ಶ್ರದ್ಧೆ ಭಕ್ತಿಯಿಂದ ಜರುಗಿದ ಶ್ರೀ ಅಯ್ಯಪ್ಪ ಸ್ವಾಮಿ ಕುಂಭೋತ್ಸವ…

ಶ್ರದ್ಧೆ ಭಕ್ತಿಯಿಂದ ಜರುಗಿದ ಶ್ರೀ ಅಯ್ಯಪ್ಪ ಸ್ವಾಮಿ ಕುಂಭೋತ್ಸವ…

ಗಂಗಾವತಿ. ನಗರದ ಅಯ್ಯಪ್ಪ ಗಿರಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವದ ಪ್ರಯುಕ್ತ 251 ಸುಮಂಗಳಿಯರ ಕುಂಬೋತ್ಸವದ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಜರುಗಿತು. ಬುಧವಾರದಂದು ಗ್ರಾಮ ದೇವತೆ ಶ್ರೀ ದುರ್ಗಾ ದೇವಿ ದೇವಸ್ಥಾನ ದಿಂದ ಆರಂಭವಾದ ಕುಂಭೋತ್ಸವ ಸಕಲ ವಾದ್ಯ ವೈಭವದೊಂದಿಗೆ ಪ್ರಮುಖ ವೃತ್ತಗಳ ಮಾರ್ಗವಾಗಿ ದೇವಸ್ಥಾನಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ವೈವಿಧ್ಯಮಯ ಹೋಮಗಳು ಎಲ್ಲಿ ನೋಡಿದರೂ ಅಲ್ಲಿ ಅಯ್ಯಪ್ಪ ಸ್ವಾಮಿಯ ನಾಮಸ್ಮರಣೆ ವೇದ ಮಂತ್ರ ಘೋಷಗಳು ಬಾನೆತ್ತರಕ್ಕೆ ತಲುಪುವಂತೆ ಬಾಸವಾದವು. ಈ ಹಿಂದೆ ದೇವಸ್ಥಾನದ ಸಂಸ್ಥಾಪನೆಗೆ ಆಗಮಿಸಿದ ಬ್ರಹ್ಮಶ್ರೀ ಚಂದ್ರ ಮೌಳಿ ಗುರುಸ್ವಾಮಿ ಅಧ್ಯಕ್ಷ ಜಟ್ಟಿ ವೀರಭದ್ರ ಪ್ರಸಾದ್ ಭೀಮ್ಸೇನ್ ಬಟ್ ಜೋಶಿ ನಾರಾಯಣಪ್ಪ ನಾಯಕ್ ಹನುಮಂತಪ್ಪ ನಾಯಕ್ ವೀರಭದ್ರಪ್ಪ ನಾಯಕ್ ತಾಯಿ ಬಾಬಾ. ಟಿ ರಾಮಕೃಷ್ಣ ಚಿನ್ನು ಪಾಟಿ ಪ್ರಭಾಕರ್ ಪ್ರಹ್ಲಾದ ಮತ್ತಿತರರು ಭಾಗವಹಿಸಿದ್ದರು.

ಗಂಗಾವತಿ ಸೇರಿದಂತೆ ಸಿಂಧನೂರು ಶ್ರೀರಾಮನಗರ ಬಸಾಪಟ್ಟಣ ಕಾರಟಗಿ.ಮತ್ತಿ ತರ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತರಾದರು.. ದೇವಸ್ಥಾನದ ಪ್ರಧಾನ ಅರ್ಚಕ ಶಂಕರ್ ಭಟ್ ದಿವಾಕರ್ ಶ್ರೀ ಅಯ್ಯಪ್ಪ ಸ್ವಾಮಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ ವಿವಿಧ ಹೂಗಳಿಂದ ಅಲಂಕಾರ ಗಳಿಂದ ಕಂಗೊಳಿಸುವುದರ ಮೂಲಕ ಸಾಕ್ಷಾತ್ ಅಯ್ಯಪ್ಪ ಸ್ವಾಮಿ ಧರೆಗೆ ಇಳಿದು ಬಂದಂತೆ ಭಾಸವಾಯಿತು. ಮಹಾ ಮಂಗಳಾರತಿ ಅನ್ನ ಸಂತರ್ಪಣೆ ಅಚ್ಚುಕಟ್ಟಾಗಿ ನಡೆಸಲಾಯಿತು.

Leave a Reply

Your email address will not be published. Required fields are marked *