ಮಹಾಶಿವರಾತ್ರಿ ಅಮಾವಾಸ್ಯೆಯ ಪ್ರಯುಕ್ತ ಶ್ರೀ ಅಮೃತೇಶ್ವರ ದೇವರಿಗೆ ವಿಶೇಷ ಪೂಜೆ. ಹಾಗೂ ಅನ್ನ ಸಂತರ್ಪಣೆ….

ಮಹಾಶಿವರಾತ್ರಿ ಅಮಾವಾಸ್ಯೆಯ ಪ್ರಯುಕ್ತ ಶ್ರೀ ಅಮೃತೇಶ್ವರ ದೇವರಿಗೆ ವಿಶೇಷ ಪೂಜೆ. ಹಾಗೂ ಅನ್ನ ಸಂತರ್ಪಣೆ….

ಗಂಗಾವತಿ. ಇತಿಹಾಸ ಪ್ರಸಿದ್ಧ ವಿಜಯನಗರ ಹಾಗೂ ಆನೆಗೊಂದಿ ಸಂಸ್ಥಾನ ವ್ಯಾಪ್ತಿಯ ಗಂಗಾವತಿಯ ದೇವಘಾಟ ಬಳಿಯಲ್ಲಿರುವ ಚಾಲುಕ್ಯರ ದೊರೆ ಎರಡನೇ ಸೋಮೇಶ್ವರ ನಿರ್ಮಿಸಿದ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಮಾವಾಸ್ಯೆಯ ದಿನವಾದ ಮಂಗಳವಾರ ದಿನದಂದು ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆಯನ್ನು ನಡೆಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಹನುಮಂತಪ್ಪ ಶ್ರೀ ಅಮೃತೇಶ್ವರ ದೇವರಿಗೆ ಜಲಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು ಇದೇ ಸಂದರ್ಭದಲ್ಲಿ ಶ್ರೀ ಗಂಗಾಪರಮೇಶ್ವರಿ ಭಜನಾ ಮಂಡಳಿಯ ಶ್ರೀಮತಿ ಸುಮತಿ ದುರ್ಗಾ ದಾಸ್ ಸದಸ್ಯರು ಎರಡು ಗಂಟೆಗಳ ಕಾಲ ಭಜನೆ ಮಾಡಿ ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಸುಮತಿ ದುರ್ಗಾ ದಾಸ ಮಾತನಾಡಿ ಇತಿಹಾಸ ಪ್ರಸಿದ್ಧ ದೇವಾಲಯಗಳು ಸರ್ಕಾರ ಜೀರ್ಣೋದ್ಧಾರಕ್ಕೆ ಮುಂದಾಗಬೇಕು ಭಕ್ತರು ಧಾರ್ಮಿಕ ಆಚರಣೆಗಳ ಮೂಲಕ ಸಂಘಟಿತರಾಗಿ ಸನಾತನವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಸಲಹೆ ನೀಡಿದರು. ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಹನುಮಂತಪ್ಪ ಈಡಿಗರ ಮಾತನಾಡಿ ದ 15 ವರ್ಷಗಳಿಂದ ಶ್ರೀ ಅಮೃತೇಶ್ವರ ದೇವಸ್ಥಾನ ಸಮಿತಿ ಹಾಗೂ ಸದ್ಭಕ್ತರು ವಿಪ್ರ ದೇವಘಾ ಟ ಬಳಿಯಲ್ಲಿರುವ ಸದರಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಅತ್ಯಂತ ಶಕ್ತಿಪೀಠವಾದ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ಮುಂದಾಗಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ರಮೇಶ್ ವಿಡಿಗರ್ ರಾಜು ನಾಗರಾಜ ಇತರರು ಉಪಸ್ಥಿತರಿದ್ದರು. ಅಪಾರ ಭಕ್ತಾದಿಗಳು ಪಾಲ್ಗೊಂಡು ದರ್ಶನ ಪಡೆದು ಪುನೀತರಾದರು.ಬಾಕ್ಸ್… ಹಿರಿಯ ಪತ್ರಕರ್ತ ವಸಂತ ಕುಮಾರ. ನ ಮೂರನೇ ಕಣ್ಣಿಗೆ ಗೋಚರಿಸಿದ ಬೃಹತ್ ಮೊಸಳೆ ಇದೇ ಸಂದರ್ಭದಲ್ಲಿ ದೇವಸ್ಥಾನದ ವರದಿಗಾಗಿ ತೆರಳಿದ ಹಿರಿಯ ಪತ್ರಕರ್ತರಾದ ವಸಂತ್ ಕುಮಾರ್ ಅವರ ಮೂರನೆಯ ಕಣ್ಣದಾ ಕ್ಯಾಮೆರಾ ಕಣ್ಣಿನಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ ದೇವಘಾ ಟದ ನದಿ ಪಾತ್ರದಲ್ಲಿ ಬೃಹತ್ ಮೊಸಳೆ ಎಂದು ಸೆರೆಯಾಗಿದ್ದು ದೇವಸ್ಥಾನಕ್ಕೆ ಆಗಮಿಸಿದ ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿತು.

ಇದಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪತ್ರಕರ್ತ ಪಿ ದಶರಥ ರಾವ್ ಮಾತನಾಡಿ ಈಗಾಗಲೇ ರೈತರು ಸದರಿ ನದಿಯಲ್ಲಿ ಮೂರು ನಾಲ್ಕು ಮೊಸಳೆಗಳು ಇವೆ ಎಂಬ ಈ ಹಿಂದಿನ ರೈತರ ಹೇಳಿಕೆಗಳು ಇಂದು ಸ್ಪಷ್ಟವಾಗಿ ಗೋಚರಿಸಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆ ಇದೆ ಎಂಬ ಅಂಶ ಗೊತ್ತಿದ್ದರೂ ಇದುವರೆಗೂ ಯಾವುದೇ ಒಂದು ನಾಮ ಫಲಕವನ್ನು ಹಾಕದೆ ಅವರ ನಿರ್ಲಕ್ಷ್ಯಕ್ಕೆ ಕೈ ಗ ನ್ನಡಿಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಜೊತೆಗೆ ರೈತರು ಯುವಕರು ಹೆಚ್ಚಾಗಿ ಪಾರ್ಟಿಗಳಿಗೆ ಆಗಮಿಸುತ್ತಿದ್ದು ಯಾವುದೇ ಕಾರಣಕ್ಕೂ ನದಿ ಪಾತ್ರಕ್ಕೆ ಹೋಗದಂತೆ ಪ್ರಸ್ತುತ ಯುವ ಜನಾಂಗಕ್ಕೆ ಮನವಿ ಮಾಡಿದರು. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ದೇವಘಟ್ಟ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕಂಡುಬರುವ ಮೊಸಳೆಗಳ ಸ್ಥಳಗಳನ್ನು ಗುರುತಿಸಿ ನಾಮಫಲಕವನ್ನು ಹಾಕುವುರೆ ಎಂದು ಕಾದು ನೋಡಬೇಕಾಗಿದೆ…

Leave a Reply

Your email address will not be published. Required fields are marked *