್ಧೆಗೆ ಚಾಲನೆ ಕರೋಕೆ ಹಾಡುಗಳ ಟ್ಯಾಕ್ ಜಿಲ್ಲೆಯ ಹಲವು ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯಾಗಿದ್ದು ಈ ಮೂಲಕ ಸಾಧನೆಗೆ ಪ್ರೋತ್ಸಾಹ ದೊರಕುತ್ತಿದೆ ಎಂದು ಬಿಜೆಪಿ ರೈತ ಮುಖಂಡ ಬಿ.ಹೆಚ್.ಎಂ ತಿಪ್ಪೇರುದ್ರಸ್ವಾಮಿ ವಕೀಲರು ಹೇಳಿದರು.ಅವರು ನಗರದ ಆರ್ ಎಸ್,ಸೀಗಿಂಗ್ ಕರೋಕೆ ಸ್ಟುಡಿಯೋದಲ್ಲಿ ಯುವಜಾಗೃತಿ ಪತ್ರಿಕೆ ಯುವಜಾಗೃತಿ ಕನ್ನಡ ಕೋಗಿಲೆ ಕರೋಕೆ ಹಾಡಿನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಹಾಡುಗಾರಿಕೆ ಒಂದು ತಪ್ಪಸಾಗಿದ್ದು ಸತತ ಸಾಧನೆ ಮೂಲಕ ಹಾಡುವುದು ಸಿದ್ದಿಸುತ್ತದೆ. ಕರೋಕೆ ಟ್ಯಾಕ್ ಬಂದ ನಂತರ ಪ್ರತಿ ಗ್ರಾಮ, ನಗರಗಳಲ್ಲಿ ಸ್ಟುಡಿಯೋ ಆರಂಭಿಸಿ ಟ್ಯಾಕ್ ಮೂಲಕ ಹಾಡುವುದನ್ನು ಕಲಿಸಲಾಗುತ್ತಿದೆ. ಕರೋಕೆಕಲಿತ ನಂತರ ಕಲಾವಿದರು. ಇನ್ನೂ ಹೆಚ್ಚಿನ ಸಂಗೀತಾಭ್ಯಾಸ ಮಾಡಿ ಸಂಗೀತ ಕಚೇರಿ ನೀಡುವಷ್ಟು ಸಾಧನೆ ಮಾಡಿದರೆ ರಾಜ್ಯ ಸರಕಾರದ ವಿವಿಧ ಉತ್ಸವಗಳಲ್ಲಿ ಅವಕಾಶ ದೊರಕುತ್ತದೆ. ಕರೋಕೆ ಟ್ಯಾಕ್ ನ್ನು ಬಳಸುವ ಮೂಲಕ ಸಾಧನೆ ಮಾಡುವಂತೆ ಕರೆ ನೀಡಿದರು. ಸಹಕಾರಿ ಸೌಹಾರ್ದ ಒಕ್ಕೂಟದ ರಾಜ್ಯ ನಿರ್ದೇಶಕ ಜಿ.ಶ್ರೀಧರ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕನ್ನಡಪರ ಸಂಘಟನೆಯ ವಿರೂಪಾಕ್ಷಗೌಡ, ಅರ್ಜುನ ನಾಯಕ, ಆನಂದಗೌಡ, ಮಹಾಂತಗೌಡ, ಶಂಕರ ಬಾಳೆಕಾಯಿ, ರಮೇಶ ಪಾಟೀಲ್, ಉಮೇಶ, ವಿಶ್ವನಾಥ, ಅಲ್ಲಾಭಕ್ಷಿ, ದಾನನಗೌಡ ಪೊ.ಪಾಟೀಲ, ಮಾಲೀಕರಾದ ಶಂಭುನಾಥ ದೊಡ್ಡಮನಿ, ಪತ್ರಕರ್ತರಾದ ಶರಣಯ್ಯ ಡಿ. ಕರಡಿಮಠ, ಉದಯಕುಮಾರ, ಹಿರೇಮಠ ಸೇರಿ ಅನೇಕರಿದ್ದರು.

