ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಬಿ.ಸುಷ್ಮಾಗೆ ಜಿಲ್ಲಾಧಿಕಾರಿ ರವರಿಂದ ಪ್ರಶಸ್ತಿ ಪತ್ರ ವಿತರಣೆ..

ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಬಿ.ಸುಷ್ಮಾಗೆ ಜಿಲ್ಲಾಧಿಕಾರಿ ರವರಿಂದ ಪ್ರಶಸ್ತಿ ಪತ್ರ ವಿತರಣೆ..

ಕಂಪ್ಲಿ : ಬಳ್ಳಾರಿಯ ಜಿಲ್ಲಾ ಪಂಚಾಯತಿ ಕಛೇರಿಯ ನಜೀರ್ ಸಭಾಂಗಣದಲ್ಲಿ ಭಾರತ ಚುನಾವಣೆ ಆಯೋಗ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟೀಯ ಮತದಾನ ದಿನಾಚರಣೆ ಕಾರ್ಯಕ್ರಮ ರವಿವಾರ ನಡೆಯಿತು. ರಾಷ್ಟೀಯ ಮತದಾನ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಪ್ರಬಂದ ಸ್ಫರ್ಧೆ ಕಂಪ್ಲಿಯ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿ ಬಿ.ಸುಷ್ಮಾ ಪ್ರಬಂದ ಸ್ಫರ್ಧೆ ಪ್ರಥಮ ಸ್ಥಾನಳಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ರವರು ವಿದ್ಯಾರ್ಥಿನಿ ಬಿ.ಸುಷ್ಮಾ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಾಕ್ಷರತಾ ಸಮಿತಿಯ ಸಂಚಾಲಕಿ ರಾಜ್ಮಾ ಟಿ.ಎಂ.ಆರ್, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪಿ. ಶ್ರೀನಿವಾಸ ರೆಡ್ಡಿ ಉಪನ್ಯಾಸಕಾರದ ಡಾ.ಮಹೇಶ್, ಅನ್ನಪೂರ್ಣ ಗುಡದೂರು, ಚಂದ್ರಶೇಖರ್, ಖಲೀಲ, ಎಂ. ಪಿ.ಬಾಲಾಜಿ ಗ್ರಂಥಪಾಲಕ ವೀರಭದ್ರಪ್ಪ, ಅಧಿಕ್ಷಕರಾದ ನಾಗಮ್ಮ ಬಿ. ಪ್ರಥಮ ದರ್ಜೆ ಸಹಾಯಕ ಸಿದ್ದರೋಡ ಬಿ. ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *