ಸಿದ್ಧನಕೊಳ್ಳ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ…

ಇಳಕಲ್:ಉತ್ತರ ಕರ್ನಾಟಕದ ಪ್ರಸಿದ್ಧ
ಗುಡ್ಡದ ಮಠ ಅಂದರೆ ಸಿದ್ಧನಕೊಳ್ಳ ಮಠ
ಈ ಪುಣ್ಯಕ್ಷೇತ್ರಕ್ಕೆ ಭಕ್ತಾಧಿಗಳ ಸಂಖ್ಯೆಗೇನು ಕಡಿಮೆ ಇಲ್ಲ.ಈ ಸ್ಥಳದಲ್ಲಿ ನಡೆಯುವ ಉತ್ಸವ ನಾಡಿನಲ್ಲಷ್ಟೆ ಅಲ್ಲದೇ ದೇಶದ ತುಂಬಾ ಪ್ರಸಿದ್ಧಿ ಪಡೆದಿದೆ.ನಿರಂತರ ದಾಸೋಹ ಮತ್ತು ಕಲಾಪೋಷಕ ಮಠ ಎಂದೆ ಪ್ರಖ್ಯಾತಿಗಳಿಸಿದ ನಾಡಿನ ಏಕೈಕ ಮಠ ಸಿದ್ಧನಕೊಳ್ಳ ಮಠ. ಜ.14,15,16 ರಂದು ಮೂರು ದಿನಗಳ ಕಾಲ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗುತ್ತದೆ. ನಿನ್ನೆ ಸಾಯಂಕಾಲ ಸಿದ್ಧಪ್ಪಜ್ಜನ ರಥೋತ್ಸವ ಅದ್ಧೂರಿಯಾಗಿ ನಡೆಯಿತು, ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ. ಮೊದಲನೇ ದಿನದ ವೇದಿಕೆ ಕಾರ್ಯಕ್ರಮಕ್ಕೆ ರಾಜ್ಯವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು,ಶಾಸಕ ವಿಜಯಾನಂದ ಎಸ್.ಕಾಶಪ್ಪನವರ ಅವರ ಸುಪುತ್ರಿ ಸಮಿಕ್ಷಾ ವಿ.ಕಾಶಪ್ಪನವರು ರಿಬ್ಬನ್ ಕಟ್ಟಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತರಾ ಕರ್ನಾಟಕದ ನಿರಂತರ ದಾಸೋಹ,ಕಲಾಪೋಷಕ ಮಠ ಎಂದು ಪ್ರಖ್ಯಾತಿ ಪಡೆದ ಮಠ ಇಳಕಲ್ ತಾಲೂಕಿನ ಸಿದ್ಧನಕೊಳ್ಳದ ಮಠ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಅವರು ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪ್ರತಿವರ್ಷದಂತೆ ಈ ವರ್ಷವೂ ಮೂರು ದಿನಗಳ ಜಾತ್ರೆ ಅಜ್ಜನ ಉತ್ಸವ ವಿಜೃಂಭಣೆಯಿಂದ ಜರುಗುತ್ತದೆ ಅದಕ್ಕೆ ಕಾರಣ ಮಠದ ಭಕ್ತಾಧಿಗಳು.ಭಕ್ತಾಧಿಗಳು ತಮ್ಮ ಕೈಲಾದಷ್ಟಿ ಉತ್ಸವಕ್ಕೆ ದೇಣಿಗೆ ನೀಡಿದರ ಫಲವಾಗಿ ಉತ್ಸವ ಅದ್ದೂರಿಯಾಗಿ ಜರುಗಲು ಕಾರಣ ಎಂದು ನುಡಿದರು. ಭಕ್ತರೆ ನಮ್ಮ ಮಠದ ಆಸ್ತಿ,ದುಡ್ಡು ಏನುಗಳಿಸಬೇಡಾ ಗಳಿಸುವುದಾದರೇ ಭಕ್ತರನ್ನ ಗಳಿಸು ಎಂದು ಡಾ.ಶಿವಕುಮಾರ ಶ್ರೀಗಳು ಮಾತನಾಡಿತ್ತಾ ಈ ಮಠ ಈ ಮಟ್ಟಕ್ಕೆ ಬೆಳೆಯಲು ಪತ್ರಿಕಾ ಮಾಧ್ಯಮದವರು ಹಾಗೂ ಭಕ್ತಾಧಿಗಳು ಕಾರಣ ನಾನು ಇಲ್ಲಿ ಸೇವಕನಾಗಿ ಇದ್ದೇನೆ. ಭಕ್ತರ ನೋವೆ ತಮ್ಮ ನೋವು,ಭಕ್ತರ ನಲಿವೆ ತಮ್ಮ ನಲಿವು,ಇಲ್ಲಿ ಯಾವುದೇ ಜಾತಿ ಭೇದ ಭಾವವಿಲ್ಲದ ಸಿದ್ಧನಕೊಳ್ಳದ ಸಿದ್ಧಪ್ಪಜನ ಮಠ ಎಂದು ಶ್ರೀಗಳು ನುಡಿದರು.ಭಕ್ತಾಧಿಗಳು ಡಾ.ಶಿವಕುಮಾರ ಶ್ರೀಗಳಿಗೆ ತುಲಾಭಾರ ಮಾಡಲು ಮುಂದಾದಾಗ ನನಗೆ ಬೇಡಾ ನಿಮ್ಮ ತಂದೆ-ತಾಯಿಗಳಿಗೆ ಮಾಡಿ ಎಂದು ಮಠದ ಭಕ್ತನ ತಾಯಿಗೆ ತುಲಾಭಾರ ಮಾಡಿಸಿ ಆಶೀರ್ವಾದ ಮಾಡಿದರು.ತಮ್ಮ ಪಾದಕ್ಕೆ ನಮಸ್ಕರಿಸಬೇಡಿ ನಿಮ್ಮ ತಂದೆ ತಾಯಿಗಳ ಪಾದಗಳಿಗೆ ದಿನಾಲು ನಮಸ್ಕರಿಸಿ ಸಾಕು ಎಂದು ಭಕ್ತಾಧಿಗಳಿಗೆ ತಿಳಿ ಹೇಳಿದರು.ಇದೇ ಸಂದರ್ಭದಲ್ಲಿ ಉಭಯ ಪೂಜ್ಯರು, ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ವಿ.ಕಾಶಪ್ಪನವರ ಮತ್ತಿತರರು ಉಪಸ್ಥಿತರಿದ್ದರು

