ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಸುಸ್ಥಿರ ನೀರಾವರಿಗೆ ನಾಂದಿ ಹಾಡಿದ ದೇವರಡ್ಡಿ ಅಗಸನಕೊಪ್ಪ ರವರಿಗೆ ‘ಬಿಂಕದಕಟ್ಟಿಯ ಭಗೀರಥ’ ಎಂಬ ಬಿರುದು ಪ್ರಧಾನ…

ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಸುಸ್ಥಿರ ನೀರಾವರಿಗೆ ನಾಂದಿ ಹಾಡಿದ ದೇವರಡ್ಡಿ ಅಗಸನಕೊಪ್ಪ ರವರಿಗೆ ‘ಬಿಂಕದಕಟ್ಟಿಯ ಭಗೀರಥ’ ಎಂಬ ಬಿರುದು ಪ್ರಧಾನ…

“ಸೂರ್ಯದೇವನ ವರದಾನದಿಂದ ಗಂಗಾಮಾತೆಯನ್ನ ಭೂಮಿತಾಯಿಯ ಮಡಿಲಿಗರ್ಪಿಸಿದ ಬಿಂಕದಕಟ್ಟಿಯ ಭಗೀರಥ ದೇವರಡ್ಡಿ” ಎಂದು ಬಿರುದು ನೀಡಿ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಶ್ರೀ ದೇವರಡ್ಡಿ ಅಗಸನಕೊಪ್ಪರವರನ್ನು ಇಂದಿಲ್ಲಿ ಗೌರವಿಸಿದರು.

ವಿಶಾಲವಾದ ಕೆರೆ, ಕೆರೆ ತುಂಬಾ ನೀರು ಆದರೂ ನೀರಾವರಿಗೆ ನೀರಿಲ್ಲವೆಂಬ ಕೊರತೆ ದೇವರಡ್ಡಿಯವರನ್ನುಬಾದಿಸುತ್ತಲೇ ಇತ್ತು. ವಿದ್ಯುಚ್ಛಕ್ತಿ ಸಂಪರ್ಕ ಪಡೆಯಲು ಪಟ್ಟ ಶ್ರಮ ಫಲಿಸದಿದ್ದಾಗ ನೀರಿದ್ದರೂ ನೀರಾವರಿ ಇಲ್ಲವಲ್ಲ ಎಂಬ ವಿಲಕ್ಷಣ ಸ್ಥಿತಿಯಿಂದಾಗಿ ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯುವ ಅವರ ಕನಸು ಕನಸಾಗಯೇ ಉಳಿದಿತ್ತು.

ಸೂರ್ಯದೇವನ ಕಿರಣಗಳ ಕರುಣೆಯಿಂದ ಉತ್ಪಾದನೆಗೊಂಡ ವಿದ್ಯುಚ್ಛಕ್ತಿಯಿಂದ ಜಮೀನಿನ ಪೂರ್ವದಿಕ್ಕಿನಲ್ಲಿನ ತಿಳಿನೀರಿನ ಕೊಳದೊಳಗಿನ ಗಂಗಾಮಾತೆಯನ್ನು ಭೂಮಿತಾಯಿಯ ಮಡಿಲಿಗರ್ಪಿಸಿ ಕಬ್ಬು ನಾಟಿ ಮಾಡಿ ಕನಸು ನನಸಾಗಿಸಿಕೊಂಡ ಅವರ ನಿರಂತರ ಪರಿಶ್ರಮ ಸ್ತುತ್ಯಾರ್ಹ.

ತೋಟಗಾರಿಕೆ ಇಲಾಖೆ, ರೋಟರಿ ಕ್ಲಬ್ ಗದಗ-ಬೆಟಗೇರಿ, ಧರಿತ್ರಿ ಸಾವಯವ ಪರಿವಾರ ಗದಗ, ಶ್ರೀ ಕಪ್ಪತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ, ಕಡಕೋಳ, ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ರಾಮದುರ್ಗ ಹಾಗೂ ಗ್ರೀನಲ್ಯಾಂಡ ಬಯೋಟೆಕ್ ಇವರ ಸಹಯೋಗದಲ್ಲಿ ಬಿಂಕದಕಟ್ಟಿಯ ದೇವರಡ್ಡಿಯವರ ಹೊಲದಲ್ಲಿ ಆಯೋಜಿಸಲಾಗಿದ್ದ ರೈತರಿಗೆ ಸೋಲಾರ ಪಂಪಸೆಟ್ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಪ್ರಾರಂಭೋತ್ಸವದಲ್ಲಿ ಸೋಲಾರ ಪಂಪಸೆಟ್ ಅಳವಡಿಕೆ ಕುರಿತು ಭಾಲಚಂದ್ರ ಜಾಬಶೆಟ್ಟಿಯವರು ಸಮಗ್ರ ಮಾಹಿತಿಯನ್ನು ನೀಡಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ದೇವರಡ್ಡಿಯವರ ಸಾಧನೆಯ ಗುಣಗಾನ ಮಾಡಿ ‘ಬಿಂಕದಕಟ್ಟಿಯ ಭಗೀರಥ ದೇವರಡ್ಡಿ’ ಎಂದು ಬಿರುದು ನೀಡಿ ಗೌರವಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಿರಾದಾರರವರು ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.

ಗಂಗಾಮಾತೆಯನ್ನು ಭೂಮಿತಾಯಿಯ ಮಡಿಲಿಗರ್ಪಿಸಿದ ದೇವರಡ್ಡಿಯವರು ಈ ಯಶೋಗಾಥೆಯ ಹಿಂದಿರುವ ನೋವು ನಲಿವುಗಳನ್ನು ಹಂಚಿಕೊಂಡರು.

ದೇವರಡ್ಡಿ ಅಗಸನಕೊಪ್ಪ ದಂಪತಿಗಳನ್ನು ಸಮ್ಮಾನಿಸಲಾಯಿತು.

ಸೋಲಾರ ಪಂಪಸೆಟ್ ಅಳವಡಿಸಲು ತಾಂತ್ರಿಕ ಬೆಂಬಲ ನೀಡಿದ ಗ್ರೀನಲ್ಯಾಂಡ ಬಯೋಟೆಕ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭಾಲಚಂದ್ರ ಜಾಬಶೆಟ್ಟಿಯವರನ್ನೂ ಸಹ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹುಲಕೋಟಿಯ ಪ್ರಗತಿಪರ ರೈತ ಗುರುನಾಥಗೌಡ ಓದುಗೌಡರ ಮಾತನಾಡಿ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸುವ ಹಲವು ಉಪಾಯಗಳ ಕುರಿತು ಮಾರ್ಮಿಕ ವಿವರಣೆ ನೀಡಿದರು.

ನಿವೃತ್ತ ಹಿರಿಯ ಸಹಾಯಕ ನಿದೇಶಕ ಸುರೇಶ ಕುಂಬಾರ ಕಾರ್ಯಕ್ರಮವನ್ನು ನಿರೂಪಿಸಿದರು.

ರುದ್ರಣ್ಣ ಗುಳಗುಳಿಯವರ ವಂದನಾರ್ಪಣೆ ಮಾಡಿದರು. ಧರಿತ್ರಿ ಸಾವಯವ ಪರಿವಾರ ಮತ್ತು ಕಪ್ಪತಮಲ್ಲೇಶ್ವರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಕಡಕೋಳ, ರೋಟರಿ ಕ್ಲಬ್ ಗದಗ ಬೆಟಗೇರಿ ಇವರ ಪದಾಧಿಕಾರಿಗಳು, ಸಾವಯವ ಕೃಷಿಕರು ಮುಂತಾದವರು ಉಪಸ್ಥಿತರಿದ್ದರು.

ಭಾಲಚಂದ್ರ ಜಾಬಶೆಟ್ಟಿ
9741888365

Leave a Reply

Your email address will not be published. Required fields are marked *