ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಇ-ಕೆವೈಸಿ ಅವಧಿ ಅಕ್ಟೋಬರ್ 20 ರವರೆಗೆ ವಿಸ್ತರಣೆ, ನ್ಯಾಯಬೆಲೆ ಅಂಗಡಿ ಸಮಯ ಬದಲಾವಣೆ..
ಬೆಂಗಳೂರು, ಸೆ.17:*ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತೀವ್ರ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ *ಪಡಿತರ ಇ-ಕೆವೈಸಿ ಅವಧಿಯನ್ನು ಅಕ್ಟೋಬರ್ 20, 2026 ರವರೆಗೆ ವಿಸ್ತರಿಸಿ* ಸರ್ಕಾರ ಆದೇಶ ಹೊರಡಿಸಿದೆ.ಈ ಕುರಿತು ಇಂದು (ದಿ:17-09-2026, ಸಂಖ್ಯೆ: ಅ.ನಾ.ಸ/ಸ/251/2026) *ಪತ್ರಿಕಾ ಪ್ರಕಟಣೆ* ಹೊರಡಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ *ರಿಜ್ವಾನ್ ಅರ್ಷದ್* ಅವರು ಎರಡು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.*ಜನರ ಹಸಿವು ನೀಗಿಸುವುದು, ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸೌಲಭ್ಯಗಳನ್ನು ಮುಟ್ಟಿಸುವುದೇ ನಮ್ಮ ಸರ್ಕಾರದ ಕರ್ತವ್ಯ – ರಿಜ್ವಾನ್ ಅರ್ಷದ್, ಸಚಿವರು* ಎಂದು ಅವರು ಹೇಳಿದ್ದಾರೆ.

*1. ಇ-ಕೆವೈಸಿ ಅವಧಿ ವಿಸ್ತರಣೆ:*ನ್ಯಾಯಬೆಲೆ ಅಂಗಡಿಗಳಲ್ಲಿ ಕಳೆದ ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ತೀವ್ರವಾಗಿದ್ದು, ಸಾವಿರಾರು ಜನರು ಇ-ಕೆವೈಸಿ ಮಾಡಲು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಸರ್ಕಾರ ಇ-ಕೆವೈಸಿ ಕೊನೆಯ ದಿನಾಂಕವನ್ನು *ಅಕ್ಟೋಬರ್ 20, 2026 ರವರೆಗೆ ವಿಸ್ತರಿಸಿದೆ.* ಈ ಅವಧಿಯೊಳಗೆ ಎಲ್ಲಾ ಪಡಿತರ ಚೀಟಿದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.#### *2. ನ್ಯಾಯಬೆಲೆ ಅಂಗಡಿಗಳ ಸಮಯದಲ್ಲಿ ಮಹತ್ವದ ಬದಲಾವಣೆ:*ಕೂಲಿ ಕಾರ್ಮಿಕರ ದಿನದ ಆದಾಯಕ್ಕೆ ಧಕ್ಕೆಯಾಗದಂತೆ ನ್ಯಾಯಬೆಲೆ ಅಂಗಡಿಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಬೇವರು ಸುರಿಸಿ ದುಡಿಯುವ ನಮ್ಮ ದಿನಗೂಲಿ ಕಾರ್ಮಿಕರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಪಡಿತರ ಧಾನ್ಯ ಪಡೆಯಲು ತಮ್ಮ ದಿನದ ದುಡಿಮೆಯನ್ನು ತ್ಯಾಗ ಮಾಡಿ ಸರದಿಯಲ್ಲಿ ನಿಲ್ಲಬಾರದು ಎಂಬ ಕಾರಣಕ್ಕೆ,*ಅಕ್ಟೋಬರ್ 1, 2026 ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ:*- *ಬೆಳಿಗ್ಗೆ 07:00 ರಿಂದ ಮಧ್ಯಾಹ್ನ 12:00 ರವರೆಗೆ*- *ಸಂಜೆ 04:00 ರಿಂದ ರಾತ್ರಿ 08:00 ರವರೆಗೆ*ಇದರಿಂದ ಕಾರ್ಮಿಕರು ಕೆಲಸಕ್ಕೆ ತೆರಳುವ ಮುನ್ನ ಅಥವಾ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ತಮಗೆ ಅನುಕೂಲಕರವಾದ ಸಮಯದಲ್ಲಿ ಗೌರವಯುತವಾಗಿ ತಮ್ಮ ಪಾಲಿನ ಪಡಿತರವನ್ನು ಪಡೆದುಕೊಳ್ಳಬಹುದು.ಇಲಾಖೆಯ ಈ ಎರಡು ನಿರ್ಧಾರಗಳು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿ ಹಾಗೂ ಪಾರದರ್ಶಕಗೊಳಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.*#eKYC #rationcard #RizwanArshad #FoodDepartment #KarnatakaGovt #NewsUpdate*

