ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಹಾಗೂ ಪಿಐ ಪ್ರಕಾಶ ಮಾಳಿಯವರಿಗೆ,,! ಜ್ಯೂವೇಲರ್ಸ್ ಮಾಲಕರಿಂದ ಸನ್ಮಾನ,,

ಗಂಗಾವತಿ :23 ನಗರದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾ ದಕ್ಷ ಆಡಳಿತ ನೀಡುತ್ತಿರುವ ಡಿವೈಎಸ್ಪಿ ಸಿಂದಲಿಂಗಪ್ಪಗೌಡ ಪಾಟೀಲ್ ಇವರಿಗೆ ಇತ್ತೀಚಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ರಾಜಭವನದಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಿದ್ದಕ್ಕಾಗಿ ನಮ್ಮ ಸರಫ್ ವರ್ತಕರ ಸಂಘದ ಮಾಲಕರ ವತಿಯಿಂದ ಸನ್ಮಾನಿಸಿ ಗೌರವಿಸಿದ್ದೇವೆ ಎಂದು ಅಧ್ಯಕ್ಷ ನಾಗೇಶ ಕುಮಾರ ಪತ್ತಾರ ಹೇಳಿದರು.ಮತ್ತು ಇನ್ನೋರ್ವ ಪೋಲಿಸ್ ಇಲಾಖೆ ನಗರ ಠಾಣೆಯ ಪಿಐ ಪ್ರಕಾಶ ಮಾಳಿಯವರ ಕರ್ತವ್ಯ ನಿಷ್ಠೆ, ಜನಪರ ಕಾಳಜಿಗೆ ಹಾಗೂ ಅತಿ ಸೂಕ್ಷ್ಮ ಪ್ರದೇಶವಾದ ಗಂಗಾವತಿಯಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ವೇಳೆ ಯಾವುದೇ ಕೋಮು ಗಲಭೆಗೆ ಅವಕಾಶ ನೀಡದಂತೆ, ಶಾಂತಿ ಸಭೆಗಳನ್ನು ಆಯೋಜಿಸಿ ಅತಿ ಅಚ್ಚುಕಟ್ಟಾಗಿ ಕಾರ್ಯಭಾರ ಮಾಡಿದ್ದು, ಎಲ್ಲಾ ಸಮುದಾಯಗಳನ್ನೊಳಗೊಂಡು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದು ಇವರ ಕಾರ್ಯ ವೈಖರಿ ಎಲ್ಲೆಡೆ ಮೆಚ್ಚುಗೆಯಾಗಿದೆ ಇಂತಹ ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ನಡೆಸುವವರು ನಗರದಲ್ಲಿದ್ದರೇ ಸಮಸ್ತ ಜನತೆ ಯಾವುದೇ ಭಯ ಪಡದೇ ನಿರ್ಭಯದಿಂದ ಜೀವನ ಸಾಗಿಸಬಹುದು ಎಂದು ಹೇಳಿದರು.ನಂತರ ಡಿವೈಎಸ್ಪಿ ಸಿಂದಲಿಂಗಪ್ಪಗೌಡ ಪಾಟೀಲ್ ಮಾತನಾಡಿ ನಗರದ ಜನತೆ ನಮ್ಮ ಮೇಲೆ ಇಟ್ಟಿರುವ ಅಭಿಮಾನ ಹಾಗೂ ಗೌರವಕ್ಕೆ ಧನ್ಯವಾದಗಳು ಎಂದು ತಿಳಿಸಿದ ಅವರು ಸಮಾಜದಲ್ಲಿ ನಮ್ಮ ಪೋಲಿಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಇರಬೇಕು. ಕೇವಲ ಒಂದು ಕೈಯಿಂದ ಎಂದಿಗೂ ಚಪ್ಪಾಳೆ ಬಾರದು. ಕಾನೂನಿಗೆ ಎಲ್ಲರೂ ಬೆಲೆ ಕೊಟ್ಟು ಕಾನೂನಿನಡಿಯಲ್ಲಿ ಕರ್ತವ್ಯ ನಿರ್ವಹಿಸಿದಾಗ ನಮಗೂ ಕೂಡಾ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ.ಪ್ರತಿಯೊಬ್ಬರೂ ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಬೆಲೆ ಕೊಟ್ಟು, ಪ್ರಾಮಾಣಿಕತೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು, ಸಮಾಜದಲ್ಲಿ ಕೊಲೆ, ಸುಲುಗೆ, ದರೋಡೆ, ಜಾತಿ ಕಂದಾಚಾರ ತೊಲಗಬೇಕು. ಕೋಮು ಗಲಭೆಗೆ ಅವಕಾಶ ನೀಡದಂತೆ ಸಹೋದರತೆಯಿಂದ ಜೀವನ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕಿವಿ ಮಾತನ್ನು ಹೇಳಿದರು.ಇನ್ನೂ ವರ್ತಕರು ತಮ್ಮ ಅಂಗಡಿಗಳಲ್ಲಿ ಯಾವಾಗಲೂ ಜಾಗರೂಕರಾಗಿರಬೇಕು, ಅಂಗಡಿಯ ಸುತ್ತ ಮುತ್ತ ಪ್ರತಿನಿತ್ಯ ಓಡಾಡುವ ಜನರ ಮೇಲೆ ಸದಾ ನಿಗಾ ವಹಿಸಬೇಕು, ವ್ಯಾಪಾರ ಸಂದರ್ಭಗಳಲ್ಲಿ ಮೈಎಲ್ಲಾ ಕಣ್ಣಾಗಿ ವ್ಯಾಪಾರ ನಡೆಸಬೇಕು ಹಾಗೂ ಪ್ರತಿಯೊಂದು ಅಂಗಡಿ ಮಾಲಕರು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ತಮ್ಮ ಅಂಗಡಿಗಳ ಬಗ್ಗೆ ಮೊದಲು ಜಾಗೃತರಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜ್ಯೂವೆಲರ್ಸ್ ಅಂಗಡಿಗಳ ಮಾಲಕರಾದ ಸುಬ್ರಮಣ್ಯ ರಾಯ್ಕರ್, ಅಶೋಕ, ಪ್ರಕಾಶ, ರಮೇಶ, ಖಾಜಾವಲಿ, ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.

