ಮರಳಿ: ಎಂಎಸ್ಎಂಎಸ್ ಪದವಿ ವಿದ್ಯಾರ್ಥಿಗಳಿಂದ ವೈವಾ ಯಶಸ್ವಿಪಿಹೆಚ್‌ಡಿ ಮಾದರಿಯಲ್ಲಿ ವಿಷಯಗಳ ಮಂಡನೆ: ಪಂಚಾಕ್ಷರಯ್ಯ ಹಿರೇಮಠ..

ಮರಳಿ: ಎಂಎಸ್ಎಂಎಸ್ ಪದವಿ ವಿದ್ಯಾರ್ಥಿಗಳಿಂದ ವೈವಾ ಯಶಸ್ವಿಪಿಹೆಚ್‌ಡಿ ಮಾದರಿಯಲ್ಲಿ ವಿಷಯಗಳ ಮಂಡನೆ: ಪಂಚಾಕ್ಷರಯ್ಯ ಹಿರೇಮಠ..

ಗಂಗಾವತಿ: ಬುಧವಾರದಂದು ತಾಲ್ಲೂಕಿನ ಮರಳಿಯ ಎಂಎಸ್ಎಂಎಸ್ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಬಿಎ, ಬಿಕಾಂ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರಬಂಧ ಸಂಬಂಧಿಸಿದ ವೈವಾ (ಮೌಖಿಕ ಪರೀಕ್ಷೆ) ಯಶಸ್ವಿಯಾಗಿ ನಡೆಯಿತು. ಕೊಪ್ಪಳ ವಿಶ್ವವಿದ್ಯಾಯಲದಿಂದ ಆಗಮಿಸಿದ್ದ ಗಂಗಾವತಿಯ ಟಿ.ಎಮ್.ಎ (ಬಿ.ಇಡಿ.) ಕಾಲೇಜಿನ ಉಪನ್ಯಾಸಕರಾದ ಪಂಚಾಕ್ಷರಯ್ಯ ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಸಂದರ್ಶನ ನೆರವೇರಿಸಿದರು. ನಂತರ ಮಾತನಾಡಿದ‌ ಅವರು, ಎಂಎಸ್ಎಂಎಸ್ ಪದವಿ ವಿದ್ಯಾರ್ಥಿಗಳು ಪ್ರಬಂಧಕ್ಕೆ ಉತ್ತಮ‌ ವಿಷಯಗಳನ್ನು ಆಯ್ಕೆ‌ ಮಾಡಿಕೊಂಡು ಮಂಡಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಮಹಾಪ್ರಬಂಧದ (ಪಿಹೆಚ್‌ಡಿ) ಮಾದರಿಯಲ್ಲಿ ಹೊಸ ವಿಷಯದ ಆಯ್ಕೆ, ವಿವಿಧ ಸಂಶೋಧನಾ ವಿಧಾನಗಳನ್ನು ಅನುಸರಿಸಿದ್ದಾರೆ ಹಾಗೂ ವೈವಾ ವೇಳೆ ಎಲ್ಲಾ ವಿದ್ಯಾರ್ಥಿಗಳು ಶಿಸ್ತಿನಿಂದ ಉತ್ತಮವಾಗಿ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ವಿದ್ಯಾರ್ಥಿನಿ ಆಶಾ ದೀಪಿಕಾ ಮಾತನಾಡಿ, ನಮಗೆ ಪ್ರಬಂಧ ಮಂಡಿಸಲು ಎಂಎಸ್ಎಂಎಸ್ ಶಿಕ್ಷಣ ಸಂಸ್ಥೆ ಉತ್ತಮವಾದ ಅವಕಾಶ ಕಲ್ಪಿಸಿದ್ದಕ್ಕೆ ಎಲ್ಲರ ಪರವಾಗಿ ಕೃತಜ್ಞತೆಯನ್ನು ತಿಳಿಸುತ್ತೇವೆ. ಬಿಎ ಹಾಗೂ ಬಿಕಾಂನ ಎಲ್ಲಾ ಸ್ನೇಹಿತರು ತುಂಬಾ ಆಸಕ್ತಿಯಿಂದ ವಿವಿಧ ವಿಷಯಗಳ‌ ಬಗ್ಗೆ ಸಂಶೋಧನೆಯನ್ನು ನೆರವೇರಿಸಿ ಯಶಸ್ವಿಯಾಗಿ ಮಂಡಿಸಲಾಗಿದೆ. ಸಂದರ್ಶಿಸಿದ ಪಂಚಾಕ್ಷರಯ್ಯ ಅವರಿಗೆ, ಸಹಕಾರ ನೀಡಿದ ಸಂಸ್ಥೆಯ ಉಪನ್ಯಾಸಕರಿಗೆ ಧನ್ಯವಾದಗಳನ್ನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.‍

Leave a Reply

Your email address will not be published. Required fields are marked *