ಪೊಲೀಸ್ ಠಾಣೆಗಳ ಎಸ್ಸಿ-ಎಸ್ಟಿ ಸಭೆಗಳಲ್ಲಿ ‘ದಲಿತ’ ಪದ ಬಳಕೆಗೆ ನಿಷೇಧ: ಡಿಜಿಪಿ ಕಚೇರಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆದೇಶ…

ಪೊಲೀಸ್ ಠಾಣೆಗಳ ಎಸ್ಸಿ-ಎಸ್ಟಿ ಸಭೆಗಳಲ್ಲಿ ‘ದಲಿತ’ ಪದ ಬಳಕೆಗೆ ನಿಷೇಧ: ಡಿಜಿಪಿ ಕಚೇರಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆದೇಶ…

ಬೆಂಗಳೂರು, ಸೆ.17:ರಾಜ್ಯದ ಎಲ್ಲಾ ಪೊಲೀಸ್ ಠಾಣೆ ಹಂತದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಹಂತದವರೆಗೆ ನಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆಗಳಲ್ಲಿ ಹಾಗೂ ಪೊಲೀಸ್ ಇಲಾಖೆಯ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಅಸಂವಿಧಾನಾತ್ಮಕ *”ದಲಿತ”* ಪದವನ್ನು ಬಳಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಆದೇಶ ಹೊರಡಿಸಿದೆ.*ಆದೇಶದ ಹಿನ್ನೆಲೆ:*ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ *ಶ್ರೀ ಮೋಹನ್ ಕುಮಾರ್ ದಾನಪ್ಪ* ಅವರು ಈ ಕುರಿತು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದರು. *(ಪತ್ರ ಸಂಖ್ಯೆ: ಸನಾ/ಎಸ್ ಪಿಸಿಎ/86/2026-27, ದಿನಾಂಕ: 27.08.2026)*ಮೋಹನ್ ಕುಮಾರ್ ದಾನಪ್ಪ ಅವರು ತಮ್ಮ ಪತ್ರದಲ್ಲಿ, ಸಂವಿಧಾನದಲ್ಲಿ “ದಲಿತ” ಎಂಬ ಪದಕ್ಕೆ ಯಾವುದೇ ಮಾನ್ಯತೆ ಇಲ್ಲ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೂಡ ಎಲ್ಲಾ ಅಧಿಕೃತ ದಾಖಲೆಗಳಲ್ಲಿ “ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST)” ಎಂಬ ಸಂವಿಧಾನಾತ್ಮಕ ಪದವನ್ನೇ ಬಳಸಬೇಕು ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಸಭೆಗಳು ಮತ್ತು ಪತ್ರಗಳಲ್ಲಿ “ದಲಿತ ಸಭೆ” ಎಂಬ ಪದ ಬಳಕೆ ಮಾಡುವುದು ಅಸಂವಿಧಾನಾತ್ಮಕ ಎಂದು ಗಮನ ಸೆಳೆದಿದ್ದರು.*ADGP ಆದೇಶ:*ಈ ಮನವಿಯನ್ನು ಪರಿಗಣಿಸಿದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ *ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಆರ್. ಹಿತೇಂದ್ರ* ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.*ಸಂಖ್ಯೆ: DGIGP-LOOLAW1(MISC)/19/2026-LAW1-DG-IGP-KS / ಕಾನೂನು(1)/73/2026, ದಿನಾಂಕ: 11.09.2026* ರಂದು ಹೊರಡಿಸಿರುವ ಆದೇಶದಲ್ಲಿ,> *ವಿಷಯ: ರಾಜ್ಯದ ಪೊಲೀಸ್ ಠಾಣೆ/ಕಚೇರಿಗಳಲ್ಲಿ ನಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆಗಳಿಗೆ ನಿಷೇಧಿತ ‘ದಲಿತ ಸಭೆ’ ಎಂಬ ಅಸಂವಿಧಾನಾತ್ಮಕ ಪದವನ್ನು ಬಳಸುತ್ತಿರುವ ಬಗ್ಗೆ.*ಈ ಕುರಿತು ರಾಜ್ಯದ *ಎಲ್ಲಾ ಪೊಲೀಸ್ ಆಯುಕ್ತರುಗಳಿಗೆ, ಎಲ್ಲಾ ವಲಯಾಧಿಕಾರಿಗಳಿಗೆ, ಎಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ (ಕೆಜಿಎಫ್ ಮತ್ತು ರೈಲ್ವೆ ಸೇರಿದಂತೆ)* ಮುಂದಿನ ಅಗತ್ಯ ಕ್ರಮಕ್ಕಾಗಿ ಮೋಹನ್ ಕುಮಾರ್ ದಾನಪ್ಪ ಅವರ ಪತ್ರ ಮತ್ತು ಅದರೊಂದಿಗಿನ ಆದೇಶಗಳನ್ನು ಲಗತ್ತಿಸಿ ಕಳುಹಿಸಲಾಗಿದೆ.ಇನ್ಮುಂದೆ ಪೊಲೀಸ್ ಇಲಾಖೆಯು,*”ದಲಿತ ಸಭೆ” ಬದಲು “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆ”* ಎಂದೇ ಅಧಿಕೃತವಾಗಿ ಬಳಸಬೇಕು ಎಂದು ಸೂಚಿಸಲಾಗಿದೆ.ಈ ಆದೇಶಕ್ಕೆ *ಡಿಜಿಪಿ ಕಂಟ್ರೋಲ್ ರೂಂ, ಬೆಂಗಳೂರು – NR No. 13304, Date: 15/09/26* ರಂದು ಪ್ರಸಾರ ಮಾಡಲಾಗಿದೆ.ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರ ಹೋರಾಟಕ್ಕೆ ಸಂದ ಜಯ ಎಂದು ಸಾಮಾಜಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.*- ಮೋಹನ್ ಕುಮಾರ್ ದಾನಪ್ಪ**ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ*

Leave a Reply

Your email address will not be published. Required fields are marked *