77ನೇ ಗಣರಾಜ್ಯೋತ್ಸವ ಹಾಗೂ ಶಾಲಾವಾರ್ಷಿಕೋತ್ಸವ ದ ನಿಮಿತ್ತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಯಿತು… ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಿರಿಯ ಮಹಿಳಾ ನಾಗರಿಕರಿಂದ ಚಾಲನೆ.

ಕನಕಗಿರಿ ತಾಲೂಕಿನ ಕಾಟಾಪುರ ಕೆ ಗ್ರಾಮದಲ್ಲಿ 77ನೇ ಗಣರಾಜ್ಯೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ದ ನಿಮಿತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಮಹಿಳಾ ನಾಗರಿಕರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ನಂತರ ಮಾತನಾಡಿ ಸಂವಿಧಾನದ ಮೂಲಕ ದೇಶದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಈ ಶುಭ ದಿನದಂದು, ಸಂವಿಧಾನದ ನೈಜ ಆಶಯಗಳನ್ನು ಅರಿಯೋಣ ಎಂದು ಮುಖ್ಯ ಗುರುಗಳಾದ ವೆಂಕೋಬ ಪೂಜಾರ ತಿಳಿಸಿದರು. ಮತ್ತು ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ ನಮ್ಮ ದೇಶ ಸ್ವಾತಂತ್ರ್ಯ ಹೊಂದಿ ಇಂದು ಸುಸೂತ್ರವಾಗಿ ನಡೆಯಲು ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದ್ದು ಎಂದು .ಶಾಲೆಯಲ್ಲಿ ಕಾರ್ಯಕ್ರಮ ವೇಳೆ ಗಣರಾಜ್ಯೋತ್ಸವ 1950 ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಮ್ಮ ಸಂವಿಧಾನವು ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಈ ನಮ್ಮ ಸಂವಿಧಾನದ ರಚನೆಗೆ ಒಟ್ಟು 2 ವರ್ಷ 11 ತಿಂಗಳು, 18 ದಿನ ಬೇಕಾಯಿತು. ಇದು ನಮಗೆ ಪ್ರಮುಖವಾಗಿ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ. ಸಂವಿಧಾನದ ಮೂಲಕ ದೇಶದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಈ ಶುಭ ದಿನದಂದು, ಸಂವಿಧಾನದ ನೈಜ ಆಶಯಗಳನ್ನು ಅರಿಯೋಣ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಜೀವಿಗಳನ್ನು ಸ್ಮರಿಸುವುದರ ಜೊತೆಗೆ ಮಕ್ಕಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಅಕ್ಕನಾಗಮ್ಮ ಗಂಡ ಶಿವಲಿಂಗನಗೌಡ, ಅಂಬಮ್ಮ ಪಾಟೀಲ್, ಹನುಮಮ್ಮ ಚಿಗರಿ, ಮಾಳಮ್ಮ ಗೋಲ್ಲರ, ಲಕ್ಷ್ಮಮ್ಮ ಪಚ್ಚಿ, ದುರುಗಮ್ಮ ಭೋವಿ, ಬಾಲಮ್ಮ ಹರಿಜನ, ಗಂಗಮ್ಮ ತಳವಾರ, ಹನುಮಮ್ಮ ಪೂಜಾರ, ವೆಂಕನಗೌಡ ಪಾಟೀಲ, ಪಂಪಾಪತಿ ಪಚ್ಚಿ SDMC ಅಧ್ಯಕ್ಷರಾದ ದುರುಗಪ್ಪ ಪಚ್ಚಿ, ಉಪಾಧ್ಯಕ್ಷರಾದ ರಾಮಣ್ಣ ಭೋವಿ, ಹನುಮೇಶ ಗಾಣದಾಳ, ಅಮರೇಶ್ ಕಲ್ಗುಡಿ, ಸುರೇಶ್ ತಳವಾರ, ಹನುಮಂತ ಹರಿಜನ, ಶಿವರಾಜ ಪಚ್ಚಿ ಇತರರಿದ್ದರು. ಕರಿಯಣ್ಣ ಪಚ್ಚಿ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಗುರುಗಳಾದ ವೆಂಕೋಬ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ ಹಿರಿಯ ಮಹಿಳಾ ನಾಗರಿಕರು ನಮ್ಮ ಜೀವನಕ್ಕೆ ದಾರಿದೀಪ ಅವರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು. ನಂತರ ಮಕ್ಕಳಿಂದ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕ ವರದಿಗಾರ 9035332032
