ಕಂದಾಯ ಗ್ರಾಮ ಘೋಷಿಸಲು ಒತ್ತಾಯಿಸಿ ಪಾದಯಾತ್ರೆ..

ಕಂದಾಯ ಗ್ರಾಮ ಘೋಷಿಸಲು ಒತ್ತಾಯಿಸಿ ಪಾದಯಾತ್ರೆ..

ಗಂಗಾವತಿ.ತಾಲೂಕಿನ ಬಸವನದುರ್ಗ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲು ಒತ್ತಾಯಿಸಿ, ಗ್ರಾಮದಿಂದ ತಹಸೀಲ್ದಾರ ಕಚೇರಿವರೆಗೆ ಪಾದಯಾತ್ರೆಯನ್ನು ನಡೆಸಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ವೆಂಕಟೇಶಬಾಬು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗ್ರಾಮಸ್ಥರಿಂದ ಶುಕ್ರವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಹೋಗುವ ಮಾರ್ಗದಲ್ಲಿ ಬರುವ ಬಸವನದುರ್ಗ ಗ್ರಾಮದಲ್ಲಿ ಸರಿಸುಮಾರು 9 ದಶಕಗಳಿಂದ 400 ಕ್ಕೂ ಅಧಿಕ ಕುಟುಂಬಗಳು ದಾಖಲೆ ರಹಿತವಾಗಿ ವಾಸ ಮಾಡುತ್ತಿವೆ. ಕಂದಾಯ ಇಲಾಖೆಯು ನವೆಂಬರ 08,2022 ರಂದು ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಅಥವಾ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಹಕ್ಕು ದಾಖಲೆಗಳನ್ನು ಒದಗಿಸಲು ಅವಕಾಶ ಮಾಡಿಕೊಟ್ಟಿದೆ. ಕಂದಾಯ ಇಲಾಖೆಯ ನಿಯಮಗಳಂತೆ ಗ್ರಾಮ ಪಂಚಾಯತಿ ವತಿಯಿಂದ ಬಸವನದುರ್ಗ ಗ್ರಾಮದ ನಿವಾಸಿಗಳಿಗೆ ಯಾವುದೇ ರೀತಿಯ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ ಮತ್ತು ಅಧಿಕೃತ ಆಸ್ತಿಯಾದ 11 ಎ ವಿತರಣೆ ಮಾಡಿರುವುದಿಲ್ಲ ಎಂದು ಕಂದಾಯ ಇಲಾಖೆಗೆ ಈಗಾಗಲೇ ಪತ್ರ ವ್ಯವಹಾರವನ್ನು ಕೂಡ ಮಾಡಲಾಗಿದೆ. ಆದರೆ ಗಂಗಾವತಿಯ ಕಂದಾಯ ನಿರೀಕ್ಷಕರಾದ ಸೈಯದ್ ಬಷೀರ್ ಅವರು ಗ್ರಾಮದಲ್ಲಿನ ಯಾವುದೇ ಪೂರಕ ದಾಖಲೆಗಳನ್ನು ತೆಗೆದುಕೊಳ್ಳದೆ ಬಸವನದುರ್ಗ ಗ್ರಾಮವನ್ನು ಕಂದಾಯ ಗ್ರಾಮ ರಚನೆಯಿಂದ ಕೈ ಬಿಡಬೇಕು ಎಂದು ವರದಿಯನ್ನು ನೀಡಿದ್ದಾರೆ. ಕೆಲ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯAತೆ ಕೆಲಸ ಮಾಡುತ್ತಿರುವ ಕಂದಾಯ ನಿರೀಕ್ಷಕ ಸೈಯದ್ ಬಷೀರ್ ನೀಡಿರುವ ವರದಿಯಿಂದ ಬಸವನದುರ್ಗ ಗ್ರಾಮವನ್ನು ಕಂದಾಯ ಗ್ರಾಮ ಪಟ್ಟಿಯಿಂದ ಕೈ ಬಿಡಲಾಗಿದೆ. ಈಗಾಗಲೇ ಕಂದಾಯ ಗ್ರಾಮಗಳು ಎಂದು ಘೋಷಣೆಯಾಗಿರುವ ಗ್ರಾಮಗಳಲ್ಲಿ 11 ಬಿ ಹಾಗೂ ಬೆರಳೆಣಿಕೆಯಷ್ಟು ಹಕ್ಕು ಪತ್ರಗಳು ಇದ್ದರು ಸಹ ಅವುಗಳನ್ನು ಹೊರತು ಪಡಿಸಿ, ಕಂದಾಯ ಗ್ರಾಮಗಳು ಎಂದು ಘೋಷಣೆ ಮಾಡಿದ್ದಾರೆ. ಆದರೆ ಬಸವನದುರ್ಗ ಗ್ರಾಮವನ್ನು ಮಾತ್ರ ಕೈ ಬಿಟ್ಟಿರುವುದನ್ನು ಖಂಡಿಸಲಾಗುವುದು. ಕಂದಾಯ ನಿರೀಕ್ಷಕರ ನಡೆಯನ್ನು ಖಂಡಿಸಿ ಹಾಗೂ ಬಸವನದುರ್ಗ ಗ್ರಾಮವನ್ನು ಕಂದಾಯ ಗ್ರಾಮವನ್ನು ಘೋಷಣೆ ಮಾಡಲು ಒತ್ತಾಯಿಸಿ, ಬಸವನದುರ್ಗ ಗ್ರಾಮಸ್ಥರು ಮಾರ್ಚ್ 09,2026 ರಂದು ಗ್ರಾಮದಿಂದ ತಹಸೀಲ್ದಾರ ಕಚೇರಿಯವರೆಗೆ ನೂರಾರು ಜನ ಸೇರಿಕೊಂಡು ಪಾದಯಾತ್ರೆಯ ಮೂಲಕ ಆಗಮಿಸಿ, ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಹೇಳಿದರು. ಗ್ರಾಮಸ್ಥರಾದ ರಾಮಕೃಷ್ಣ, ಹೊನ್ನಪ್ಪ ನಾಯಕ, ಶ್ರೀನಿವಾಸ್ ರೆಡ್ಡಿ, ಚಂದ್ರಶೇಖರ, ರಾಜಶೇಖರ, ಎ.ರವಿಕುಮಾರ, ರಾಮನಗೌಡ, ರಾಮಣ್ಣ, ಬಸವರಾಜ, ಯಮನೂರಪ್ಪ, ನೂರುದ್ದೀನ್, ಸಲೀಂ ಹಾಗೂ ಇತರರಿದ್ದರು.

ಗಂಗಾವತಿ ತಾಲೂಕಿನ ಬಸವನದುರ್ಗ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲು ಒತ್ತಾಯಿಸಿ, ನಗರದ ಪತ್ರಿಕಾ ಭವನದಲ್ಲಿ ಗ್ರಾಮಸ್ಥರು ಪತ್ರಿಕಾ ಗೋಷ್ಠಿಯನ್ನು ಶುಕ್ರವಾರ ನಡೆಸಿದರು.

Leave a Reply

Your email address will not be published. Required fields are marked *