ಕ್ರಿಯೇಟಿವ್ ಇಂಜಿನಿಯರ್ಸ್ ಹೆಚ್ ಆರ್ ಸೆಲೆಕ್ಷನ್ಸ್ ನೇತೃತ್ವದಲ್ಲಿ ಉದ್ಯೋಗ ಮೇಳ. ಬಡತನ ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳ ಪೂರಕ.. ಚನ್ನಬಸಯ್ಯಸ್ವಾಮಿ

ಗಂಗಾವತಿ. ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರದಂದು ಕ್ರಿಯೇಟಿವ್ಸ್ ಇಂಜಿನಿಯರ್ಸ್ ಎಚ್ ಆರ್ ಸೆಲೆಕ್ಷನ್ ನೇತೃತ್ವದಲ್ಲಿ ಉದ್ಯೋಗ ಮೇಳ ಆಯೋಜಿಸಲಾಯಿತು. ಸದರಿ ಮೇಳವನ್ನು ಸಂಘದ ಉಪಾಧ್ಯಕ್ಷ ಚನ್ನಬಸಯ್ಯ ಸ್ವಾಮಿ ಪ್ರಾಚಾರ್ಯ ಬಸವರಾಜ್. ಹಾಗೂ ಸೆಲೆಕ್ಷನ್ ಕಮಿಟಿಯ ಸಾಗರ್ ಚನ್ನಬಸವ ಸ್ವಾಮಿ ಮಹಾವಿದ್ಯಾಲಯದ ಕೆಎಂ ಬಸವರಾಜ್ ಇತರರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. ಮೇಳವನ್ನು ಉದ್ಘಾಟಿಸಿ ಮಾತನಾಡಿದ ಚನ್ನಬಸಯ್ಯಸ್ವಾಮಿ ಅವರು ಕಳೆದ ಹಲವು ದಶಕಗಳ ಹಿಂದೆ ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾವಂತ ವ್ಯಕ್ತಿಗಳಿಗೆ ಉದ್ಯೋಗ ಕಲ್ಪಿಸುವ ವಿಪುಲ ಅವಕಾಶ ಮನೆ ಬಾಗಿಲಿಗೆ ಬರುತ್ತಿರುವುದು ಸಂತಸದಾಯಕ ಇಂತಹ ಅವಕಾಶಗಳನ್ನು ಪದವೀಧರರು ಅರ್ಹತೆ ಹೊಂದಿದವರು ಪಡೆದುಕೊಳ್ಳಲು ಮುಂದಾಗಬೇಕೆಂದು ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಬಸವರಾಜ್ ಮಾತನಾಡಿ ಪ್ರಸ್ತುತ ಸೆಲೆಕ್ಷನ್ ಕಮಿಟಿಗೆ 30000 ಅಧಿಕ ಹುದ್ದೆ ಅವಕಾಶವನ್ನು ಹೊಂದಿದ್ದು ಸಾಧ್ಯವಾದಷ್ಟು ಎಲ್ಲಾ ಕಾಲೇಜುಗಳಿಗೆ ಮಾಹಿತಿ ಒದಗಿಸಲಾಗಿದೆ. ದೇಶದ ಮಹತ್ವ ಕಂಪನಿಗಳಾದ ಟಾಟಾ ಕಂಪನಿ ಸೇರಿದಂತೆ 30ಕ್ಕೂ ಅಧಿಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಸೆಲೆಕ್ಷನ್ ಕಮಿಟಿ ಆಯೋಜಕರಾದ ಸಾಗರ ಹಾಗೂ ರಾಮಕೃಷ್ಣ ಅವರು ಪ್ರಾಜೆಕ್ಟ್ ಮೂಲಕ ಸಮಗ್ರ ಮಾಹಿತಿ ನೀಡಿ ಸ್ಥಳದಲ್ಲಿ ಪರೀಕ್ಷೆ ನಡೆಸಿ ನೇಮಕಾತಿ ನೀಡುತ್ತಿರುವುದು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು ಸಂಘದ ಎರಡು ಮಹಾವಿದ್ಯಾಲಯಗಳ ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.

