ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯ ಗಣೇಶೋತ್ಸವಕ್ಕೆ ಸುವರ್ಣ ಮಹೋತ್ಸವದ ಸಂಭ್ರಮಸಾರ್ವಜನಿಕ ಗಣೇಶೋತ್ಸವದ ಮೂಲಕ ಜನರನ್ನು ಸಂಘಟಿಸಿದ ತಿಲಕರ ಕೊಡುಗೆ ಅನನ್ಯ: ಮುರಳೀಧರ ಕುಲಕರ್ಣಿ….
ಗಂಗಾವತಿ: ಬ್ರಿಟಿಷರ ಆಳ್ವಿಕೆಯ ವಿರುದ್ಧ ದೇಶದ ಜನರನ್ನು ಸಂಘಟಿಸಿ, ಸಾಮಾಜಿಕ ಹಾಗೂ ರಾಷ್ಟ್ರೀಯ ಜಾಗೃತಿಗೆ ಸಾರ್ವಜನಿಕ ಗಣೇಶೋತ್ಸವವನ್ನು ವೇದಿಕೆಯನ್ನಾಗಿ ರೂಪಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರ ಕೊಡುಗೆ ಅನನ್ಯವಾಗಿದೆ ಎಂದು ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಮುರಳೀಧರ ಕುಲಕರ್ಣಿ ಹೇಳಿದರು.ನಗರದ ಯಾಜ್ಞವಲ್ಕ್ಯ ಮಂದಿರದಲ್ಲಿ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 50ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರತಿಷ್ಠಾಪನೆಯ ಮಹಾಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಮಂದಿರವು ಐದು ದಶಕಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಸುವರ್ಣ ಮಹೋತ್ಸವದ ಅಂಗವಾಗಿ ಈ ಬಾರಿ ಹಲವು ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಶೇಷಗಿರಿ ಕುಲಕರ್ಣಿ ಮಾತನಾಡಿ, ಸೆ.15ರಿಂದ ಪ್ರತಿದಿನ ಸಂಜೆ 6 ಗಂಟೆಗೆ ನಾಡಿನ ಪ್ರಸಿದ್ಧ ಗಾಯಕರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ದಾಸ ಪರಂಪರೆಯ ಭಕ್ತಿ ಸಂಗೀತದ ಮೂಲಕ ನಗರದ ಜನತೆಗೆ ಆಧ್ಯಾತ್ಮಿಕ ಹಾಗೂ ಸಂಗೀತದ ಸೊಬಗನ್ನು ಉಣಬಡಿಸಲಾಗುವುದು. ಬೆಂಗಳೂರಿನ ಡಾ. ಅರ್ಚನಾ ಕುಲಕರ್ಣಿ, ಕೊಪ್ಪಳದ ಅನನ್ಯ ದೇಸಾಯಿ ಹಾಗೂ ಬೆಂಗಳೂರಿನ ವಸುದೇಂದ್ರ ವೈದ್ಯ ಸೇರಿದಂತೆ ಹಲವು ಕಲಾವಿದರು ದಾಸವಾಣಿಯನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.ಗಣೇಶೋತ್ಸವದ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಕುಲಕರ್ಣಿ ನೆರವೇರಿಸಿದರು.ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರ ಮೇಘೂರು, ಗುರುರಾಜ್, ಚರ್ಚನಗುಡ್ಡ ರಂಗನಾಥ್, ವಟಗಲ್ ರಂಗನಾಥ್, ಆನಂದ ವೆಂಕಟೇಶ್ ಆಚಾರ್, ಸತೀಶ್, ಶ್ರೀಕಾಂತ್, ಕೃಷ್ಣ ಆಲಂಪಲ್ಲಿ, ಮನೋಹರ ಕೋಮಲಾಪುರ, ಪ್ರಹ್ಲಾದ್, ಕಿಶನ್, ಪ್ರಕಾಶರಾವ್, ಸಂಜಯ್ ಕುಲಕರ್ಣಿ, ರಿತೇಶ್, ಮಣಿಕಂಠ, ನಿರ್ಮಲ್ ರಾವ್ ಆಲಂಪಲ್ಲಿ, ಸತ್ಯಕುಮಾರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು..

