ಬರಗೂರರು ಮಾನವೀಯ ಮೌಲ್ಯದೊಳಗಣ ಅಂತಃಕರಣದ ಬರಹಗಾರರ: ಡಾ.ಎಸ್.ವಿ.ಡಾಣಿ, ನೂತನ ಕುಲಪತಿಗಳು …

ಬರಗೂರರು ಮಾನವೀಯ ಮೌಲ್ಯದೊಳಗಣ ಅಂತಃಕರಣದ ಬರಹಗಾರರ: ಡಾ.ಎಸ್.ವಿ.ಡಾಣಿ*, ನೂತನ ಕುಲಪತಿಗಳು …

ನಗರದ ಶ್ರೀಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಗಾವತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕ ಕೊಪ್ಪಳ, ಗಂಗಾವತಿಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಕೊಪ್ಪಳ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತದ ಸಮಾನತೆಯ ಸ್ನೇಹಿತ ಕೃತಿ ಜನಾರ್ಪಣೆ ಗೊಳಿಸಲಾಯಿತು.ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ ಜನಾರ್ಪಣೆ ಮಾಡಿ ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಡಾ.ಎಸ್.ವಿ.ಡಾಣಿ ಮಾತನಾಡಿ ಬರಗೂರು ರಾಮಚಂದ್ರಪ್ಪ ಸೂಕ್ಷ್ಮ ಸಂವೇದನೆ ಇರುವ ಬರಹಗಾರ. ಬರಗೂರರು ಮಾನವೀಯ ಮೌಲ್ಯದ ಬರಹಗಾರರು. ಸಮಾನತೆ ಮತ್ತು ಸೌಹಾರ್ದದ ಬಗ್ಗೆ ಮಾತನಾಡುವ ಸಂದರ್ಭ ಬಂದಿದೆ ಎನ್ನುವದು ದುರಂತ. ದುಷ್ಟ ಶಕ್ತಿಯಿಂದಾಗಿ ಭಾರತದ ಸೌಹಾರ್ದತೆಯನ್ನು ಉಳಿಸುವ ಅಗತ್ಯವಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಶರಣೇಗೌಡ ಪೋಲೀಸ್ ಪಾಟೀಲ್ ಮಾತನಾಡಿ ಬರಗೂರರದ್ದು ಪ್ರಭಾವಿಸುವಂತ ವ್ಯಕ್ತಿತ್ವ. ಅವರ ಚಿಂತನೆಗಳು ಸಮಕಾಲೀನ ಸಂದರ್ಭಕ್ಕೆ ಸೂಕ್ತವಾದವುಗಳು ಎಂದರು.ಬಹುಮುಖಿ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ.ಮುಮ್ತಾಜ್ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡೋಜ ಬರಗೂರು ರಾಮಚಂದ್ರಪ್ಪ ನವರು ಈ ನಾಡಿನ ಸಾಕ್ಷಿಪ್ರಜ್ಞೆ. ಸದಾ ಕಾಗೆ ಕಾರುಣ್ಯವನ್ನು ಮನದೊಳಿಟ್ಟುಕೊಂಡು ತುಡಿಯುವ ಜೀವ. ಸುಡುವ ವರ್ತಮಾನದಲ್ಲಿ ಸೌಹಾರ್ದತೆ ನೆಲೆಗೊಳ್ಳುವ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಮನುಷ್ಯ ಬದುಕಿನಲ್ಲಿ ಎಲ್ಲಕ್ಕಿಂತ ಮಿಗಿಲಾದದ್ದು ಮನುಷ್ಯತ್ವ ಅದಕ್ಕೆ ಬರಗೂರರು ಮೊದಲು ಮನುಷ್ಯರಾಗೋಣ ಎನ್ನುವುದು.ಕೃತಿಯ ಕುರಿತು ಮಾತನಾಡಿದ ಡಾ.ಬಸವರಾಜ್ ಗೌಡನಬಾವಿ ಮಾತನಾಡಿ, ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯೂ ಮನುಷ್ಯ ಸಂಬಂಧಗಳ ಬೆಸೆಯುವ ಕನಸನ್ನು ಹೊತ್ತು ಬರುತ್ತಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಶಿವರಾಜ ಗುರಿಕಾರ ವಹಿಸಿದ್ದರು. ಸಿದ್ದಯ್ಯ ಪುರಾಣಿ ಪ್ರತಿಷ್ಠಾನದ ಅಧ್ಯಕ್ಷರಾದ ಅಜ್ಮೀರ ನಂದಾಪೂರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ರುದ್ರೇಶ ಮಡಿವಾಳ,ರವಿ ಹಾದಿಮನಿ, ಡಾ.ಪದ್ಮಶ್ರೀ, ಡಾ.ಲಕ್ಷ್ಮೀಬಾಯಿ, ಡಾ.ಉಷಾರಾಣಿ, ಡಾ.ಪಾಗುಂಡಪ್ಪ, ಪವನಕುಮಾರ ಗುಂಡೂರು ಬಾಲಪ್ಪ ಬಡಿಗೇರ, ಹನುಮಂತಪ್ಪ, ಮಂಜುಳಾ, ಅಪೂರ್ವಡಾ. ಉಷರಾಣಿ, ಮಂಜುಳಾ ಪಾಟೀಲ್, ಡಾ.ಸುನಂದಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರುಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಫಣಿರಾಜ್ ಬಾರಕಾರ ನಿರ್ವಹಣೆ ಮಾಡಿದರು. ರವಿ ಹಾದಿಮನಿ ಸ್ವಾಗತಿಸಿದರು. ಪವಿತ್ರಾ, ಭೂವನೇಶ್ವರಿ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *