ದೇವಸಮುದ್ರದ ಪರಮ ಪೂಜ್ಯಶ್ರೀ ಶಿವಪ್ಪ ತಾತನವರಿಂದ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಮತ್ತು ಅನುಷ್ಠಾನ,,,,

ಕಂಪ್ಲಿ ತಾಲೂಕಿನ ದೇವ ಸಮುದ್ರ ಭಾಗದಲ್ಲಿ ನಡೆದಾಡುವ ದೇವರು ಎಂದು ಪ್ರಸಿದ್ಧಿಯಾಗಿರುವ ಆಧ್ಯಾತ್ಮ ಗುರುಗಳಾಗಿರುವ ಪರಮಪೂಜ್ಯಶ್ರೀ ಬಾಲಕುಂದೇಶ್ವರ ತಾತನವರು ಹಾಗೂ ಪರಮ ಪೂಜ್ಯಶ್ರೀ ಶಿವಪ್ಪ ತಾತನವರು ಲೋಕಕಲ್ಯಾಣಕ್ಕಾಗಿ ಮಕರ ಸಂಕ್ರಮಣ ಹಬ್ಬದ ಶುಭದಿನದಂದು ಕಂಪ್ಲಿಯ ತುಂಗಭದ್ರ ನದಿ ದಂಡೆಯ ಪಕ್ಕದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಪಂಪಾಪತಿ ದೇವಸ್ಥಾನದಲ್ಲಿ ವಿಶೇಷ ಅನುಷ್ಠಾನ ಮತ್ತು ಭಕ್ತರ ಕಲ್ಯಾಣಕ್ಕಾಗಿ ವಿಶೇಷ ಪೂಜೆ ನೆರವೇರಿಸಿದರು…..

ಪರಮಪೂಜ್ಯ ಶ್ರೀ ಶಿವಪ್ಪ ತಾತನವರು ಲೋಕಕಲ್ಯಾಣಕ್ಕಾಗಿ ಲೋಕ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿಶೇಷ ಅನುಷ್ಠಾನ ಮತ್ತು ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕಂಪ್ಲಿ ಬಳ್ಳಾರಿ ಹೊಸಪೇಟೆ ಗಂಗಾವತಿ ಕೊಪ್ಪಳ ಸಿಂಧನೂರು ಹಾಗೂ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು,,,,, ಪ್ರಮುಖ ಮುಖಂಡರಾಗಿರುವ ಪಾಂಡುರಂಗಪ್ಪ ದೇವಸಮುದ್ರ ಹತ್ತಿ ಮರದ ಹುಲುಗಪ್ಪ ನಾಯಕ ವಾಸ್ತು ತಜ್ಞರಾಗಿರುವ ಡಾಕ್ಟರ ಮಂಜುನಾಥ ಕುರುಗೋಡ ಡಾಕ್ಟರ್ ನೀಲಪ್ಪ ಹೊಸಳ್ಳಿ ರಮೇಶ ಕಂಪ್ಲಿ ವೆಂಕಟೇಶ ಪೂಜಾರಿ,,,,,,,,,,,,,,,,,,,, ಮೌನೇಶ ವಿಶ್ವಕರ್ಮ ,,, ಪೋತಪ್ಪ, ಮಹೇಶ್ ಒಂಟಿ, ಪಕೀರಪ್ಪ ಹಾಗೂ ಪರಮಪೂಜ್ಯ ಶ್ರೀ ಬಲಕುಂದೇಶ್ವರ ತಾತನವರ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು,,,,, ಇದೆ ವೇಳೆ ಐತಿಹಾಸಿಕ ಪ್ರಸಿದ್ಧ ಶ್ರೀ ಪಂಪಾಪತಿ ದೇವಸ್ಥಾನಕ್ಕೆ ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುವ ಮೂಲಕ ಪರಮಪೂಜ್ಯ ಶ್ರೀ ಶಿವಪ್ಪ ತಾತನವರು ಭಕ್ತವೃಂದಕ್ಕೆ ಒಳ್ಳೆಯದಾಗಲಿ ಎಂದು ಶ್ರೀ ಪಂಪಾಪತಿ ದೇವರಿಗೆವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

