ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸವನ್ನು ವಂಚಿಸಿದ ಕನಕಗಿರಿ ಕೆಪಿಎಸ್ ಶಾಲೆ..

ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸವನ್ನು ವಂಚಿಸಿದ ಕನಕಗಿರಿ ಕೆಪಿಎಸ್ ಶಾಲೆ..

ಕನಕಗಿರಿ ಪಟ್ಟಣದಲ್ಲಿ ಇರುವ ಕೆಪಿಎಸ್ ಶಾಲೆ ವತಿಯಿಂದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸವನ್ನು ವಂಚಿಸಿದರೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ವಿದ್ಯಾರ್ಥಿ ಯುವ ಮುಂಖಡ ನೀಲಕಂತ ಬಡಿಗೇರ ಅವರು,ಕರ್ನಾಟಕ ರಾಜ್ಯ ಪ್ರವಾಸೋದ್ಯೋಮ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕೂಡಲೇ ಉಪಪ್ರಾಂಶುಪಾಲರಾದ ಜಗದೀಶ ಹಾದಿಮನಿ ಅವರನ್ನು ಅಮಾನತ್ತು ಮಾಡಿ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯೋಮ ಇಲಾಖೆಯ ಮಹತ್ವಕಾಂಕ್ಷೇಯ ಯೋಜನೆ ಕರ್ನಾಟಕ ದರ್ಶನ ಯೋಜನೆ. ಈ ಯೋಜನೆಯು ಸರ್ಕಾರಿ ಮತ್ತು ಕ್ರೈಸ್ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಮಕ್ಕಳಿಗೆ ಉಚಿತ ಪ್ರವಾಸವನ್ನು ಹಮ್ಮಿಕೊಳ್ಳುವುದಾಗಿದೆ. ‘ದೇಶ ಸುತ್ತು ನೋಡು ಕೋಶ ಓದು ನೋಡಿ’ ಎನ್ನುವ ಮಾತು ಜಗದಜ್ಜಾಯಿರ. ಇಂತಹ ಮಹತ್ವಕಾಂಕ್ಷೇಯ ಯೋಜನೆಯನ್ನು ಉದ್ದೇಶ ಪೂರ್ವಕವಾಗಿ ಕೆಲ ಶಾಲೆ/ಕಾಲೇಜುಗಳು ಎಸ್ಸಿ/ಎಸ್ಪಿ ಬಡ ಮಕ್ಕಳಿಗೆ ಪ್ರವಾಸಭಾಗ್ಯವನ್ನು ವಂಚಿಸಿತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕನಕಗಿರಿ ತಾಲೂಕ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.ಅಖಂಡ ಗಂಗಾವತಿ ತಾಲೂಕ ಕನಕಗಿರಿ, ಕಾರಟಗಿಯನ್ನು ಒಳಗೊಂಡು ಸರ್ಕಾರಿ ಶಾಲೆಗಳು,ಕ್ರೈಸ್ ಶಾಲೆ, ಕೆಆರ್‌ಎಸ್ ಶಾಲೆ, ಇಂಧಿರಾಗಾಂಧಿ ವಸತಿ, ಶಾಲೆಯ ಒಟ್ಟು 12ಶಾಲೆಯ ಎಸ್ಸಿ-98, ಎಸ್ಪಿ-38 ಮಕ್ಕಳು ಸೇರಿದಂತೆ ಒಟ್ಟು-176 ಮಕ್ಕಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಿತ್ತು. ಆದರೆ ಆಯಾ ಶಾಲೆಯ ಉಪಪ್ರಾಂಶುಪಾಲರು ಮುಖ್ಯೋಪಾಧ್ಯಾರ ಜವಬ್ದಾರಿಯಿಂದ ಕಳಿಸಿಕೊಡಬೇಕಿತ್ತು. ಆದರೆ ಇವರುಗಳ ಬೇಜವಬ್ದಾರಿಯಿಂದ ಕೇವಲ 136 ಮಕ್ಕಳು ಕರ್ನಾಟಕ ದರ್ಶನ ಮಾಡಿರುವುದು. ದುರಂತವೇ ಸರಿ. ಅದರಲ್ಲಿ ಪ್ರಮುಖವಾಗಿ ಕನಕಗಿರಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ಜಗದೀಶ ಹಾದಿಮನಿಯವರು ಉದ್ದೇಶ ಪೂರ್ವಕವಾಗಿ ಒಂದು ಮಗುವನ್ನು ಸಹ ಕರ್ನಾಟಕ ದರ್ಶನಕ್ಕೆ ಕಳಿಸದೆ ಮಕ್ಕಳ ಪ್ರವಾಸಭಾಗ್ಯವನ್ನು ಕಸಿದಿರುವುದು ಬೆಳಕಿಗೆ ಬಂದಿದೆ. ‘ಮೇಲಾಧಿಕಾರಿಗಳು ಆನೇಕ ಸಾರಿ ಸಭೆಗೆ ಕರೆದರು ಹಾಜರಗದೆ ಆದೇಶವನ್ನು ಪಾಲನೆ ಮಾಡದೆ ಗಾಳಿಗೆ ತುರಿದ್ದಾರೆ ಸಂಘಟನೆಗಳ,ಮೇಲಾಧಿಕಾರಿಗಳ, ಮಾಧ್ಯಮಗಳ ಗಮನಕ್ಕೆ ಬಂದ ನಂತರ ಈ ವಿಷಯನ್ನು ಮುಚ್ಚಿಹಾಕುವ ಸಲುವಾಗಿ ಕಳಿಸಬೇಕಿದ್ದ ವಿದ್ಯಾರ್ಥಿಗಳಿಗೆ ಧಮ್ಮಿಹಾಕಿ, ಬೆದರಿಸಿ ಅನೇಕ ಸಬೂಬುಗಳನ್ನು ಹೇಳಿ ಪತ್ರ ಬರಿಸಿಕೊಂಡು ಮುಚ್ಚಿಹಾಕುವ ಹುನ್ನಾರ ನೆಡೆಸಿದ್ದಾರೆ. ಈ ಕ್ರಮವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ನೀಲಕಂಠ ಬಡಿಗೇರ್ ಮಾನ್ಯ ಕರ್ನಾಟಕ ರಾಜ್ಯ ಪ್ರವಾಸೋದ್ಯೋಮ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನೀಲಕಂಠ ಬಡಿಗೇರ (ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಂಚಾಲಕರು ಕನಕಗಿರಿ ಪಾಮಣ್ಣ ಅರಳಿಗನೂರ (ಪ್ರಗತಿಪರ ಸಂಘಟನೆಗಳ ಒಕ್ಕೂಟ ಬಸವರಾಜ್ ಮೆಣಸಿನಕಾಯಿ ಹನುಮಂತ ಹುಲಿಹೈದರ (ಪ್ರಗತಿಪರ ಸಂಘಟನೆಗಳ ಒಕ್ಕೂಟ) ವೀರೇಶ್ ಸೇರಿ ಹಲವರು ಉಪಸ್ಥಿತರಿದ್ದರು.

ರಮೇಶ್ ಈಳಿಗೆರ್ ವಾಲ್ಮೀಕಿ ಹಸ್ತ್ರ ತಾಲೂಕ್ ವರದಿಗಾರ ಫೋನ್ ನಂಬರ್ -9035332032

Leave a Reply

Your email address will not be published. Required fields are marked *