.ಅಂಜನಾದ್ರಿಯಿಂದ ಉಡುಪಿ ಜಿಲ್ಲೆಯ ಶ್ರೀ ಕ್ಷೇತ್ರ ಶಂಕರಪುರಕ್ಕೆ ಹನುಮ ಜ್ಯೋತಿ, ಕೌಮೋದಕಿ ಗಧೆ, ಹನುಮ ಧ್ವಜ ಹೊರಡುವುದು….

ಗಂಗಾವತಿ. ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದೇಶ್ ಅಡುಗೆಮನೆ ಉಡುಪಿ ಜಿಲ್ಲೆಯ ಶ್ರೀ ಕ್ಷೇತ್ರ ಶಂಕರಪುರ ಸುಮಾರು 11 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಶ್ರೀ ಕ್ಷೇತ್ರ ಆವರಣದಲ್ಲಿ ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದಲ್ಲಿ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ 19 ಅಡಿ ಎತ್ತರದ ಏಕ ಶಿಲಾ ಶ್ರೀ ಮುಖ್ಯಪ್ರಾಣನ ಮೂರ್ತಿ ಸ್ಥಾಪನೆಯನ್ನು 2026 ಎಪ್ರಿಲ್ 02 ರಂದು ಪ್ರತಿಷ್ಠಾಪಿಸಲಿದ್ದು, ಈ ಬಗ್ಗೆ ಮಾರ್ಚ್ 26ರ ರಾಮನವಮಿಯಂದು ಹನುಮ ಜನ್ಮ ಭೂಮಿಯಿಂದ ಹನುಮ ಜ್ಯೋತಿ, ಕೌಮೋದಕಿ ಗಧೆ ಮತ್ತು ಹನುಮ ಧ್ವಜವು ಹೊರಟು ಮಾರ್ಚ್ 29ಕ್ಕೆ ಉಡುಪಿ ತಲುಪಲಿದೆ. ಉಡುಪಿ ಜೋಡುಕಟ್ಟೆಯಿಂದ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಯ ೨೧೦ಕೆಜಿ ತೂಕದ ಪಂಚಲೋಹ ಮೂರ್ತಿ ಹಾಗೂ ಹಸಿರು ಹೊರೆಕಾಣಿಕೆಯಿಂದ ಭವ್ಯ ಮೆರವಣಿಗೆಯಿಂದ ಶ್ರೀ ಕ್ಷೇತ್ರ ತಲುಪಲಿದೆ. ಮಾರ್ಚ್ 31ರಿಂದ ಎಪ್ರಿಲ್ 03ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಈ ಕಾರ್ಯಕ್ರಮಕ್ಕೆ ರಥಯಾತ್ರೆಗೆ ಚಾಲನೆ ನೀಡಲಕ್ಕೆ ರಾಜಮಾತೆ ಶ್ರೀಮತಿ ಲಲಿತಾ ರಾಣಿ ಶ್ರೀರಂಗದೇವರಾಯಲು ಹಾಗೂ ಸ್ಥಳೀಯ ಶಾಸಕರಾದ ಗಾಲಿ ಜನರ್ಧನರೆಡ್ಡಿ,ಮಾಜಿ ಶಾಸಕರು ಮಾಜಿ ಸಂಸದರು ಸೇರಿದಂತೆ ಅನೇಕ ರಾಜಕೀಯ ನಾಯಕರು ಮುಖಂಡರು ಆಗಮಿಸುತ್ತಾರೆ ,24.03.2026 ರಂದು ಬೆಳಿಗ್ಗೆ 10.00ಕ್ಕೆ ತಮ್ಮ ದೃಶ್ಯ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ಉತ್ತರ ಪ್ರಾಂತ ಸಹಸಂಯೋಜಕ ನೀಲಕಂಠಪ್ಪ ನಾಗಶೆಟ್ಟಿ,ವಿಜಯ ಕೊಡುವೂರು,ಜಯರಾಮ್ ಶೆಟ್ಟಿಗಾರ್,ಸತೀಶ ದೇವಾಡಗ,ಸೇರಿದಂತೆ ಇತರರು ಇದ್ದರು

