ಕರ್ನಾಟಕ ರಕ್ಷಣಾ ಯುವಗಜ ವೇದಿಕೆಯ ರಾಜ್ಯ ಅಧ್ಯಕ್ಷ ಕಾಶಿo ಅಲಿ ಅವರಿಗೆ ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿ,,,,,

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಸೌರಭ ಸಾಂಸ್ಕೃತಿಕ ಕಲಾ ಬಳಗ ಇವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಕರ್ನಾಟಕ ರಕ್ಷಣಾ ಯುವ ಗಜ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಶ್ರೀ ಕಾಸಿಂ ಅಲಿ ಅವರಿಗೆ ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಹಾಗೆಯೇ ರಾಯಚೂರು ಜಿಲ್ಲೆಯ ಜನತಾಪುರದ ಕವಿಗಳಾದ ಕುಮಾರಿ ಕಾವೇರಿ ಅವರಿಗೆ ಕರ್ನಾಟಕ ನವರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ರಾಜಧಾನಿ ಬೆಂಗಳೂರಿನ ಲಲಿತಾದ್ರಿ ಆಡಿಟೋರಿಯಂ ಅಂಜನಾದ್ರಿ ವೇದಿಕೆಯಲ್ಲಿ ಇಬ್ಬರು ಮಹನೀಯರಿಗೆ ರಾಜ್ಯ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದ್ದಾರೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ ಪಡೆದಿರುವ ಕರ್ನಾಟಕ ರಕ್ಷಣಾ ಯುವ ಗಜ ವೇದಿಕೆಯ ರಾಜ್ಯ ಅಧ್ಯಕ್ಷರಾಗಿರುವ ಶ್ರೀ ಕಾಶಿo ಅಲಿ ಅವರಿಗೆ ಕುಕನೂರು ತಾಲೂಕು ಕರ್ನಾಟಕ ರಕ್ಷಣಾ ಯುವ ಗಜ ವೇದಿಕೆಯ ಅಧ್ಯಕ್ಷರಾಗಿರುವ ಪಿ ಕುಮಾರಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ರವಿ ಹಿರೇಮನೆ ಹಾಗೂ ವೇದಿಕೆಯ ಎಲ್ಲ ಪದಾಧಿಕಾರಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ

