*ಗರ್ವದಿಂದ ಸಾಧ್ಯವಾಗದ್ದು ಸರ್ವರಿಂದ ಸಾಧ್ಯವೆಂದು ಸಾರಿದ ತರ್ಕಶ್ರೇಷ್ಠ ವಚನಕಾರ ಸರ್ವಜ್ಞಮೂರ್ತಿ-ಪ್ರೊ.ಕರಿಗೂಳಿ*

ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ- 20-02-2026 ರಂದು ‘ತ್ರಿಪದಿಬ್ರಹ್ಮ’ ಸರ್ವಜ್ಞ ರವರ ಜನ್ಮದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕರಿಗೂಳಿ ಯವರು ಸರ್ವಜ್ಞ ರಚಿಸಿದ ವಚನಗಳು ಸಮಾಜವನ್ನು ತಿದ್ದುವ ವೈದ್ಯರಂತೆ ಗೋಚರಿಸುತ್ತಿವೆ, ಆತನ ವಚನಗಳ ಮನನದಿಂದ ಮನೋರೋಗಗಳು ಮಾಯವಾಗುತ್ತವೆ ಎಂದು ವಿದ್ಯಾರ್ಥಿಗಳಿಗೆ ಅವರ ವಚನಗಳ ಮೂಲಕ ವಿಶ್ಲೇಸಿದರು. 7000 ಕ್ಕೂ ಅಧಿಕ ವಚನಗಳನ್ನು ರಚಿಸಿ ಜಗತ್ತಿನ ಲೌಕಿಕ-ಅಲೌಕಿಕ ಅಂಶಗಳನ್ನೆಲ್ಲ ತಾರ್ಕಿಕವಾಗಿ,ಆತ್ಮವಲೋಕನಕ್ಕೆ ಹಚ್ಚುವ ಪ್ರಶ್ನೆಗಳನ್ನು ಮಾಡಿದ್ದಾರೆ ಎಂದರು. ಕನ್ನಡ ಸಾಹಿತ್ಯ ಲೋಕಕ್ಕೆ ಸರ್ವಜ್ಞರ ವಿಚಾರಗಳು ಸರ್ವಕಾಲಿಕ ಪ್ರಸ್ತುತ, ಹಾಗೂ ಎಲ್ಲರ ಬದುಕಿಗೆ ಮಾರ್ಗದರ್ಶಕ ಎಂದರು,’ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ಹಾಗೂ ಜಾಣ ಅಸಾಮಾನ್ಯರಿಗೂ ಸವಾಲೆನಿಸುವ’ ವಿಶಿಷ್ಟ ವಚನಗಳು ಈ ಸರ್ವಜ್ಞನ ತ್ರಿಪದಿಗಳು,ಅರ್ಹರಿಗೆ ಮಾತ್ರ ಅರ್ಥವಾಗುವ ಸರ್ವಜ್ಞನ ವಚನಗಳು ಅಜರಾಮರ.

ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ನಮ್ಮ ಬದುಕು ಹಸನಾಗುವುದು ಅಂದವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಅಧ್ಯಾಪಕ ಶ್ರೀ ವೀರೇಶರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕವಿ ಸರ್ವಜ್ಞರು ಕನ್ನಡದ ಅತ್ಯಂತ ಜನಪ್ರಿಯ ತ್ರಿಪದಿಕವಿ, ವಾಸ್ತವಿಕವಾದಿ ಮತ್ತು ತತ್ವಜ್ಞಾನಿ. ಆಗಿದ್ದಾರೆ ಎಂದು ಹೇಳಿದರು.

