ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು…. ರಾಘವೇಂದ್ರ ಶೆಟ್ಟಿ

ಗಂಗಾವತಿ. ಐತಿಹಾಸಿಕ ಹಿನ್ನೆಲೆ ಹೊಂದಿರುವ ವಿಜಯನಗರ ಸಾಮ್ರಾಜ್ಯ ಹಾಗೂ ಆನೆಗುಂದಿ ಸಂಸ್ಥಾನದ ಎರಡನೆಯ ಪ್ರೌಢದೇವರಾಯ ಕಾಲದಲ್ಲಿ ನಿರ್ಮಾಣಗೊಂಡಿರುವ ಹಿರೇ ಜಂತಕಲ್ ಶ್ರೀ ಪ್ರಸನ್ನ ಪಂಪ ವಿರೂಪಾಕ್ಷೇಶ್ವರ ಮಹಾ ರಥೋತ್ಸವ ದಿನಾಂಕ 25.01.2026 ರಂದು ರವಿವಾರದಂದು ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸುವುದರ ಮೂಲಕ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡಿರುವ ನಗರಸಭೆಯ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹೇಳಿದರು. ಅವರು ದೇವಸ್ಥಾನದ ದಾಸೋಹ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಳಿಗ್ಗೆ ಮಡಿ ತೇರು ಸಂಜೆ 5:00 ಗಂಟೆಗೆ ಮಹಾರಥೋತ್ಸವ ಜಗದಲಿದ್ದು ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಮಾಜಿ ಸಂಸದ ಹೆಚ್ ಜಿ ರಾಮುಲು ಜಿ ಆರ್ ಎಸ್ ಸ್ವೀಟ್ ಹಾಗೂ ಗಾಣಿಗ ಸಮಾಜ ಬಾಂಧವರಿಂದ ಅನ್ನ ಸಂತರ್ಪಣೆ ಜರಗಲಿದ್ದು ಮೂರು ದಿನಗಳ ಕಾಲ ಸಂಜೆ 7 ಗಂಟೆಯಿಂದ ಪ್ರತಿ ಕಾಮಿಡಿ ಕಿಲಾಡಿಗಳು. ಕರ್ನಾಟಕ ಗಾನಕೋಗಿಲೆ. ಮಜಾ ಭಾರತ ತಂಡ ಸೇರಿದಂತೆ ನಾಡಿನ ಹಾಗೂ ಸ್ಥಳೀಯ ಕಲಾವಿದರಿಂದ ಹಲವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಇನ್ನೋರ್ವ ಮುಖಂಡ ಪರಮೇಶ್ ಈಡಿಗ ಮಾತನಾಡಿ. ರವಿವಾರದಂದು ಬೆಳಿಗ್ಗೆ ಶ್ರೀ ವಿರುಪಾಕ್ಷೇಶ್ವರ ಸೇರಿದಂತೆ ಪರಿವಾರ ದೇವರುಗಳಿಗೆ ಜಲಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟಾವಧಾನ ಸೇವೆ ಹೂವಿನ ಅಲಂಕಾರ. ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವದ ಅಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಜಜ್ಜಕಲ್ ಗ್ರಾಮದ ಮುಖಂಡರಾದ ಅಮಾತೆಪ್ಪ. ಗಂಜಿಪೇಟೆ ವಿಶ್ವನಾಥ್ ಬಸವರಾಜ ಕೋರಿ ಬಸವರಾಜ ಅಂಗಡಿ ನಾಗರಾಜ್ ಶ್ರೀದೇವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *