ಪತ್ರಿಕೋದ್ಯಮ ಜನಸಾಮಾನ್ಯರ ಪರವಾದ ಧ್ವನಿ ಯಾಗಬೇಕು:ಪತ್ರಕರ್ತ ಎಸ್ಎಂ ಪಟೇಲ್.*ಸುವರ್ಣಗಿರಿ ಪತ್ರಿಕೆಗೆ ಮಾಧ್ಯಮ ಅಕಾಡೆಮಿಯ ಆಂದೋಲನ ಪ್ರಶಸ್ತಿ.

ಗಂಗಾವತಿ: ಪತ್ರಿಕೋದ್ಯಮ ಜನರ ಪರವಾದ ಮತ್ತು ಸಂವಿಧಾನ ಪ್ರಜಾಪ್ರಭುತ್ವದ ಪರವಾದ ಧ್ವನಿ ಆಗಿರಬೇಕು ಅಂದಾಗ ಮಾತ್ರ ಜನರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಆಂದೋಲನ ಪ್ರಶಸ್ತಿಗೆ ಆಯ್ಕೆಯಾದ ಸುವರ್ಣ ಗಿರಿ ಕನ್ನಡ ದಿನಪತ್ರಿಕೆಯ ಸಂಪಾದಕ ಎಸ್.ಎಂ. ಪಟೇಲ್ ಅವರು ಹೇಳಿದರು ಅವರು ನಗರದ ಪರಶುರಾಮ್ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸುವರ್ಣ ಗಿರಿ ದಿನಪತ್ರಿಕೆ ಕಳೆದು 48 ವರ್ಷಗಳಿಂದ ಗಂಗಾವತಿ ಕನಕಗಿರಿ ಕೊಪ್ಪಳ ಜಿಲ್ಲೆಯ ಧ್ವನಿಯಾಗಿ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತಿದೆ ಕಷ್ಟ ನಷ್ಟಗಳ ಮಧ್ಯೆ ದಿವಂಗತ ಶೇಕ್ ದವಲತ್ ಸಾಹೇಬರು ಈ ಪತ್ರಿಕೆಯನ್ನು ಆರಂಭಿಸಿ ನಡೆಸಿದ್ದರು. ಅವರ ನಂತರ ಈ ಪತ್ರಿಕೆಯನ್ನು ನಾವು ನಡೆಸುತ್ತಿದ್ದೇನೆ. ನಾನು ಇವತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಪತ್ರಿಕೆ ಸ್ಪಂದಿಸುತಿದ್ದು,ಜೊತೆಗೆ ಇವತ್ತು ಕರ್ನಾಟಕ ಸರ್ಕಾರ ,ಕರ್ನಾಟಕ ಮಾಧ್ಯಮ ಅಕಾಡೆಮಿ ಪತ್ರಿಕೆಯನ್ನು ಗುರುತಿಸಿ ಆಂದೋಲನ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಬಹಳ ಸಂತೋಷ ಇನ್ನಷ್ಟು ಪತ್ರಿಕೆಯ ಜವಾಬ್ದಾರಿ ಹೆಚ್ಚಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಅಂಬರೀಶಪ್ಪ ಇಂಗಳಗಿ,ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರು ಹಿರಿಯ ಪತ್ರಕರ್ತ ಕೆ. ನಿಂಗಜ್ಜ, ಸಂಗೀತ ಸ್ವರಾಂಜಲಿಯ ಹವ್ಯಾಸಿ ಕಲಾ ತಂಡದಹನುಮಂತಪ್ಪ ಹುಲಿಹೈದರ್,ಪರಶುರಾಮ ದೇವರಮನಿ, ಯಲ್ಲಪ್ಪ ಪೋಲ್ಕಾಲ್, ತಿಪ್ಪೇಸ್ವಾಮಿ, ವೆಂಕಟೇಶ್ ದೂಳ್, ಖಾಜಾಸಾಬ್ ಮುಳ್ಳೂರು, ರಮೇಶ್ ಐಲಿ, ಕೃಷ್ಣವೇಣಿ ಕಬ್ಬೇರ ಗಿರಿಜಮ್ಮ,ಆನಂದ ಪೇಂಟರ್ ಹಾಗೂ ಇತರರಿದ್ದರು.

