ಫೆಬ್ರವರಿ 15ರಂದು ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ..

ಗಂಗಾವತಿ ಮಹಾನಗರದ ಕುರುಹಿನ ಶೆಟ್ಟಿ ಸಮಾಜದ ವತಿಯಿಂದ ಫೆಬ್ರವರಿ 15ರಂದು ಭಾನುವಾರ ಮಹಾಶಿವರಾತ್ರಿ ಅಂಗವಾಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಭಾನುವಾರ ಬೆಳಿಗ್ಗೆ 05, ಗಂಟೆಯಿಂದ 7.30 ರವರೆಗೆ ರುದ್ರಾಭಿಷೇಕ ಮತ್ತು ಕ್ಷೀರಾಭಿಷೇಕ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ಗೆ ಕ್ಷೀರಾಭಿಷೇಕ ಮಧ್ಯಾಹ್ನ 3:30 ರಿಂದ ಶ್ರೀ ಶಿವನ ದರ್ಶನ ಮತ್ತು ರಾತ್ರಿ ಹತ್ತು ಗಂಟೆಯಿಂದ ಶ್ರೀ ಶಿವ ಭಜನೆ ಕಾರ್ಯಕ್ರಮ ನಡೆಯಲಿದೆ,, ದೇವಸ್ಥಾನದ ಎಲ್ಲಾ ಕಮಿಟಿಗಳ, ಸರ್ವ ಪದಾಧಿಕಾರಿಗಳು ಮತ್ತು ಕುರುಹಿನ ಶೆಟ್ಟಿ ಸಮಾಜ ಬಾಂಧವರ ನೇತೃತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಎಲ್ಲಾ ಪೂಜಾ ಕಾರ್ಯಕ್ರಮಗಳು ವೈಭವದಿಂದ ನಡೆಯಲಿದೆ ಗಂಗಾವತಿ ಮಹಾನಗರದ ಹೃದಯ ಭಾಗದಲ್ಲಿರುವ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಕಾರ್ಯಕ್ರಮದ ಪೂಜಾ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತಾದಿಗಳು ಭಾಗವಹಿಸಿ ಶ್ರೀ ನೀಲಕಂಠೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ವಾಸ್ತು ತಜ್ಞರಾಗಿರುವ ಡಾ, ಮಂಜುನಾಥ ಬಸಣ್ಣಕುರುಗೋಡ ಅವರು ಭಕ್ತಿಪೂರ್ವಕವಾಗಿ ಮನವಿ ಮಾಡಿದ್ದಾರೆ,,,, ಮಾಹಿತಿಗಾಗಿ 9342270408

