ಶರಣರ ಜೀವನ ದರ್ಶನ ಅಧ್ಯಾತ್ಮ ಪ್ರವಚನಕ್ಕೆ ಭಕ್ತರಿಗೆ ಆಹ್ವಾನ…

ಶರಣರ ಜೀವನ ದರ್ಶನ ಅಧ್ಯಾತ್ಮ ಪ್ರವಚನಕ್ಕೆ ಭಕ್ತರಿಗೆ ಆಹ್ವಾನ…

ಗಂಗಾವತಿ, ಜು.16: ಶ್ರೀ ರಾಜರಾಜೇಶ್ವರಿ ಬೃಹನ್ ಮಠ, ಅರಳಹಳ್ಳಿ ಆಶ್ರಮದ ಆಶ್ರಯದಲ್ಲಿ ಆಷಾಢ ಶುದ್ಧ ಗುರು ಪೌರ್ಣಿಮೆಯ ಅಂಗವಾಗಿ ಪರಮಪೂಜ್ಯ ಶ್ರೀ ಶರಣಬಸವಯ್ಯ ತಾತನವರ 17ನೇ ವರ್ಷದ ಶರಣೋತ್ಸವ ಹಾಗೂ “ಶರಣರ ಜೀವನ ದರ್ಶನ” ಅಧ್ಯಾತ್ಮ ಪ್ರವಚನ ಕಾರ್ಯಕ್ರಮವನ್ನು ಇದೇ ಜುಲೈ 17ರಿಂದ 29ರವರೆಗೆ ಭಕ್ತಿಭಾವದಿಂದ ಆಯೋಜಿಸಲಾಗಿದೆ ಎಂದು ಶ್ರೀ ರಾಜರಾಜೇಶ್ವರಿ ಬೃಹನ್ ಮಠದ ಶರಣರಾದ ಪೂಜ್ಯ ಶ್ರೀ ಗವಿಸಿದ್ದೇಶ್ವರ ತಾತನವರು ತಿಳಿಸಿದ್ದಾರೆ.ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜುಲೈ 17ರಂದು ಬೆಳಿಗ್ಗೆ 7.05 ಗಂಟೆಗೆ ಕೆಸರಹಟ್ಟಿ ಗ್ರಾಮದಲ್ಲಿ ಗ್ರಾಮದ ಪ್ರಮುಖರ ನೇತೃತ್ವದಲ್ಲಿ ಶ್ರೀ ತಾತನವರ ಭಾವಚಿತ್ರದೊಂದಿಗೆ ಧರ್ಮಧ್ವಜಾರೋಹಣ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಅವಧಿಯಲ್ಲಿ ಪ್ರತಿದಿನ ಸಂಜೆ ಧಾರ್ಮಿಕ ಪ್ರವಚನಗಳು, ಭಜನೆ, ಸತ್ಸಂಗ ಹಾಗೂ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶರಣರ ತತ್ವ, ಜೀವನ ಮೌಲ್ಯಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಜುಲೈ 29ರಂದು ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜೆ, ಮಹಾಮಂಗಳಾರತಿ, ಸಾಮೂಹಿಕ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.ಕಾರ್ಯಕ್ರಮದಲ್ಲಿ ಶ್ರೀ ಮಠದ ಪೀಠಾಧಿಪತಿಗಳು, ವಿವಿಧ ಮಠಾಧೀಶರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಮಪೂಜ್ಯ ಶ್ರೀ ಶರಣಬಸವಯ್ಯ ತಾತನವರ ಆಶೀರ್ವಾದ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *