ಆನೆಗೊಂದಿ ಸುತ್ತಲಿನ 483 ಎಕರೆ ಭೂಮಿ ಪ್ರದೇಶ ಮೀಸಲು ಅರಣ್ಯ ದಿಂದ ಕೈಬಿಡುವಂತೆ ಸಚಿವ.ಸಿಎಂ ಹಾಗೂ ಜನಪ್ರತಿನಿಧಿಗಳ ಬಳಿಗೆ ನಿಯೋಗ: ಮಾಜಿ ಶಾಸಕ ಪರಣ್ಣ ಮುನವಳ್ಳಿ…

ಆನೆಗೊಂದಿ ಸುತ್ತಲಿನ 483 ಎಕರೆ ಭೂಮಿ ಪ್ರದೇಶ ಮೀಸಲು ಅರಣ್ಯ ದಿಂದ ಕೈಬಿಡುವಂತೆ ಸಚಿವ.ಸಿಎಂ ಹಾಗೂ ಜನಪ್ರತಿನಿಧಿಗಳ ಬಳಿಗೆ ನಿಯೋಗ: ಮಾಜಿ ಶಾಸಕ ಪರಣ್ಣ ಮುನವಳ್ಳಿ…

ಗಂಗಾವತಿ: ತಾಲೂಕಿನ ಐತಿಹಾಸಿಕ ಆನೆಗೊಂದಿ ಹಾಗೂ ಕಿಷ್ಕಿಂಧ ಅಂಜನಾದ್ರಿ ಪ್ರದೇಶದಲ್ಲಿರುವ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯ ಮಾಡುವ ಪ್ರಸ್ತಾಪ ಸರಿಯಲ್ಲ. ಸರ್ಕಾರ ಕೂಡಲೇ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ದಿಡ್ಡಹಳ್ಳಿ ಮಾದರಿಯಲ್ಲಿಜನರ ಜತೆ ಸೇರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಆನೆಗೊಂದಿ ರಾಜಮನೆತನದ ಲಲಿತರಾಣಿ ಶ್ರೀರಂಗದೇವರಾಯಲು ಸರಕಾರವನ್ನು ಒತ್ತಾಯಿಸಿದರು.ಅವರು ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿ ಆನೆಗೊಂದಿ ಗ್ರಾ.ಪಂ. ವತಿಯಿಂದ ಮೀಸಲು ಅರಣ್ಯ ಘೋಷಣೆ ಜನಾಭಿಪ್ರಾಯ ಸಂಗ್ರಹಿಸುವ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ವೇ ನಂಬರ್ 112, 136 ಸೇರಿ ಸುತ್ತಲಿಮನ ಪ್ರದೇಶದ ಸುಮಾರು 483 ಎಕರೆ ಪ್ರದೇಶವನ್ನು 1975ರ ಮೀಸಲು ಅರಣ್ಯ ಕಾಯ್ದೆ ಅನ್ವಯ ಘೊಷಣೆ ಮಾಡಲು ಸರ್ಕಾರ ಬಳ್ಳಾರಿ ವಲಯ ಅರಣ್ಯ ಇಲಾಖೆ ಆಯುಕ್ತರ ಮೂಲಕ ನೋಟೀಸ್ ಜಾರಿ ಮಾಡಿ ಆಕ್ಷೇಪ ಆಹ್ವಾನಿಸಿದ್ದು ಗ್ರಾ.ಪಂ. ಆನೆಗೊಂದಿ ಹಾಗೂ ಈ ವ್ಯಾಪ್ತಿಯ ರೈತರು ಹಾಗೂ ಲಕ್ಷ್ಮಿಪೂರ-ಚಿಕ್ಕರಾಂಪೂರ ಗ್ರಾಮದ 156 ಕ್ಕೂ ಹೆಚ್ಚು ಕುಟುಂಬದವರು 90 ದಿನಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪ ಸಲ್ಲಿಸಬೇಕು.ಇದಕ್ಕೂ ಅರಣ್ಯ ಇಲಾಖೆ ಮಣಿಯದಿದ್ದರೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಗಾಲಿ ಜನಾರ್ದನರೆಡ್ಡಿ ಸೇರಿ ಮಾಜಿ ಹಾಲಿ ಜನಪ್ರತಿನಿಗಳೊಂದಿಗೆ ಚರ್ಚೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿ ನೂರಾರು ವರ್ಷಗಳಿಂದ ಇರುವ ಗ್ರಾಮಗಳು ಹಾಗೂ ರೈತರ ಭೂಮಿಯನ್ನು ಹೊರತುಪಡಿಸಿ ಕಂದಾಯ ಭೂಮಿಯಲ್ಲಿ ಮೀಸಲು ಅರಣ್ಯ ಘೋಷಣೆ ಮಾಡುವಂತೆ ಮನವಿ ಮಾಡಲಾಗುತ್ತದೆ. ಬೇಡಿಕೆ ಪೂರೈಸದಿದ್ದರೆ ಆನೆಗೊಂದಿ ಹಳೆಯ ಮಂಡಲದ ನಾಲ್ಕು ಗ್ರಾ.ಪಂ. ವ್ಯಾಪ್ತಿಯ ಜನರೊಂದಿಗೆ ಹೋರಾಟ ನಡೆಸಲಾಗುತ್ತದೆ. ಕಳೆದ ನೂರಾರು ವರ್ಷಗಳಿಂದ ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು ಮೀಸಲು ಅರಣ್ಯ ಘೋಷಣೆಯಿಂದ ಕೈ ಬಿಡಬೇಕು. ಈಗಾಗಲೇ ಗ್ರಾಮಗಳಲ್ಲಿ ಹಲವು ದಶಕಗಳಿಂದ ಕುಡಿಯುವ ನೀರು, ಬೀದಿದೀಪ, ಶಾಲೆಗಳು, ಸಮುದಾಯ ಭವನಗಳು, ಅಂಗನವಾಡಿ ಕೇಂದ್ರಗಳು, ಸರಕಾರ ಮಂಜೂರಿ ಮಾಡಿದ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು ಗ್ರಾ.ಪಂ.ಗೆ ಜನರು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದ್ದರಿಂದ ಸರಕಾರ ಇಲ್ಲಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಬೇರಡೆ ಭೂಮಿ ನೋಟಿಫೈಯ್ ಮಾಡಬೇಕೆಂದರು.ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಯ್ಯ ಮಾತನಾಡಿ, ಮೀಸಲು ಅರಣ್ಯ ಪ್ರದೇಶ ಘೋಷಣೆಯಿಂದ ಕಿಷ್ಕಿಂಧಾ ಅಂಜನಾದ್ರಿ ಅಭಿವೃದ್ಧಿಗೆ ಮಾರಕವಾಗಲಿದ್ದು ಅರಣ್ಯ ಇಲಾಖೆ ಸಚಿವರು ಮತ್ತು ಸಿಎಂ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಸರಕಾರಕ್ಕೆ ಮನವರಿಕೆ ಮಾಡಿ ಬೇರೆಡೆ ಮೀಸಲು ಅರಣ್ಯ ಘೋಷಣೆ ಮಾಅಡಬೇಕು. ಹಲವು ದಶಕಗಳಿಂದ ಆನೆಗೊಂದಿ ಭಾಗದ ಅಭಿವೃದ್ಧಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಪೂರಕವಾಗಿ ಸ್ಪಂದನೆ ನೀಡದೇ ಜನಸಾಮಾನ್ಯರಿಗೆ ಕಿರುಕುಳ ಕೊಡುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ, ಒಂದು ವೇಳೆ ಸರಕಾರ ಮೀಸಲು ಅರಣ್ಯ ಘೋಷಣೆ ಮಾಡಿದರೆ ಈ ಭಾಗದ ಅಭಿವೃದ್ಧಿ ಕಾರ್ಯಕ್ಕೆ ಕೊಡಲೆ ಪೆಟ್ಟು ಬೀಳಲಿದ್ದು ಜನರ ಜತೆ ಸೇರಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು. ನ್ಯಾಯವಾದಿ ಎಚ್.ಸಿ.ಯಾದವ್ ಮಾತನಾಡಿ, ಮೀಸಲು ಅರಣ್ಯ ಘೋಷಣೆಯಿಂದ ಇಡೀ ಆನೆಗೊಂದಿ ಪ್ರದೇಶದ ಅಭಿವೃದ್ಧಿ ಶೂನ್ಯವಾಗಲಿದ್ದು ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಸರಕಾರದ ಗಮನಕ್ಕೆ ತಂದು ಆಕ್ಷೇಪ ಸಲ್ಲಿಸಬೇಕು.

ಹಾಲಿ ಮಾಜಿ ಜನಪ್ರತಿನಿಧಿಗಳು ಜನರ ನೆರವಿಗೆ ಬರಬೇಕು. ಕಿಷ್ಕಿಂಧಾ ಅಂಜನಾದ್ರಿಯ ಅಭಿವೃದ್ಧಿಗೆ ಮೀಸಲು ಅರಣ್ಯ ಘೋಷಣೆ ಮಾರಕವಾಗಲಿದೆ. ಜನರು ಹೋರಾಟಕ್ಕೆ ಸಿದ್ಧರಾಗಬೇಕೆಂದರು. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಮಾಜಿ ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ, ಪಿಡಿಓ ಮನೋರಮ್ಮ, ಎಸ್ ಡಿಸಿ ಶಬ್ಬಿರ್, ಗ್ರಾ.ಪಂ.ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ, ಸುಶೀಲಮ್ಮ, ಗಾಳೆಮ್ಮ, ಪ್ರವೀಣ, ಕಾಶಿರಾವ್, ಪೋಲು ನಾಯಕ್, ಮಾಜಿ ಸದಸ್ಯರಾದ ಲಕ್ಷ್ಮಿನಾರಾಯಣ, ಮುಖಂಡರಾದ ಚಿತ್ರನಟ ವಿಷ್ಣುಜೋಶಿ, ಪಿ.ಲಕ್ಷ್ಮಣ್ ನಾಯಕ್, ಗಾಳೆಪ್ಪ, ಈರಣ್ಣ, ನಿಂಗಜ್ಜ, ಬಸವರಾಜ, ರಾಘವೇಂದ್ರ, ಅಡಿವೆಪ್ಪ, ನೀಲಪ್ಪ, ಮಂಜುನಾಥ, ತಿಪ್ಪಮ್ಮ, ಕೀರಮ್ಮ, ಲಕ್ಷ್ಮಿದೇವಿ, ವಿರೇಶ ಹನುಮನಹಳ್ಳಿ, ಜಂಗ್ಲಿ ಲಕ್ಷ್ಮಣ, ವಿರೂಪಾಕ್ಷಿ, ವಿರೇಶ, ವೆಂಕಟರಾಮು, ವೆಂಕಟೇಶ,ಪರಂಧಾಮಸ್ವಾಮಿ, ಅಂಜಿಪ್ಪ, ಕೊಟ್ರೇಶ, ಕಲ್ಲಯ್ಯಸ್ವಾಮಿ, ನಿಂಗಪ್ಪ, ಟಿ.ಚಂದ್ರ, ಮೆಟ್ರಿ ನಾಗಪ್ಪ, ಕುರುಬರ ಅಂಜಿನಪ್ಪ ಸೇರಿ ಗ್ರಾಮಸ್ಥರಿದ್ದರು.ಚಿಕ್ಕರಾಂಪೂರದಲ್ಲಿ ಮೀಸಲು ಅರಣ್ಯ ಘೊಷಣೆ ಗ್ರಾಮಸಭೆಯಲ್ಲಿ ಮುನವಳ್ಳಿ ಮಾತನಾಡಿದರು.ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *