ಗಲಾಟೆಯ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ : ಸಂಸದ ಈ.ತುಕಾರಾಂ.

ಬಳ್ಳಾರಿ / ಕಂಪ್ಲಿ : ಬಳ್ಳಾರಿ ನಗರದಲ್ಲಿ ನಡೆದ ಗಲಾಟೆ ಸಂಬಂದ ಸರ್ಕಾರ ವರದಿ ತರಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು, ಭಯದ ವಾತಾವರಣ ದೂರ ಮಾಡಲಿದ್ದಾರೆ ಎಂದು ಸಂಸದ ಈ.ತುಕಾರಾಂ ಹೇಳಿದರು. ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಬಡೇ ಸಾಹೇಬ್ ದರ್ಗಾದಲ್ಲಿ ಗಂಧ, ಉರುಸ್, ಪಲ್ಲಕ್ಕಿ ಉತ್ಸವ ಹಿನ್ನಲೆ ದರ್ಗಾಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿನ ಘರ್ಷಣೆ ಪೂರ್ವಯೋಜಿತವಲ್ಲ. ಇದು ಆಕಸ್ಮಿಕವಾದ ಘಟನೆಯಾಗಿದೆ. ಭಯದ ವಾತಾವರಣ ಇಲ್ಲದ ಹಾಗೆ ನೋಡಿಕೊಳ್ಳಲಿದ್ದಾರೆ. ಈಗಾಗಲೇ ಜಿಲ್ಲೆಯ ಜಿಲ್ಲಾಧಿಕಾರಿಗಳು, ಎಸ್ಪಿ ಸೇರಿದಂತೆ ಅನೇಕ ಅಧಿಕಾರಿಗಳು ಬಳ್ಳಾರಿಯಲ್ಲಿ ಬೀಡುಬಿಟ್ಟು, ಪರಿಸ್ಥಿತಿ ಶಾಂತ ಗೊಳಿಸಿದ್ದಾರೆ. ಗಲಾಟೆಯ ವರದಿಯು, ಸರ್ಕಾರಕ್ಕೆ ಸೇರಲಿದ್ದು, ವರದಿಯನ್ನಾದರಿಸಿ, ಸೂಕ್ತ ಕ್ರಮಕೊಳ್ಳಲಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಸರ್ಕಾರ ಸುಭದ್ರವಾಗಿ ನಡೆಯಲಿದೆ. ನಾಡಿನ ಜನರ ಭರವಸೆಗಳಿವೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡುದ್ದೇ ಅಂತಿಮ ತೀರ್ಮಾನ. ಸಂಸದರ ಕ್ಷೇತ್ರಕ್ಕೆ ಬಂದ ಐದು ಕೋಟಿಯಲ್ಲಿ, ಎಲ್ಲಾ ಕ್ಷೇತ್ರಗಳಿಗೆ ತಲಾ 80 ಲಕ್ಷ ಅನುದಾನ, ಇದರಲ್ಲಿ ರೈತ ಸಂಪರ್ಕ ಕೇಂದ್ರದ ಅಭಿವೃದ್ಧಿಗೆ 2 ಲಕ್ಷ, 7 ಪ್ರೌಢಶಾಲೆಗಳಿಗೆ ತಲಾ 7 ಲಕ್ಷದ ಡಿಜಿಟಲ್ ಗ್ರಂಥಾಲಯಕ್ಕೆ ಅನುದಾನ, ಎಮ್ಮಿಗನೂರು ಪೋಸ್ಟ್ ಆಫೀಸ್ ಕಚೇರಿಗೆ 50 ಲಕ್ಷ ಅನುದಾನ ತಂದಿರುವೆ. ಪ್ರೌಢಶಾಲೆಗಳ ಕ್ರೀಡೆಗಳ ಸಾಮಾಗ್ರಿಗಳಿಗೆ ತಲಾ ಒಂದೊಂದು ಲಕ್ಷ ನೀಡಿರುವೆ. ಸಿದ್ದಮ್ಮನಹಳ್ಳಿ ಪ್ಲೆಓವರ್ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕೊನೆ ಹಂತದಲ್ಲಿದ್ದು, ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಹೀಗೆ ನಾನಾ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ. ಕಂಪ್ಲಿಯ ಬಡೇಸಾಹೇಬ್ ದರ್ಗಾಕ್ಕೆ ಬೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದು, ನಾಡಿಗೂ, ಲೋಕಸಭಾ ಕ್ಷೇತ್ರಕ್ಕೂ ಸರ್ವ ಧರ್ಮದವರಿಗೂ ಸುಖ, ಸಮೃದ್ಧಿ ನೀಡಲಿ ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಕೆ.ಶ್ರೀನಿವಾಸರಾವ್, ಎಂ.ಸುದೀರ್, ಕೆ.ಮೆಹಬೂಬ್, ಎಂ.ಉಸ್ಮಾನ್, ಇಮ್ತಿಯಾಜ್, ಅಕ್ಕಿ ಜಿಲಾನ್, ಯು.ಜಹಿರುದ್ದೀನ್ ಸೇರಿದಂತೆ ಸರ್ವ ಧರ್ಮದದವರು ಇದ್ದರು. ಇದ್ದಕ್ಕೂ ಮುಂಚೆ ಕಂಪ್ಲಿ ಶಾಸಕ ಜೆ. ಎನ್. ಗಣೇಶ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಜನಪ್ರತಿನಿದಿನಗಳು ಸಾವಿರಾರು ಭಕ್ತರು ದರ್ಗಾಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದರು.

ವರದಿ : ಜಿಲಾನಸಾಬ್ ಬಡಿಗೇರ್
