ಮಾದರ ಮಹಾಸಭಾ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆ ಯಶಸ್ವಿ…

ಮಾದರ ಮಹಾಸಭಾ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆ ಯಶಸ್ವಿ…

ಕೊಪ್ಪಳ: ಇಂದು ದಿನಾಂಕ 22-05-2026 ರಂದು ಕೊಪ್ಪಳ ಜಿಲ್ಲೆಯ ನಗರದಲ್ಲಿ ಮಾದರ ಮಹಾಸಭಾ ಕೊಪ್ಪಳ ಜಿಲ್ಲೆ ಪದಾಧಿಕಾರಿಗಳ ಆಯ್ಕೆ ಸಭೆ ವಿಜೃಂಭಣೆಯಿಂದ ನಡೆಯಿತು.ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ H. Anjaneya ಅವರು ಭಾಗವಹಿಸಿ ಸಂಘಟನೆಯ ಬಲವರ್ಧನೆ, ಸಮಾಜದ ಏಕತೆ ಹಾಗೂ ಯುವಕರ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಗುಳಪ್ಪ ಹಲಗೇರಿ, ಪೂಜ್ಯ ಶ್ರೀ ಗದೆಗೆಪ್ಪಾ ಶರಣರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಮೌನೇಶ್ ಧಡೆಸೂಗೂರು ಸೇರಿದಂತೆ ಮಾದಿಗ ಸಮಾಜದ ಪ್ರಮುಖ ಮುಖಂಡರು, ನಾಯಕರು, ಹಿರಿಯರು, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಮಸ್ತ ಮಾದಿಗ ಸಮಾಜದ ಬಾಂಧವರು ಉಪಸ್ಥಿತರಿದ್ದರು.ಸಭೆಯಲ್ಲಿ ಸಮಾಜದ ಸಂಘಟನೆ ಮತ್ತಷ್ಟು ಬಲಪಡಿಸುವುದು, ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಸಾಮಾಜಿಕ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸುವ ಕುರಿತು ಚರ್ಚೆ ನಡೆಯಿತು. ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯಿತು.ಸಭೆಯ ಅಂತ್ಯದಲ್ಲಿ ಸಮಾಜದ ಏಕತೆ ಮತ್ತು ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕೆಂದು ಇದೇ ಸಂದರ್ಭದಲ್ಲಿ ಗಂಗಾವತಿಯ ಹಿರಿಯರು ಮತ್ತು ಯುವ ಮುಖಂಡರು ಹುಲಿಗೇಶ್ ದೇವರಮನಿ ಹಂಪೆಸ್ ಅರ್ಗೋಲ್ ಮಾಸ್ತರ ಅಯೋಧ್ಯ ಹುಲಗಪ್ಪ ಹಂಪಿ ದುರ್ಗಪ್ಪ ಹೊಸಳ್ಳಿ ಶಿವಪ್ಪ ಮಾದಿಗ ರುದ್ರಪ್ಪ ಹೊಸಳ್ಳಿ ಪುರಂದಾಮ ರಾಂಪುರ್ ಜಾನಿ ಸೆಂತಿಬೈಲಿ ಹಾಗೂ ಇನ್ನಿತರರು ಸನ್ಮಾನಿಸಿದರು.

Leave a Reply

Your email address will not be published. Required fields are marked *