ಸಿಬ್ಬಂದಿಗಳ ವಸತಿ ಗೃಹಗಳ ಭೂಮಿ ಪೂಜೆ ನೆರವೇರಿಸಿದ ಶಾಸಕ ಕಾಶಪ್ಪನವರ..

ಸಿಬ್ಬಂದಿಗಳ ವಸತಿ ಗೃಹಗಳ ಭೂಮಿ ಪೂಜೆ ನೆರವೇರಿಸಿದ ಶಾಸಕ ಕಾಶಪ್ಪನವರ..

ಇಳಕಲ್:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬಾಗಲಕೋಟೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,
ಬಾಗಲಕೋಟೆ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆ ಗುಡೂರ (ಎಸ್.ಸಿ.)
ಸಿಬ್ಬಂದಿಗಳ ಗೃಹಗಳ
(ಜಿ +2,1ಬಿಎಚ್ಕೆ,
2BHK)ನಿರ್ಮಾಣದ ಕಾಮಗಾರಿಗೆ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು,ಶಿಕ್ಷಣ ಪ್ರೇಮಿ ಶಾಸಕ ವಿಜಯಾನಂದ ಎಸ್.ಕಾಶಪ್ಪನವರ
ಭೂಮಿ ಪೂಜೆ ನೆರವೇರಿಸಿದರು.

ಕಾಮಗಾರಿಯ ಅದಾಂಜು ಮೊತ್ತ ರೂ.493.00 ಲಕ್ಷಗಳು,ನಿರ್ಮಾಣ ಸಂಸ್ಥೆ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು.
2017-18 ರಲ್ಲಿ
ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಗುಡೂರ
ಎಸ್.ಸಿ.ಭಾಗಕ್ಕೆ
ವಸತಿ ಶಾಲೆ ಬೇಕು ಎಂದು ಮನವಿ ಮಾಡಿದರ ಫಲವಾಗಿ ಆರನೇ ತರಗತಿಯಿಂದ ಆರಂಭಗೊಂಡು ಇವಾಗ ಪಿಯುಸಿ ವರೆಗೂ ಇದೆ ಎಂದು
ಶಾಸಕ ಕಾಶಪ್ಪನವರ ಸಿಬ್ಬಂದಿಗಳ ವಸತಿ ಗೃಹಗಳ ಭೂಮಿ ಪೂಜೆ ನೆರವೇರಿಸಿ
ಮಾತನಾಡುತ್ತಾ ಅವರು ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದು,
ಕಟ್ಟಡದ ಕೊರತೆ ಮತ್ತು
ಕಾಂಪೌಂಡ್
ಕೊರತೆ ಇದ್ದ ಕಾರಣ
ಎರಡು ವರ್ಷದಲ್ಲೇ
ಈ ಜಾಗದಲ್ಲಿ ಮೂರನೇ ಭೂಮಿ ಪೂಜೆ ಮಾಡಿದ್ದೇವೆ.
ಮೂಲ ಭೂತಸೌ ಕರ್ಯಕ್ಕೆ ಯಾವುದೇ ಕೊರೆತೆಯುಂಟಾಗ ಬಾರದು ಅಂತಾನೆ
ಅಲ್ಪಸಂಖ್ಯಾತ ಇಲಾಖೆಯ ಸಚಿವರಾದ ಜಮ್ಮೀರ ಅಹಮ್ಮದ್ ಖಾನ್
ಅವರು ಮೂರು ಹಂತಗಳ ಅನುದಾನವನ್ನು ಬಿಡುಗಡೆ ಮಾಡಿ ಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇವೆ ಎಂದು
ನುಡಿದರು.

Leave a Reply

Your email address will not be published. Required fields are marked *