ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ.

ಇಳಕಲ್:ತಾಲೂಕಿನ ತುಂಬ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 50 ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವು ಅದ್ದೂರೊಯಾಗಿ ಜರುಗಿತು. ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು,ಶಾಸಕ ವಿಜಯಾನಂದ ಎಸ್.ಕಾಶಪ್ಪನವರುಅವರಿಗೆ ತುಂಬ ಗ್ರಾಮದ ಜನರು ಎತ್ತಿನ ಬಂಡಿ ಮೆರವಣಿ ಮೂಲಕ ಸ್ವಾಗತಿಸಿದರು, ನಂತರ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿಸಂಘದ ನೂತನ ಕಟ್ಟಡವನ್ನು ಶಾಸಕರು ರಿಬ್ಬನ್ ಕಟ್ಟಮಾಡುವ ಮೂಲಕ ಉದ್ಧಾಟಿಸಿದರು. ಪ್ರಾಕೃಪಸಸ 50 ನೇ ವರ್ಷದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಶಾಸಕರಿಗೆ ಸಂಘದ ಅಧ್ಯಕ್ಷರು, ಸರ್ವ ಸದಸ್ಯರು ಗೌರವಿಸಿ ಸನ್ಮಾನಿಸಿದರು.ಇದೇ ಸಂದರ್ಭದಲ್ಲಿಪ್ರಾಥಮಿಕ ಕೃಷಿಪತ್ತಿನ ಸಹಕರಿ ಸಂಘ ದ ಅಧ್ಯಕ್ಷರು ಬಸವರಾಜ ಜಾಲಿಹಾಳ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
