ಯಜ್ಞಾ ವಲ್ಕ್ಯ ಸೇವಾ ಟ್ರಸ್ಟ್ ವತಿಯಿಂದ ವಿಪ್ರ ಸಾಧಕರಿಗೆ ಸನ್ಮಾನ.

ಯಜ್ಞಾ ವಲ್ಕ್ಯ ಸೇವಾ ಟ್ರಸ್ಟ್ ವತಿಯಿಂದ ವಿಪ್ರ ಸಾಧಕರಿಗೆ ಸನ್ಮಾನ.

ಗಂಗಾವತಿ. ನಗರದ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಶುಕ್ರವಾರದಂದು ಧನುರ್ಮಾಸ ಆಚರಣೆಯ ಪ್ರಯುಕ್ತ ವಿಪ್ರ ಸಮಾಜದ ಸಾಧಕರುಗಳಾದ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಜಗನ್ನಾಥ ಆಲಂಪಲ್ಲಿ ಹಾಗೂ ನೂತನ ನೋಟರಿಯಾಗಿ ನೇಮಕಗೊಂಡ ಭೀಮರಾವ್ ದೂಟಿಹಾಳ ಅವರನ್ನು ಸೇವಾ ಟ್ರಸ್ಟ್ ಅಧ್ಯಕ್ಷ ಮುರಳಿದರ ಕುಲಕರ್ಣಿ ಗಂಗಾನಾಳ ಮೇಗೂರು. ತಿರುಮಲ್ ರಾವ್ ಆಲಂಪಲ್ಲಿ. ವೇಣುಗೋಪಾಲ್ ಚಿ ರ್ಚಿನ ಗುಡ್ಡ. ಸತ್ಯ ಕುಮಾರ್ ವೀರಾಪುರ್ ವೆಂಕಟೇಶ್ ಗೋಪಿನಾಥ್ ದಿನ್ನಿ ಸತೀಶ್ ಆನಂದ ಸೇರಿದಂತೆ ಹಿರಿಯರು ಮುಖಂಡರು ಆತೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಜಗನ್ನಾಥ್ ಆಲಂಪಲ್ಲಿ ಮಾತನಾಡಿ. ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಸನ್ಮಾನಗಳಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಜವಾಬ್ದಾರಿ ಹೆಚ್ಚಿದೆ.

ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಆರಂಭಗೊಂಡ ಸರ್ ಎಂ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಲೀಟಲ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಸಕ್ತ ಸಾಲಿನಲ್ಲಿ 1,800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣಿಭೂತರು ಹಿರಿಯ ಸಹೋದರ ನರಸಿಂಹ ಆಲಮ್ಪಲ್ಲಿ ಹಾಗೂ ಕುಟುಂಬಸ್ಥರು ಸಮಾಜ ಬಾಂಧವರು ಸ್ನೇಹಿತರು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬೋಧಕ ವರ್ಗದವರು ಸ್ಮರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಟ್ರಸ್ಟ್ ಅಧ್ಯಕ್ಷ ಮುರಳೀಧರ ಕುಲಕರ್ಣಿ ಗಂಗಾನಾಳ ಮಾತನಾಡಿ ಆಲಂಪಲ್ಲಿ ಕುಟುಂಬಸ್ಥರು ಧಾರ್ಮಿಕ ಆಚರಣೆಯ ಜೊತೆಗೆ ಶಿಕ್ಷಣದ ಕ್ರಾಂತಿಗೆ ವಿಶೇಷ ಕೊಡುಗೆ ನೀಡಿದ್ದು. ಹಾಗೆ ಇನ್ನೋರ್ವ ನೂತನ ನೋಟರಿಯಾಗಿ ನೇಮಕಗೊಂಡ ಭೀಮರಾವ್ ಅವರು ಸಹ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಜಗನ್ನಾಥ ಆಲಂಪಲ್ಲಿ ದಂಪತಿಗಳಿಗೆ ಸಮಾಜ ಬಾಂಧವರು ಶುಭಹಾರೈಸಿದರು.

Leave a Reply

Your email address will not be published. Required fields are marked *