ಇ.ನಾಗರಾಜ್, ರಮೇಶ್, ಉಮಾಶಂಕರ್, ತಿಮ್ಮನಗೌಡ, ಹೆಚ್ ನಾಗರಾಜ್, ಪರಕಾಯ ಪ್ರವೇಶಮೈಸೂರು ದಸರಾ ಉತ್ಸವದಲ್ಲಿ ರೋಮಾಂಚನಗೊಳಿಸಿದ ಪೌರಾಣಿಕ ನಾಟಕ ರಕ್ತರಾತ್ರಿ…

ಗಂಗಾವತಿ: ಹಗರಿಬೊಮ್ಮನಹಳ್ಳಿ ರಮೇಶ್ ಹಂಚಿನಮನಿ ಮತ್ತು ತಂಡ ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದ ಅಂಗವಾಗಿ ಮೈಸೂರಿನ ಪುರಭವನದಲ್ಲಿ (ಟೌನ್‌ಹಾಲ್‌ನಲ್ಲಿ) ಪ್ರದರ್ಶನ ನೀಡಿದ ಕಂದಗಲ್ಲು ಹನುಮಂತರಾಯರು ರಚಿಸಿದ ರಕ್ತರಾತ್ರಿ ಪೌರಾಣಿಕ ನಾಟಕ ಕಿಕ್ಕಿರಿದು ಸೇರಿದ್ದ ಜನಸ್ತೋಮಕ್ಕೆ ರೋಮಾಂಚನಕಾರಿ ರಸದೌತಣ ಉಣಬಡಿಸಿತು.ಹೆಸರಾಂತ ನಟನಟಿಯರು ಅಭಿನಯಿಸಿದ್ದು ಖ್ಯಾತ ಸಂಗೀತ ನಿರ್ದೇಶಕ ತಿಪ್ಪೆಸ್ವಾಮಿ ಸೂಲದಹಳ್ಳಿ ಇವರ ರಸವತ್ತಾದ ಸಂಗೀತ ದೊಂದಿಗೆ ಡಾ. ರಮೇಶ್ ಹಂಚಿನಮನಿ, ಹಗರಿಬೊಮ್ಮನಹಳ್ಳಿ (ಭೀಮ), ಡಾ.ಡಿ.ಉಮಾಶಂಕರ ವಕೀಲರು, ಹರಗೋಡನಹಳ್ಳಿ (ದುಯೋಧನ), ತಿಮ್ಮನಗೌಡ ಗೆಣಕಿಹಾಳ (ಅಶ್ವತ್ಥಾಮ), ಸಿಜಿಕೆ ರಂಗ ಪ್ರಶಸ್ತಿ ಪುರಸ್ಕೃತ, ಗಂಗಾವತಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಚಿತ್ರನಟ ನಾಗರಾಜ್ ಇಂಗಳಗಿ (ಶಕುನಿ), ನಿವೃತ್ತ ಅಧಿಕಾರಿ ನಾಗರಾಜ್ ಹಿರೇಕುಂಬಳಗುAಟೆ (ಕೃಷ್ಣ) ತಮ್ಮ ಅಸ್ಖಲಿತ ಸಂಭಾಷಣಾ ಶೈಲಿ, ಲೀಲಾಜಾಲ ಅಭಿನಯ, ಹಾವಭಾವ ಭಂಗಿಗಳ ಮುಖೇನ ನೆರೆದವರನ್ನು ಮಂತ್ರಮುಗ್ದಗೊಳಿಸಿದರು.

ಬಿ.ಧನಂಜಯ ಕಣಿವಿನಾಯಕನಹಳ್ಳಿ (ಕರ್ಣ ಮತ್ತು ಗಂಧರ್ವ), ಬಾಲಪ್ಪ ಕಾನಮಡಗು (ಧರ್ಮರಾಜ), ಮಾರುತಿ ಹ್ಯಾಳ್ಯ (ಅರ್ಜುನ). ನಿಚ್ಚನಹಳ್ಳಿ ಭೀಮಪ್ಪ (ಶಿವ), ನರಸಿಂಹ ಅÀರಸಿಕೆರಿ (ಕಲಿ) ಇವರು ಎಂದಿನAತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಸಾವಿರಾರು ಪ್ರದರ್ಶನಗಳ ಮೂಲಕ ರಂಗಭೂಮಿಗಾಗಿ ಜೀವನ ತೇದಿರುವ ನಾಗರತ್ನ ಸೋಗಿ (ದ್ರೌಪದಿ), ದಿವ್ಯಕುಮಾರಿ (ಬಸಂತಿ) ಕೂಡ್ಲಿಗಿ (ಭಾನುಮತಿ), ಜ್ಯೋತಿ ಕೂಡ್ಲಿಗಿ (ಉತ್ತರೆ), ಅನಂಗಪುಷ್ಪ (ಮೌನೇಶ್ ಕಲ್ಲಳ್ಳಿ) ಇವರು ನೃತ್ಯ ಹಾಡುಗಾರಿಕೆ ತಮ್ಮ ವಾಗ್ಝರಿಯ ಮುಖೇನ ನೋಡುಗರ ಮುಚ್ಚುಗೆಗೆ ಪಾತ್ರವಾದರು.

ನಿರಂತರ ರಂಗಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಜೀವಿ ಹಗರಿಬೊಮ್ಮನಹಳ್ಳಿ ಮೋರಿಗೇರಿ ವಿರುಪಾಕ್ಷರಾವ್ ಇವರ ತಬಲ ಸಾತ್ ಎಂದಿನAತೆ ಗಮನ ಸೆಳೆಯಿತು. ವರ್ಷಪೂರ್ತಿ ಪೌರಾಣಿಕ ನಾಟಕಗಳ ಉಳಿವಿಗಾಗಿ ಪ್ರದರ್ಶನ ನೀಡುತ್ತಾ, ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸುತ್ತಾ, ಯುವಕಲಾವಿದರನ್ನು ಬೆಳೆಸುತ್ತಾ ರಾಜ್ಯಕ್ಕೆ ಮಾದರಿಯಾಗಿರುವ ಹಿರಿಯ ಮತ್ತು ಕಿರಿಯ ನಟರು ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜಿದ್ದಿಗೆ ಬಿದ್ದವರಂತೆ ಸಂಭಾಷಣೆ ನುಡಿಸಿ ವೇದಿಕೆಯ ರಂಗು ಹೆಚ್ಚಿಸಿದ್ದು ಮಹಾಭಾರತದ ಕಾಲಘಟ್ಟಕ್ಕೆ ಕರೆದೋಯ್ದಿತ್ತು.

