ಗಂಗಾವತಿ ಸಾಮರ್ಥ್ಯ ಸೌಧದಲ್ಲಿ- ಹಣಕಾಸು ಸಾಕ್ಷರತಾ ಸಪ್ತಾಹ…..

ಗಂಗಾವತಿ ಸಾಮರ್ಥ್ಯ ಸೌಧದಲ್ಲಿ- ಹಣಕಾಸು ಸಾಕ್ಷರತಾ ಸಪ್ತಾಹ…..

*ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ಫೆಬ್ರವರಿ 9 ರಿಂದ 13 ರ ವರೆಗೆ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರಲ್ಲಿ ಮುಖ್ಯವಾಗಿ ಬ್ಯಾಂಕಿನ ವ್ಯವಹಾರ ,ಆರ್ಥಿಕ ಶಿಸ್ತು ಮತ್ತು ಕೆವೈಸಿ ಮಾಹಿತಿ ಒದಗಿಸುವ ಉದ್ದೇಶ ಇದಾಗಿದೆ ಎಂದು ಗಂಗಾವತಿ ಭಾರತೀಯ ಸ್ಟೇಟ್ ಬ್ಯಾಂಕ್ ಮಾಜಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ.ಆಂಜನೇಯ ರವರು ಇಂದು ಗಂಗಾವತಿ ಸಾಮರ್ಥ್ಯ ಸೌಧ ಆವರಣದಲ್ಲಿ ಎಸ್ ಬಿ ಐ ಕೊಪ್ಪಳ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ಫಲಾನುಭವಿಗಳಿಗೆ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು* *ಆರ್ಥಿಕ ಸಾಕ್ಷರತಾ ಸಪ್ತಾಹದ ಈ ವರ್ಷದ ಉದ್ದೇಶ – ಕೆವೈಸಿ ಸುರಕ್ಷಿತ ಬ್ಯಾಂಕುಗಳಿಗೆ ನಿಮ್ಮ ಮೊದಲ ಹೆಜ್ಜೆ ಎನ್ನುವ ದಾಗಿದೆ. ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಲವಾರು ಯೋಜನೆಗಳು ಬ್ಯಾಂಕುಗಳ ಮುಖಾಂತರ ಸಾರ್ವಜನಿಕರಿಗೆ ಉಪಯುಕ್ತವಾದ ಮಾಹಿತಿ ಮತ್ತು ಸೌಲಭ್ಯಗಳನ್ನು ವಿಸ್ತರಿಸುವುದು ಸಪ್ತಾಹದ ಉದ್ದೇಶ ಎಂದು ತಿಳಿಸಿದರು ಭಾರತೀಯ ರಿಸರ್ವ್ ಬ್ಯಾಂಕ್ 2016 ರಿಂದ ಪ್ರತಿ ವರ್ಷ ನಿರ್ದಿಷ್ಟ ಜನಸಂಖ್ಯೆ ವಿಭಾಗಗಳನ್ನು ಗುರಿಯಾಗಿಟ್ಟುಕೊಂಡು ನಿರ್ದಿಷ್ಟ ವಿಷಯದ ಮೇಲೆ ಹಣಕಾಸು ಸಪ್ತಾಹ ಕಾರ್ಯಕ್ರಮ ಆಚರಿಸುತ್ತಿದೆ ಎಂದು ತಿಳಿಸಿದರು ಇದರ ಉದ್ದೇಶ ಅಭಿಯಾನ ಗಳ ಮೂಲಕ ಪ್ರಮುಖ ಹಣಕಾಸು ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗಂಗಾವತಿ ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಮತ್ತು ಕೊಪ್ಪಳ ಎಸ್.ಬಿ.ಐ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಗೀತಾ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸ್ವ ಉದ್ಯೋಗಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *