ಶೀರ್ಷಿಕೆ :>ಪ್ರೇಮ ಕವಿಗೋಷ್ಠಿ’ಪ್ರೇಮಕ್ಕೆ ಹೋಲಿಕೆ ಇಲ್ಲ : ಮಹಾಲಕ್ಷ್ಮಿ…

ಗಂಗಾವತಿ : ಪ್ರೇಮ ಎಂಬುದು ಯೋಗವಿದ್ದಂತೆ, ಇದಕ್ಕೆ ಹೋಲಿಕೆ ಇಲ್ಲ. ಪ್ರೇಮ ಪವಿತ್ರವಾಗಿದ್ದು ಆರಾಧಿಸಬೇಕೆಂದು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಡಾ.ಸಿ.ಮಹಾಲಕ್ಷ್ಮಿ ಹೇಳಿದರು. ಇಲ್ಲಿನ ಪಬ್ಲಿಕ್ ಆವರಣದ ಶ್ರೀ ಕಲಾ ನಿಕೇತನ ವೇದಿಕೆಯಲ್ಲಿ ಶನಿವಾರ ಮಧ್ಯಾಹ್ನ ಶ್ರೀ ಕಾಮಧೇನು ನ್ಯೂಟ್ರಿಷನ್ ಸೆಂಟರ್ ಸಹಯೋಗದಲ್ಲಿ ‘ಪ್ರೇಮ ಮಧುರ’ ಶೀರ್ಷಿಕೆಯಡಿ ಕಾವ್ಯಲೋಕ ಸಂಘಟನೆ ಆಯೋಜಿಸಿದ್ದ 112ನೇ ಕವಿಗೋಷ್ಠಿ(ಪ್ರೇಮ ಕವಿಗೋಷ್ಠಿ) ಉದ್ಘಾಟಿಸಿ ಅವರು ಮಾತನಾಡಿದರು.ಪ್ರೇಮ ವಿಕಸನ ಗೊಳಿಸುತ್ತದೆ. ನಾನಾ ಬಗೆಯ ಪ್ರೇಮಕ್ಕೆ ನೂರಾರು ಭಾವವಿದೆ.

ಪ್ರೇಮ ಸಿದ್ಧ ಔಷಧಿಯಾಗಿದ್ದು ಬದುಕಿಸುತ್ತದೆ. ಪ್ರೇಮಕ್ಕೆ ಕೆಟ್ಟ ಅಭಿಪ್ರಾಯ ಬೇಡ ಎಂದರು.ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಶರಣಪ್ಪ ಹಕ್ಕಂಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕನ್ನಡದ ‘ಪ್ರೇಮ’ ಪದಕ್ಕೆ ಪವಿತ್ರತೆ ಇರುವಷ್ಟು ಇಂಗ್ಲಿಷಿನ ಲವ್ ಪದಕ್ಕೆ ಇಲ್ಲ. ಕವಿ ಕವಯಿತ್ರಿಯರ ಕವನಗಳು ಸಂಗೀತ ಸಂಯೋಜನೆಯೊಂದಿಗೆ ಹಾಡುಗಳಾಗಿ ಮನ್ನಣೆ ಪಡೆಯಲಿ ಎಂದರು.ಸಾವಯವ ಕೃಷಿಕ, ಕಾರಟಗಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕರಿಸಿದ್ದನಗೌಡ ಮಾಲಿ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸೃಷ್ಟಿ ಮತ್ತು ಗುರುತಿಸುವಿಕೆಗೆ ಅವಿನಾಭಾವ ಸಂಬಂಧವಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಸಾಹಿತ್ಯ ರಚನೆ ಆಗಬೇಕು. ಅಧ್ಯಯನ ಮತ್ತು ಅನುಭವದಿಂದ ಉತ್ತಮ ಸಾಹಿತ್ಯ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಂಪ್ಲಿ ಮುದ್ದಾಪುರ ನಂ.10 ಗ್ರಾಪಂ ಸದಸ್ಯ ಚಂದ್ರಶೇಖರ ಗೌಡ, ಜಾನಪದ ಕಲಾವಿದ ಕಲ್ಯಾಣಂ ನಾಗರಾಜ, ಸಿ.ಮಹಾಲಕ್ಷ್ಮಿ, ಶರಣಪ್ಪ ಹಕ್ಕಂಡಿ ಅವರುಗಳನ್ನು ಸನ್ಮಾನಿಸಲಾಯಿತು.

ಬಸವ ನೀಲಾಂಬಿಕೆ ಮಹಿಳಾ ‌ಸಂಘದ ಅಧ್ಯಕ್ಷೆ ರತ್ನಮ್ಮ ಅರೆಗಾರ, ನ್ಯಾಯವಾದಿ ಸಂಕಲ್ಪಕುಮಾರ, ಹಿರಿಯ ನಾಟಕಕಾರ ಜೆ.ಸೋಮಪ್ಪ ಪಾಲ್ಗೊಂಡಿದ್ದರು. ಡಾ.ಅನಸೂಯ ವೈ.ಟಿ.,ಶರಣಮ್ಮ ಅಂಗಡಿ, ಎಂ.ಎಸ್.ನಾರಾಯಣ್, ಶಾಮೀದ್ ಲಾಠಿ, ಐ.ಎಂ.ಕುಂಬಾರ, ಯು.ಆರ್.ಶಿವರುದ್ರಪ್ಪ, ಶಶಿಕಲಾ ಕುರುಗೋಡು, ಚಿದಾನಂದ ಕೀರ್ತಿ, ವೆಂಕಟೇಶ್ ಗುಡೂರ, ಭುವನೇಶ್ವರಿ ಸಾರಂಗಮಠ, ಸೋಮಶೇಖರ್ ಕಂಚಿ, ದೇವೇಂದ್ರಪ್ಪ ತೊಂಡಿಹಾಳ, ಮಹಮದ್ ಮಿಯಾ, ಭೀಮನಗೌಡ ಕೇಸರಟ್ಟಿ, ಬಸವರಾಜ ಹೇರೂರು, ನರ್ಮದಾಬಾಯಿ ಕುಲ್ಕರ್ಣಿ, ಆನಂದ ಸಾರಂಗಮಠ ಅವರುಗಳು ಕವನ ವಾಚಿಸಿದರು. ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಕೃಷ್ಣ ಆಶೀಶ್, ನ್ಯೂಟ್ರಿಷನ್ ಸೆಂಟರ್ ನ ಸಂಚಾಲಕರಾದ ಶಿವದೀಪಕ್ ಹಾದಿಮನಿ, ವಿನುತಾ ಹಾದಿಮನಿ, ಕಲಾವಿದ ಭೀಮರಾಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *