ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಾಜ ಗೋಪುರ ನಿರ್ಮಾಣಕ್ಕೆ ಅಧ್ಯಕ್ಷ ದರೋಜಿ ನಾಗರಾಜ್ ಶೆಟ್ಟಿ, ಭೂಮಿ ಪೂಜೆ.

ಗಂಗಾವತಿ… ಹಿರೇ ಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಾಜ ಗೋಪುರ ನಿರ್ಮಾಣಕ್ಕಾಗಿ ವರಮಹಾಲಕ್ಷ್ಮಿ ಶುಭ ದಿನವಾದ ಶುಕ್ರವಾರ ದಿನದಂದು ಸಮಾಜದ ಅಧ್ಯಕ್ಷ. ದರೋಜಿ ನಾಗರಾಜ್ ಶೆಟ್ಟಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.. ಬಳಿಕ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ದರೋಜಿ ಮಾತನಾಡಿ ಸಮಾಜ ಬಾಂಧವರ ಸರ್ವ ಸಹಕಾರದಿಂದ ಈಗಾಗಲೇ ದೇವಸ್ಥಾನದ ಪೂರ್ವ ಭಾಗದಲ್ಲಿ ರಾಜಗೋಪುರ ನಿರ್ಮಾಣದ ಕಾರ್ಯ ಬಹುತೇಕ ಸಂಪೂರ್ಣಗೊಂಡಿದ್ದು ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ಬೃಹತ್ ರಾಜಗೋಪುರ ನಿರ್ಮಾಣಕ್ಕೆ ಶ್ರಾವಣ ಮಾಸದ ಅತ್ಯಂತ ಶುಭ ದಿನವಾದ ಇಂದು ಚಾಲನೆ ನೀಡುತ್ತಿರುವುದು ಸಂತಸದಾಯಕವಾಗಿದೆ ಸದರಿ ದೇವಸ್ಥಾನದಲ್ಲಿ ಹಲವು ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಶಕ್ತಿಪೀಠ ವಾಗಿ ಭಕ್ತರ ಇಷ್ಟಾರ್ಥಗಳನ್ನು ಅನುಗ್ರಹಿಸುವ ಕುಲದೇವತೆ ಯಾಗಿದ್ದಾರೆ ಎಂದು ತಿಳಿಸಿದರು. ನಗರಸಭೆಯ ಮಾಜಿ ಅಧ್ಯಕ್ಷ ಸಮಾಜದ ಮುಖಂಡ ರಾಘವೇಂದ್ರ ಶೆಟ್ಟಿ ಮಾತನಾಡಿ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಅಧ್ಯಕ್ಷತೆಯಲ್ಲಿ ಸಮಾಜ ಬಾಂಧವರು ಸಂಘಟಿತರಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಧಾರ್ಮಿಕತೆ ಮನೋಭಾವನೆ ಬೆಳೆಸಿಕೊಳ್ಳುವಲ್ಲಿ ಸಫಲತೆ ಹೊಂದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಅವಧೂತ್ ಭಟ್ ಭೂಮಿ ಪೂಜೆಯ ಪೂಜಾ ಕಾರ್ಯಕ್ರಮಗಳನ್ನು ನೆರೆವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಅವಧೂತ್ ಭಟ್ ಭೂಮಿ ಪೂಜೆಯ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು ವಾಸವಿ ಯುವಜನ ಸಂಘ ಹಾಗೂ ನವ ವೃಂದಾವನ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು

