ನೂತನ ಸೇವಾಲಾಲ ವೃತ್ತ ಉದ್ಘಾಟನೆ ಶಾಸಕ ಕಾಶಪ್ಪನವರಿಂದ.

ಇಳಕಲ್:ಇಳಕಲ್ ನಗರದಲ್ಲಿ ಫೆ.15 ರಂದು ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ,ಶಾಸಕ ವಿಜಯಾನಂದ ಎಸ್.ಕಾಶಪ್ಪನವರುಶ್ರೀ ಸಂತ ಸೇವಾಲಾಲ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ ಅರ್ಥಪೂರ್ಣವಾಗಿ ಜಯಂತಿ ಆಚರಿಸಿದರು.ಇದೇ ಸಂದರ್ಭದಲ್ಲಿಇಳಕಲ್ ನಗರದಶ್ರೀನಿವಾಸ ಚಿತ್ರಮಂದಿರಹತ್ತಿರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಂತ ಸೇವಾಲಾಲ ವೃತ್ತವನ್ನು ಶಾಸಕರು ಲೋಕಾರ್ಪಣೆ ಗೋಳಿಸಿ ನಂತರಬೈಕ್ ರ್ಯಾಲಿಗೆ ಚಾಲನೆ ನೀಡಿದರು.ಬಂಜಾರ ಸಮಾಜದ ಮುಖಂಡರು ಶಾಸಕರಿಗೆಲಂಬಾಣಿ ಉಡುಪು ಉಡುಗೊರೆಯಾಗಿ ನೀಡಿದರು.ಇದೇ ಸಂದರ್ಭದಲ್ಲಿಸಮಸ್ತ ಬಂಜಾರ ಸಮಾಜದ ಗುರು-ಹಿರಿಯರು,ಕಾಂಗ್ರೆಸ್ ಪಕ್ಷದ ಮುಖಂಡರು,ಯುವಕರು ಉಪಸ್ಥಿತರಿದ್ದರು.

