ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸರಳ ಸಾಮೂಹಿಕ ವಿವಾಹ ನೆರವು ಯೋಜನೆ..

ಬೆಂಗಳೂರು 2025-26ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ 2025-26ನೇ ಸಾಲಿಗೆ ಸರಳ ಸಾಮೂಹಿಕ ವಿವಾಹ ನೆರವು ಯೋಜನೆ ಜಾರಿಗೆ ಬಂದಿದೆ.ಈ ಯೋಜನೆಯಡಿ ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವ ಪ್ರತಿ ದಂಪತಿಗೂ ₹50,000 ಸಹಾಯಧನ ನೀಡಲಾಗುತ್ತದೆ.ಯೋಜನೆಯ ಉದ್ದೇಶ:ಅಲ್ಪಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ) ಬಡ ಕುಟುಂಬಗಳಿಗೆ ಸರಳ ಮತ್ತು ಸಾಮೂಹಿಕ ವಿವಾಹಗಳ ಮೂಲಕ ಆರ್ಥಿಕ ನೆರವು ನೀಡುವುದು. ವಧು-ವರರ ಅರ್ಹತಾ ಮಾನದಂಡಗಳು:ವಧು ಮತ್ತು ವರರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.ಕನಿಷ್ಠ 10 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಬೇಕು.ವಧುವಿನ ವಯಸ್ಸು 18 ರಿಂದ 42 ವರ್ಷ ಮತ್ತು ವರನ ವಯಸ್ಸು 21 ರಿಂದ 45 ವರ್ಷ ಇರಬೇಕು.ದಂಪತಿಯ ವಾರ್ಷಿಕ ಆದಾಯ ₹2.50 ಲಕ್ಷ ಮೀರಬಾರದು.ಈ ಯೋಜನೆಯ ಪ್ರಯೋಜನವನ್ನು ಒಮ್ಮೆ ಮಾತ್ರ ಪಡೆಯಬಹುದು.ವರನಿಗೆ ಈಗಾಗಲೇ ಹೆಂಡತಿ ಅಥವಾ ವಧುವಿಗೆ ಗಂಡ ಇದ್ದರೆ ಯೋಜನೆ ಅನ್ವಯಿಸುವುದಿಲ್ಲ.ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ಮಾತ್ರ ಯೋಜನೆಗೆ ಅರ್ಹ. ಸಂಘಟಕರ ಅರ್ಹತೆ:ಜಿಲ್ಲಾ ನೋಂದಣಿ ಕಚೇರಿ ಅಥವಾ ವಕ್ಫ್ ಮಂಡಳಿಯಲ್ಲಿ ನೋಂದಾಯಿತಖಾಸಗಿ ಟ್ರಸ್ಟ್‌ಗಳು, ದೇವಾಲಯ ಟ್ರಸ್ಟ್‌ಗಳು, ಸಂಘಗಳು, ಸಾಮಾಜಿಕ ಸೇವಾ ಸಂಸ್ಥೆಗಳು ಅಥವಾ ಸ್ವಯಂಸೇವಾ ಸಂಸ್ಥೆಗಳು ಮಾತ್ರ ಸಾಮೂಹಿಕ ವಿವಾಹ ಆಯೋಜಿಸಲು ಅರ್ಜಿ ಸಲ್ಲಿಸಬಹುದು.ಸಾಮೂಹಿಕ ವಿವಾಹ ಆಯೋಜಕರಿಗೆ ಪ್ರತಿ ದಂಪತಿಗೆ ₹5,000 ಸಹಾಯಧನ ನೀಡಲಾಗುತ್ತದೆ.ಯೋಜನೆಯ ಉದ್ದೇಶ:ಸರಳ ವಿವಾಹ ಪದ್ಧತಿಗೆ ಪ್ರೋತ್ಸಾಹ ನೀಡಿ, ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳ ಆರ್ಥಿಕ ಭಾರವನ್ನು ಕಡಿಮೆ ಮಾಡುವುದು. ಹೆಚ್ಚಿನ ಮಾಹಿತಿಗೆ:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
