ಹಿಂದೂ ಸಂಗಮ: ಶ್ರೀಕಂಠ ಸ್ವಾಮಿಗಳ ಆರ್ಶೀವಚನ:ಪೌರ ಕಾರ್ಮಿಕರಿಗೆ ಸನ್ಮಾನರೊಮಾಂಚನಗೊಳಿಸಿದ ಸಾಹಸ ಮಲ್ಲಕಂಬ ಪ್ರದರ್ಶನಕಿರಣ ವಿವೇಕ ವಂಶಿಯವರಿಂದ ದಿಕ್ಸೂಚಿ ಭಾಷಣ.

ಗಂಗಾವತಿ. ನಗರದಲ್ಲಿ ಹಿಂದೂ ಸಮ್ಮೇಳನ ಪೂರ್ವ ಭಾಗದ ಸಮಿತಿಯಿಂದ ನಡೆದ ಹಿಂದೂ ಸಂಗಮದಲ್ಲಿ ಬಾಲಕಿಯರಿಂದ ಭರತ ನಾಟ್ಯ ಮತ್ತು ಲಕ್ಷ್ಮೇಶ್ವರದ ವಿಕಲಚೇತನ ಮಕ್ಕಳಿಂದ ನಡೆದ ಮಲ್ಲಕಂಬ ಸಾಹಸ ಪ್ರದರ್ಶನ ಸೇರಿದ್ದ ಜನರಲ್ಲಿ ರೋಮಾಂಚನಗೊಳಿಸಿತು. ಗಿಣಿಗೇರಿಯ ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀಕಂಠ ಸ್ವಾಮಿಗಳು ಆರ್ಶೀವಚನ ನೀಡಿ, ಪ್ರತಿಯೊಂದು ಹಿಂದು ಕುಟುಂಬದ ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಯೋಗ, ಸಂಗೀತ ಸೇರಿದಂತೆ ಹಲವು ಸಾಹಸ ಪ್ರದರ್ಶನಗಳ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಕರೆ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ವರ್ಷಾಚರಣೆಯ ಅಂಗವಾಗಿ ಹಿಂದೂ ಸಮ್ಮೇಳನ ಪೂರ್ವ ಭಾಗದ ಸಮಿತಿಯಿಂದ ಗುರುವಾರ ಡಾ.ಬಾಬು ಜಗಜೀವನರಾಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರದಲ್ಲಿ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು. ಮೋಬೈಲ್ ಹಾವಳಿಯಿಂದ ಮಕ್ಕಳ ಮನಸ್ಸು ಹಾಳಾಗುತ್ತಿದೆ. ಉತ್ತಮ ಕಾರ್ಯಕ್ಕೆ ಮೋಬೈಲ್ ಬಳಸಬೇಕು. ಆದರೆ ಅದರಿಂದ ಬದುಕು ಹಾಳಾಗದಂತೆ ತಾಯಂದಿರು ಮಕ್ಕಳಿಗೆ ತಿಳಿ ಹೇಳಕಬೇಕು. ತಾಯಿಯು ನೀಡಿದ ಉತ್ತಮ ಸಂಸ್ಕಾರದಿಂದ ಶಿವಾಜಿ ಮಾಹಾರಾಜರು ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಭಾರತದ ಸಮಸ್ಥ ಹಿಂದುಗಳನ್ನು ರಕ್ಷಣೆ ಮಾಡಿದರು.

ಅಂತಹ ಮಾಹಾನ ಶೂರನ ಜನ್ಮ ದಿನವಾದ ಇಂದು ಗಂಗಾವತಿಯಲ್ಲಿ ಹಿಂದೂ ಸಮ್ಮೇಳನ ನಡಯುತ್ತಿದೆ. ಪ್ರತಿ ಮನೆಯಲ್ಲಿ ಮಕ್ಕಳು ಶಿವಾಜಿಯಂತಾಗಬೇಕು. ಸಂಸ್ಕಾರ, ಸಾಮರಸ್ಯ, ಸಹ ಬಾಳ್ವೆ ಎಲ್ಲಾ ಹಿಂದುಗಳಲ್ಲಿ ಮೂಡಿದಾಗ ಮಾತ್ರ ಭಾರತ ಬಲಿಷ್ಟವಾಗುತ್ತದೆ. ಬಲಿಷ್ಟ ಭಾರತದ ನಿರ್ಮಾಣಕ್ಕಾಗಿ ಎಲ್ಲರು ಸಂಕಲ್ಪ ಮಾಡೋಣ ಎಂದರು. ಪ್ರಜ್ಞಾ ಪ್ರವಾಹ ಸಂಘಟನೆಯ ಉತ್ತರ ಪ್ರಾಂತದ ಪ್ರಚಾರ ಪ್ರಮುಖ ಕಿರಣಕುಮಾರ ವಿವೇಕ ವಂಶಿ ದಿಕ್ಸೂಚಿ ಭಾಷಣ ಮಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿ ಊರಿನ ಗಲ್ಲಿ ಗಲ್ಲಿ ಗಲ್ಲಿಗಳಲ್ಲಿರುವ ಮನೆಗಳಲ್ಲಿ ಹಿಂದೂತ್ವದ ಜಾಗೃತಿ ಮೂಡಿಸಲು ಇಂತಹ ಹಿಂದೂ ಸಮ್ಮೆಳನಗಳನ್ನು ಮಾಡಲಾಗುತ್ತಿದೆ. ಪ್ರತಿ ಕುಟುಂಬದಲ್ಲಿ ಸ್ವದೇಶಿ, ಪರಿಸರ ಜಾಗೃತಿ, ಸಾಮರಸ್ಯದ ಮನಸ್ಥಿತಿ ನಿರ್ಮಾಣ ಮಾಡಿ ಹಿಂದೂ ಸಮಾಜ ಒಂದುಗೂಡಿಸುವ ಉದ್ದೇಶಕ್ಕಾಗಿ ಈ ಸಮ್ಮೇಳನ. ಆಂಜನೇಯ ಜನ್ಮ ಸ್ಥಳ, ವಿಜಯನಗರ ಸಾಮ್ರಾಜ್ಯದ ಪ್ರದೇಶವಾಗಿರುವ ಗಂಗಾವತಿ ಹೆಮ್ಮೆಯ ನಾಡಾಗಿದೆ. ಹಿಂದೂ ಸಾಮ್ರಾಜ್ಯ ಕಟ್ಟಲು ಶಿವಾಜಿಗೂ ವಿಜಯನಗರ ಸಾಮ್ರಾಜ್ಯ ಪ್ರೇರಣೆಯಾಗಿದೆ. ಇಂತ ಪುಣ್ಯಭೂಮಿಯಲ್ಲರುವ ಗಂಗಾವತಿ ಹಿಂದೂ ಸಂಘಟನೆಯಲ್ಲಿ ಗಟ್ಟಿಯಾಗಬೇಕು. ಭಾರತ ಜಗತ್ತಿನಲ್ಲಿಯೇ ಪುಣ್ಯಭೂಮಿಯಾಗಿದೆ. ಇಂತಹ ಪೂಣ್ಯ ಭೂಮಿಯ ಮೇಲೆ ಸಾವಿರಾರು ವರ್ಷಗಳ ಕಾಲ ಮೋಘಲರು, ಡಚ್ಚರು, ಹೂಣರು, ತರುಕರು, ಬ್ರಿಟೀಷರು ದಾಳಿ ಮಾಡಿದ್ದಾರೆ. ಈಗಲೂ ಕೂಡಾ ಮುಸ್ಲಿಂ ಉಗ್ರರು ಭಾರತದ ನೆಲದಲ್ಲಿ ನಿರಂತರ ದಾಳಿ ನಡೆಸುತ್ತಿದ್ದಾರೆ. ಅವರ ಸಂತತತಿಗಳು ಗಂಗಾವತಿ ಸೇರಿದಂತೆ ಪ್ರತಿಯೊಂದು ಊರಿನಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ. ಇಂತಹ ದಾಳಿಯನ್ನು ತಡೆಯಲು ಹಿಂದುಗಳು ಒಂದಾಗುವ ಅವಶ್ಯಕತೆ ಇದೆ. ನಮ್ಮ ಮನೆ, ಮಂದಿರಗಳಿಗೆ ಹಾನಿ ಮಾಡುವುದು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವಾಗ ಹಿಂದು ಮನೆಗಳ ಮಕ್ಕಳು ನಿದ್ರಿಸುತ್ತಿದ್ದರೆ ಹೇಗೆ. ಪ್ರತಿಯೊಬ್ಬರು ನಿದ್ದೆಯಿಂದ ಎದ್ದು ಬರಬೇಕು. ಮಕ್ಕಳಲ್ಲಿ ಸಂಸ್ಕಾರ, ಸಾಮರಸ್ಯ ಮೂಡಿಸಲು ಎಲ್ಲರು ಮುಂದಾಗಬೇಕು ಎಂದು ಕರೆ ನೀಡಿದರು.

ಹಿಂದೂ ಸಮ್ಮೇಳನ ಸಮಿತಿಯ ನಗರ ಸಂಯೋಜಕ, ಮಕ್ಕಳ ವೈದ್ಯ ಡಾ.ಅಮರೇಶ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮ, ಸಂಸ್ಕೃತಿ ಮತ್ತು ಪರಿಸರ, ಸಾಮರಸ್ಯದ ಜಾಗೃತಿ ಮೂಡಿಸಿ ಹಿಂದು ಸಮಾಜವನ್ನು ಸಂಘಟಿತಗೊಳಿಸುವ ಉದ್ದೇಶದಿಂದ ನಗರದ ವಿವಿಧ ವಾರ್ಡಗಳಲ್ಲಿ ಹಿಂದು ಸಮ್ಮೇಳನ ನಡೆಸಲಾಗುತ್ತಿದೆ. ಪೂರ್ವ ಭಾಗದ ಈ ಹಿಂದೂ ಸಂಗಮದಲ್ಲಿ ಮಕ್ಕಳಲ್ಲಿ ಸಾಹಸ, ಸಂಸ್ಕಾರ ಮೂಡಿಸಲಾಗುತ್ತಿದೆ. ಗಂಗಾವತಿಯಲ್ಲಿ ಇತ್ತಿಚಿಗೆ ಹಿಂದು ಯುವಕನ ಮೇಲೆ ದೌರ್ಜನ್ಯ ನಡೆದಿರುವುದು ಅತ್ಯಂತ ಅಘಾತಕಾರಿಯಾಗಿದೆ. ಇಂತಹ ಘಟನೆಗಳು ನಡೆಯದಂತೆ ಗಂಗಾವತಿಯ ಸಮಸ್ಥ ಹಿಂದು ಜನತೆ ಒಗ್ಗಟ್ಟಾಗಬೇಕು. ನಗರಾದಾದ್ಯಂತ ನಡೆಯುವ ಸಮ್ಮೇಳನಗಳ ಯಶಸ್ವಿಗೆ ಸಹಕಾರ ನೀಡುತ್ತಿರುವ ಸಮಸ್ಥ ಹಿಂದುಗಳಿಗೆ ಅಭಿನಂದಿಸಿಸುತ್ತೇನೆ ಎಂದರು. ಸಮಿತಿ ಭಾಗದ ಅಧ್ಯಕ್ಷ ನಾಗರಜ ಅವರು ವಂದಿಸಿದರು. ಅಕ್ಷಯ ತಂಜಾವೂರ ಸ್ವಾಗತಿಸಿರು. ಸೌಮ್ಯ ನಿರ್ವಹಿಸಿದರು. ಅನಿಲ್ ಭಟ್ ಮತ್ತು ಪವನ ಜೋಶಿ ಅವರ ವೇದ ಘೋಷದಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಾಲಕಿಯರಿಂದ ಭರತ ನಾಟ್ಯ ಮತ್ತು ಲಕ್ಷ್ಮೇಶ್ವರ ಚಾರಿಟೆಬಲ್ ಸಂಸ್ಥೆಯ ವಿಕಲ ಚೇತನ ಮಕ್ಕಳಿಂದ ನಡೆದ ಮಲ್ಲಕಂಬ ಸಾಹಸ ಪ್ರದರ್ಶನ ಜನರನ್ನು ಮಂತ್ರಮುಗ್ದಗೊಳಿಸಿತು. ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಸಮಿತಿಯ ಕಾರ್ಯದರ್ಶಿ ಗಿರೀಶ ರಾಯ್ಕರ್, ಖಜಾಂಚಿ ಬದರಿ ಆದಾಪುರ, ಸಮಿತಿ ಪ್ರಮುಖರಾದ ಚಂದ್ರು ಹಿರೇಮಠ, ನೀಲಕಂಠಪ್ಪ ನಾಗಶೆಟ್ಟಿ, ವೆಂಕಟೇಶ ದಾಸನಾಳ, ಗುರುರಾಜ ಚಿರ್ಚನಗುಡ್ಡ, ಮಂಜುನಾಥ ಪತ್ತಾರ, ಮೌನೇಶ ಪತ್ತಾರ, ಅಕ್ಷಯ ತಂಜಾವೂರ, ಹನುಮಂತಪ್ಪ, ಶಶಿಧರ ಮತ್ತಿತರು ಇದ್ದರು. ಪೋಟೋ- 1 – ಶುವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ.2- ಪೌರ ಕಾರ್ಮಿಕರುಗೆ ಸನ್ಮಾನ3- ಮಲ್ಲಕಂಬ ಪ್ರದರ್ಶನ.

