ಗಂಗಾವತಿಯಿಂದ ಹುಲಿಗಿ ಹೋಗುವ ಸಾರಿಗೆ ಬಸ್ ಅಪಘಾತ ಮಹಿಳೆಗೆ ಗಾಯ….

ಗಂಗಾವತಿಯಿಂದ ಹುಲಿಗೆ ಹೋಗುತ್ತಿದ್ದ ಸಾರಿಗೆ ಇಲಾಖೆಯ ವಾಹನವೊಂದು ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಅಂಜನಾದ್ರಿ ಬೆಟ್ಟದ ಸಮೀಪ ಚಿಕ್ಕ ರಾಂಪುರ್ ಕ್ರಾಸ್ ಬಳಿ ಶನಿವಾರದಂದು ನಡೆದಿದೆ.ಸಾರಿಗೆ ಬಸ್ ನಲ್ಲಿ ಇದ್ದಂತಹ 20ಕ್ಕೂ ಹೆಚ್ಚು ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ವಾಹನದ ಕಿಡಕಿ ಬಳಿ ಕೈ ಇಟ್ಟು ಕುಳಿತುಕೊಂಡಿದ್ದ ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಶಿವಮ್ಮ ಮಲ್ಲಪ್ಪ ಎಂಬ ಮಹಿಳೆಯ ಬೆರಳು ತುಂಡಾಗಿದ್ದು, ಆಕೆಯನ್ನು ಗಂಗಾವತಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಂಜನಾದ್ರಿ ಬೆಟ್ಟದ ಸಮೀಪ ಇರುವ ಜಂಗ್ಲಿಗೆ ಹೋಗುವ ಮಾರ್ಗ ಮಧ್ಯೆ ರಸ್ತೆ ಇಕ್ಕಟಾಗಿದ್ದು, ತಿರುವಿನಿಂದ ಕೂಡಿದೆ. ಸಾರಿಗೆ ವಾಹನ ಈ ಸ್ಥಳಕ್ಕೆ ಬರುತಿದ್ದಂತೆಯೇ ಎದುರಿಗೆ ಕಾರೊಂದು ವೇಗವಾಗಿ ಬಂದಿದೆ. ಕಾರಿನೊಂದಿಗೆ ಮುಖಾಮುಖಿ ತಪ್ಪಿಸಲು ಚಾಲಕ ಅಮರೇಗೌಡ ವಾಹನವನ್ನು ರಸ್ತೆ ಎಡಕ್ಕೆ ತಿರುಗಿದ್ದಾರೆ.

ಆದರೆ ರಸ್ತೆ ಬದಿಯ ತಿರುವಿನಲ್ಲಿಯೇ ವಿದ್ಯುತ್ ಕಂಬ ಇದ್ದು, ವಾಹನದ ಎಡ ಭಾಗ ಕಂಬಕ್ಕೆ ಸವರಿಕೊಂಡು ಹೋಗಿದೆ. ಅದೃಷ್ಟಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಆಕಸ್ಮಿಕವಾಗಿ ಚಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರೆ ವಿದ್ಯುತ್ ಪ್ರವಾಹಿತ ತಂತಿಗಳು ಬಸ್ ಮೇಲೆ ಬಿದ್ದು ಊಹಿಸಲಾಗದ ದುರ್ಘಟನೆ ನಡೆಯುತ್ತಿತ್ತು .ಚಾಲಕ ಅಮರೇಗೌಡ ಅವರ ಸಮಯ ಪ್ರಜ್ಞೆಯಿಂದ 20ಕ್ಕೂ ಹೆಚ್ಚು ಜನ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಚಾಲಕ ನೀಡಿದ ದೂರಿನ ಮೇರೆಗೆ ಅಪರಿಚಿತ ಕಾರಿನ ಮೇಲೆ ದೂರು ದಾಖಲಿಸಲು ಪೊಲೀಸ ಇಲಾಖೆ ಒಂದಾಗಿದ್ದಾರೆ.

