ಗಂಗಾವತಿಯಲ್ಲಿ ಪತ್ರಿಕಾ ದಿನಾಚರಣೆ: ಗ್ರಂಥಾಲಯ ಲೋಕಾರ್ಪಣೆ ಪತ್ರಕರ್ತರ ಸಮಸ್ಯೆ, ಸವಾಲು ಹತ್ತಿರದಿಂದ ಬಲ್ಲೆ: ಶಾಸಕ ಗಾಲಿ ಜನಾರ್ದನ್ ರೆಡ್ಡಿ…

ಗಂಗಾವತಿಯಲ್ಲಿ ಪತ್ರಿಕಾ ದಿನಾಚರಣೆ: ಗ್ರಂಥಾಲಯ ಲೋಕಾರ್ಪಣೆಪತ್ರಕರ್ತರ ಸಮಸ್ಯೆ, ಸವಾಲು ಹತ್ತಿರದಿಂದ ಬಲ್ಲೆ: ಶಾಸಕ ರೆಡ್ಡಿ ನಾನು ಈಗ ಅಂದರೆ ಕಳೆದ ಒಂದವರೆ ದಶಕದಿಂದ ರಾಜಕಾರಣಿಯಾಗಿರಬಹುದು. ಆದರೆ ಅದಕ್ಕೂ ಮುನ್ನ ಒಂದುವರೆ ದಶಕದಷ್ಟು ಕಾಲ ಪತ್ರಿಕೆಯನ್ನು ಕಟ್ಟಿ, ಸಂಪಾದಕನಾಗಿ ಅದನ್ನು ಮುನ್ನಡೆಸಿದ ಅನುಭವ ಇದೆ. ಪತ್ರಕರ್ತರ ಸಮಸ್ಯೆ- ಸವಾಲುಗಳನ್ನು ಹತ್ತಿರದಿಂದ ಬಲ್ಲೆ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಪತ್ರಕರ್ತರ ಸಂಘದ ನೂತನ ಗ್ರಂಥಾಲಯಕ್ಕೆ ಭಾನುವಾರ ಚಾಲನೆ ನೀಡಿದರು. ಬಳಿಕ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಮೂರು ದಶಕಗಳ ಹಿಂದೆ ಪತ್ರಿಕೆಯನ್ನು ಕಟ್ಟಿದಾಗ ಆಗಲೆ ಮಲ್ಟಿಕಲರ್ ಪೇಜ್ ಪ್ರಿಂಟಿಂಗ್ ಇತ್ತು. ಸುತ್ತಲಿನ ನಾಲ್ಕಾರು, ಜಿಲ್ಲೆಯಲ್ಲಿ ಪ್ರಸಾರ ಸಂಖ್ಯೆ ಹೊಂದಿತ್ತು. ಸಂಗಾವತಿಗೆ ಆಗಿನ ಕಾಲಕ್ಕೆ ಎನ್ನೂರು ಪತ್ರಿಕೆ ಬರುತ್ತಿದ್ದವು. ಈಗ ರಾಜ್ಯಮಟ್ಟದ ಪತ್ರಿಕೆಯೂ ಅಷ್ಟು ಪ್ರಸಾರ ಸಂಖ್ಯೆ ಹೊಂದಿಲ್ಲ ಎಂದರು.ಪತ್ರಕರ್ತನಾಗಿ ಕೆಲಸ ಮಾಡುವುದು ಈ ಹಿಂದೆ ಇದ್ದಷ್ಟು ಸುಲಭ ಈಗಿಲ್ಲ. ಆದರೆ ನೈಜ ಪತ್ರಕರ್ತ ಸಮಾಜವನ್ನು ತಿದ್ದುವ, ನಮ್ಮನ್ನ, ಹರಿದಾರಿಗೆ ನಡೆಸುವ, ನಾವು ದಾರಿತಪ್ಪಿದಾಗ ಬರವಣಿಗೆ ಮೂಲಕ ಚಾಟಿ ಬೀಸುವಂತ ಕೆಲಸ ಮಾಡುತ್ತಾರೆ.

ಕೆಲ ಪತ್ರಕರ್ತರು ರಾಜಕಾರಣಿಗಳಲ್ಲಿಯೇ ಗೊಂದಲ ಸೃಷ್ಟಿಸುವ ಸುದ್ದಿಗಳನ್ನು ಬರೆದು ಮಜಾ ನೋಡುವುದು, ಶಾಸಕ, ಸಚಿವರು, ಸಂಸದರು ಅವರಾಗಿಯೇ ಪ್ರತಿಕ್ರಿಯೆ ನೀಡಲಿ ಎಂಬ ಕಾರಣಕ್ಕೆ ಕೆಲ ಪತ್ರಕರ್ತರು ಬರೆಯುವುದುಂಟು. ಏನೇ ಆಗಲಿ ಉತ್ತಮ ಸಮಾಜ’ ನಿರ್ಮಾಣಕ್ಕೆ ಉತ್ತಮ ಬರವಣಿಗೆ ಪತ್ರಕರ್ತರಿಂದ ಆಗಲಿ ಎಂದರು.ಮುಂದಿನ ಕೆಲ ತಿಂಗಳಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನಾನು ವೈಯಕ್ತಿಕವಾಗಿ ಉತ್ತಮವಾದ ಶಾಶ್ವತ ನಿಧಿ ಠೇವಣೆ ರೂಪದಲ್ಲಿ ಇಡುತ್ತೇನೆ. ಈ ಹಿಂದೆ ನನ್ನ ಅವಧಿಯಲ್ಲಿ ಬಳ್ಳಾರಿಯಲ್ಲಿ ಪತ್ರಕರ್ತರಿಗೆ ನೀಡಿದಂತೆ ನಗರದಲ್ಲೂ ಉತ್ತಮ ಪ್ರದೇಶದಲ್ಲಿ ಪತ್ರಕರ್ತರಿಗೆ ಮಾನದಂಡ ಆಧಾರಿಸಿ ವಿವೇಶನ ಒದಗಿಸಿಕೊಡಲಾಗುವುದು ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತ ಎಂದರೆ ಜ್ಞಾನದ ಸಂಕೇತ. ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಪತ್ರಿಕಾಭವನಗಳಿವೆ. ಆದರೆ ಎಲ್ಲಿಯೂ ಗ್ರಂಥಾಲಯ ಇಲ್ಲ. ಪತ್ರಕರ್ತರಿಗೆ ಪುಸ್ತಕ ಮತ್ತು ಓದುಗಳೇ ಸಂಗಾತಿಗಳು.ಗ್ರಂಥಾಲಯ ನಿರ್ಮಾಣದ ಮೂಲಕ ಗಂಗಾವತಿ ಪತ್ರಕರ್ತರು ಇಡೀ ರಾಜ್ಯದಲ್ಲಿ ಮಾದರಿ ಕೆಲಸಕ್ಕೆ ಕೈಹಾಕಿದ್ದಾರೆ. ರಾಜ್ಯದ ಬಹುತೇಕ ಯಾವ ಜಿಲ್ಲೆಯಲ್ಲೂ ಗ್ರಂಥಾಲಯ ಇಲ್ಲ ಎಂದು ಗಂಗಾವತಿ ತಾಲ್ಲೂಕು ಘಟಕದ ಕಾರ್ಯವನ್ನು ತಗಡೂರು ಶ್ಲಾಘಿಸಿದರು.ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಉದ್ಯಮಿ ಜೋಗದ ನಾರಾಯಣಪ್ಪ ನಾಯಕ್ ಮಾತನಾಡಿದರು. ತಾಲ್ಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ ಹನುಮಂತ ಹಳ್ಳಿಕೇರಿ, ಜಿಲ್ಲಾ ಕಾರ್ಯದರ್ಶಿ ವೈ, ನಾಗರಾಜ್, ತಾಲ್ಲೂಕು ಕಾರ್ಯದರ್ಶಿ ದೇವರಾಜ್ ಇದ್ದರು.ಪತ್ರಿಕಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತವಾದ ಹಿರಿಯ ಪತ್ರಕರ್ತರ ವೀರಾಪುರ ಕೃಷ್ಣ ನೇತೃತ್ವದ ತಂಡಕ್ಕೆ ಇದೇ ಸಂದರ್ಭದಲ್ಲಿ ವಿನ್ನರ್ ಕಪ್, ಹಾಗೂ ಶ್ರೀನಿವಾಸ ಎಂ.ಜೆ ನೇತೃತ್ವದ ತಂಡಕ್ಕೆ ರನ್ನರ್ ಕಟ್ ಹಾಗೂ ಬಾಳಪ್ಪ ನೇತೃತ್ವದಲ್ಲಿನ ತಾಲ್ಲೂಕು ಪಂಚಾಯಿತಿ ನೌಕರರ ತಂಡಕ್ಕೆ ಮೂರನೇ ಬಹುಮಾನ ನೀಡಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ವಿಶ್ವನಾಥ ಬೆಳಗಲ್ ಮಠ, ವೃಷಬೇಂದ್ರ ಸ್ವಾಮಿ, ಚಂದ್ರಶೇಖರ್ ಮುಕ್ಕುಂದಿ, ಮಂಜುನಾಥ ಹೊಸಕೇರಿ, ಮಂಜುನಾಥ ಗುಡ್ಲಾನೂರು, ಗಾದಿನಾಯಕ್, ಸುದರ್ಶನ ವೈದ್ಯ, ಟಾಕಪ್ಪ, ವಿಶ್ವಕರ್ಮ, ಮಲ್ಲಿಕಾರ್ಜುನ ಗೋಟೂರು, ಹರೀಶ್ ಕುಲಕರ್ಣಿ, ವಸಂತ, ದಶರಥ, ದಿವಾಕರ, ರಮೇಶ ಜೋಗಿನ್ ಇತರರ ಇದ್ದರು.

Leave a Reply

Your email address will not be published. Required fields are marked *