ಮಕರ ಸಂಕ್ರಾಂತಿ ನಿಮಿತ್ಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮೆಟ್ಟಲು ಪೂಜೆ…

ಮಕರ ಸಂಕ್ರಾಂತಿ ನಿಮಿತ್ಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮೆಟ್ಟಲು ಪೂಜೆ…

ಗಂಗಾವತಿ.. ನಗರದ ಅಯ್ಯಪ್ಪ ಗಿರಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಜ್ಯೋತಿಯ ಅಂಗವಾಗಿ ಬುಧವಾರದಂದು 18 ಮೆಟ್ಟಲುಗಳ ಒಡೆಯ ಶ್ರೀ ಅಯ್ಯಪ್ಪ ಸ್ವಾಮಿಗೆ ಮೆಟ್ಟಿಲು ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಟ್ಟಿ ವೀರಪ್ರಸಾದ ಮಾತನಾಡಿ ಹರಿಹರ ಪುತ್ರನಾದ ಶ್ರೀ ಅಯ್ಯಪ್ಪ ಸ್ವಾಮಿ ದುಷ್ಟರ ಹಾಗೂ ಮಹಶಿಯ ಸಂಹಾರಕ್ಕಾಗಿ ಜನ್ಮ ತಾಳಿದ್ದು ಸ್ವಾಮಿಯ ನಾಮ ಸ್ಮರಣೆ ಹಾಗೂ ಸೇವೆಯಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾ ಯಿಬಾಬಾ ಮಾತನಾಡಿ ಫೆಬ್ರುವರಿ ಹತ್ತರಿಂದ 12ರ ವರೆಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 12ನೇ ವರ್ಷದ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿ ದ್ದು. ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಭಾರತಿ ಸ್ವಾಮಿಗಳು.

ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಡಾಕ್ಟರ್ ಎಸ್ ಚಂದ್ರ ಮೌಳಿ ಗುರುಸ್ವಾಮಿಗಳು ಪರಮಪೂಜ್ಯ ಶ್ರೀ ರುದ್ರಮುನಿ ಸ್ವಾಮಿಗಳು ಸೇರಿದಂತೆ ಮತ್ತಿತರ ದಿವ್ಯ ಸಾನಿಧ್ಯದಲ್ಲಿ ವಿಶೇಷ ಧಾರ್ಮಿಕ ಆಚರಣೆ ಎಂದು ಹೇಳಿದರು. ಮಕರ ಜ್ಯೋತಿಯ ನಿಮಿತ್ತವಾಗಿ 18 ಮೆಟ್ಟಿಲುಗಳಿಗೆ ವಿವಿಧ ಹೂಗಳಿಂದ ಹಾಗೂ ಜ್ಯೋತಿ ಗಳಿಂದ ಅಲಂಕಾರಗೊಳಿಸಲಾಗಿತ್ತು. ಭಕ್ತರಿಂದ ಹಾಗೂ ಮಾಲಾಧಾರಿಗಳಿಂದ ಭಜನೆ ಮತ್ತು ತರಕಾರಿಗಳು ಜರುಗಿದು. ದೇವಸ್ಥಾನದ ಪ್ರಧಾನ್ ಅರ್ಚಕ ಶಂಕರ್ ದಿವಾಕರ್. ಮೂಲ ಅಯ್ಯಪ್ಪ ಸ್ವಾಮೀ ದೇವರಿಗೆ ಅಭಿಷೇಕ ಮುತ್ತಿತ್ತರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ್ದರು..

Leave a Reply

Your email address will not be published. Required fields are marked *