ನೂತನ ಬಸ್ ನಿಲ್ದಾಣದ ಹತ್ತಿರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಬೇಕು ಹೆಚ್ ಆರ್ ಶ್ರೀನಾಥ್ ಹೇಳಿಕೆ….

ನೂತನ ಬಸ್ ನಿಲ್ದಾಣದ ಹತ್ತಿರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಬೇಕು ಹೆಚ್ ಆರ್ ಶ್ರೀನಾಥ್ ಹೇಳಿಕೆ….

ಗಂಗಾವತಿ ಫೆ 19:ಛತ್ರಪತಿ ಶಿವಾಜಿ ಮಹಾರಾಜರ ವೃತ್ತವನ್ನು ಇಲ್ಲಿ ನಿರ್ಮಿಸಿರುವುದು ಸೂಕ್ತವಲ್ಲ ಅವರು ನಮ್ಮ ದೇಶಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಎಷ್ಟು ಪ್ರತಿಮೆ ಮಾಡಿದರು ಕಡಿಮೆ ಎಂದು ವಿಧಾನ ಪರಿಷತ್ ಮಾಜಿ ಸಚಿವರಾದ ಹೆಚ್ ಆರ್ ಶ್ರೀನಾಥ್ ಹೇಳಿದರು.ನಗರದ ರಾಯಚೂರ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣದ ಸಮೀಪದ ಛತ್ರಪತಿ ಶಿವಾಜಿ ಮಹಾರಾಜರ ಸರ್ಕಲ್ ಹತ್ತಿರ ಗುರುವಾರ ಹಮ್ಮಿಕೊಂಡಿದ್ದ 399 ನೇ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಮಾತನಾಡಿ, ಇಂದು ಅನೇಕ ನಿಗಮಗಳು ಆಗಿವೆ ಆದರೆ ಕ್ಷತ್ರಿಯ ಒಕ್ಕೂಟ ಸಮಾಜದ ನಿಗಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ನೀಡುತ್ತಿಲ್ಲ.

ಈ ಒಂದು ಸಮಾಜವನ್ನು ಗುರುತಿಸಿ ಅನುದಾನ ನೀಡುವಂತಹ ಕೆಲಸ ಮಾಡಬೇಕು. ಇನ್ನು ನಮ್ಮ ಗಂಗಾವತಿ ನಗರದಲ್ಲಿ ಮುಂದಿನ ವರ್ಷದೊಳಗೆ ಶಿವಾಜಿ ಮಹಾರಾಜ ದೊಡ್ಡ ಪ್ರತಿಮೆ ನೂತನ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಷ್ಟಾಪನೆ ಮಾಡಬೇಕು ಎಂದರು.ನಂತರ ಬಿಜೆಪಿಯ ಹಿರಿಯ ಮುಖಂಡ ತಿಪ್ಪೇರುದ್ರಸ್ವಾಮಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ.

ಅವರು ಕೇವಲ ಮರಾಠರಿಗೆ ಸೀಮಿತವಲ್ಲ, ಇಡಿ ಭಾರತ ದೇಶದಲ್ಲಿ ಹಿಂದುತ್ವ ನಶಿಸುವ ಸಮಯದಲ್ಲಿ ಹಿಂದುತ್ವಕ್ಕೆ ಮತ್ತೆ ಪುನರ್ ಜನ್ಮ ನೀಡಿದ ಮಹಾನ್ ವ್ಯಕ್ತಿ. ಹಾಗೂ ಮಹಾರಾಜರು ನಮ್ಮ ಕರ್ನಾಟಕದ ಶ್ರೀಮಂತ ಗಡ ಎಂಬ ಗ್ರಾಮಕ್ಕೆ ಆಗಮಿಸಿ ಅಲ್ಲಿರುವಂತಹ ಹೋಳಲಮ್ಮ ದೇವಿ ಶಿವಾಜಿಯ ಸೌರ್ಯಾವನ್ನು ಮೆಚ್ಚಿ ಅವರಿಗೆ ಖಡ್ಗವನ್ನು ನೀಡಿದರು ಎಂಬ ಮಾಹಿತಿ ಇದೆ. ಅಂತಹ ಒಬ್ಬ ಶ್ರೇಷ್ಠ ಮಹಾರಾಜ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಎಂದು ಹೇಳಿದರು.ನಂತರ ಸಂತೋಷ್ ಕೇಲೋಜಿ ಹಾಗೂ ವಕೀಲರಾದ ನಾಗರಾಜ ಗುತ್ತೇದಾರ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಯುವ ಮುಖಂಡರಾದ ಸರ್ವೇಶ್ ಮಾಂತ ಗೊಂಡ , ಕ್ಷತ್ರಿಯ ಸಮಾಜ ಅಧ್ಯಕ್ಷರಾದ ತಿಪ್ಪಣ್ಣ ಬೀದರ್ ಕರ್, ಮರಾಠ ಸಮಾಜದ ಅಧ್ಯಕ್ಷರಾದ ಶರಬೋಜಿ ರಾವ್ ಗಾಯಕವಾಡ, ಅಮರ ಜ್ಯೋತಿ ವೆಂಕಟೇಶ, ಮಾತಾ ಅನ್ನಪೂರ್ಣ ಸಿಂಗ್, ಅಯ್ಯನಗೌಡ ಹೇರೂರು, ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾಗಿರುವ ಚನ್ನಬಸವ ಜೆಕಿನ್, ಉಪತಾಸಿಲ್ದಾರರಾದ ಮಹಾಂತಗೌಡ ಪಾಟೀಲ್, ಮರಾಠ ಸಮಾಜದ ಮುಖಂಡರಾದ, ಕಾಶಿನಾಥ್ ಚಿತ್ರಗಾರ, ಮಾರ್ತಾಂಡ ರಾವ್ ಗಾಯಕವಾಡ, ರಮೇಶ್ ರಾವ್, ಅರವಿಂದ ಕುಟ್ರೆ, ರಮೇಶ್ ರಾವ್ ಎನ್, ಸಿದ್ದು ಗೌಳಿ, ಹಾಗೂ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *