ಆರ್ಯವೈಶ್ಯ ಸಮಾಜದ ಕುಲದೇವತೆ ವಿಶ್ವರೂಪಿಣಿ ಶ್ರೀವಾಸವಿ ಚಲನಚಿತ್ರ ಚಂದ್ರಹಾಸ ಚಿತ್ರಮಂದಿರದಲ್ಲಿ ಪ್ರದರ್ಶನ.

ಗಂಗಾವತಿ: ಅಪರೂಪಕ್ಕೆ ಎಂಬಂತೆ ಆಗೊಮ್ಮೆ ಈಗೊಮ್ಮೆ ಬೆಳ್ಳಿ ತೆರೆಯ ಮೇಲೆ ಆಗಮಿಸುತ್ತಿರುವ ಭಕ್ತಿ ಪ್ರಸಾರವಾದ ಚಿತ್ರಗಳು ಪ್ರತಿಯೊಬ್ಬ ಆಸ್ತಿಕ ಬಂಧುಗಳು ವೀಕ್ಷಿಸುವುದರ ಮೂಲಕ ಸುಖಿ ಸಮಾಜದ ನಿರ್ಮಾಣಕ್ಕೆ ಮುಂಜಾಗಬೇಕಾದ ಅವಶ್ಯಕತೆ ಇದ್ದು ಈ ಹಿನ್ನೆಲೆಯಲ್ಲಿ ಜನವರಿ 7 ರಂದು ನಗರದ ಚಂದ್ರಹಾಸ ಚಿತ್ರಮಂದಿರದಲ್ಲಿ ಆರ್ಯವೈಶ್ಯ ಸಮಾಜದ ಕುಲದೇವತೆಯಾದ ಶ್ರೀ ಕನ್ನಿಕಾ ಪರಮೇಶ್ವರಿ( ಶ್ರೀ ವಾಸವಿ) ಜೀವನ. ವಿಶ್ವ ರೂಪಿಣಿಯಾಗಿ ಕಂಗೊಳಿಸಿದ ಚಲನಚಿತ್ರ ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಗಂಗಾವತಿ ಆರ್ಯವೈಶ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ಈಶ್ವರಿ ಶ್ರೇಷ್ಠಿ. ವಾಸವಿ ಯುವಜನ ಸಂಘದ ಕಾರ್ಯದರ್ಶಿ ಮಂಜುನಾಥ. ಮಹಿಳಾ ಘಟಕದ ಅಧ್ಯಕ್ಷ ಭಾಗ್ಯ ಈಶ್ವರ ಶ್ರೇಷ್ಠಿ.ವಾಸು ಲಕ್ಷ್ಮಣ ರಾಯಚೂರು ಹೇಳಿದರು. ಸೋಮವಾರದಂದು ಶ್ರೀನಗರೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತಿ ಪ್ರಧಾನ ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದರು.

ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ವಿಶ್ವರೂಪಿಣಿ ಶ್ರೀವಾಸವಿ ಚಲನಚಿತ್ರ ಡಿಸೆಂಬರ್ 5ರಂದು ಬಿಡುಗಡೆಗೊಂಡಿದ್ದು ಚಿತ್ರಮಂದಿರಗಳ ಹಾಗೂ ಹಂಚಿಕೆದಾರರ ಕೊರತೆಯಿಂದ ದಿನಾಂಕ 7ರಂದು ಸಮಾಜ ಬಾಂಧವರಿಗಾಗಿ ಹಾಗೂ ಆಸ್ತಿಕ ಬಂಧುಗಳಿಗಾಗಿ ಎರಡು ಪ್ರದರ್ಶನಗಳು ಮಾತ್ರ ಅವಕಾಶವನ್ನು ನೀಡಲಾಗಿದ್ದು ಸರ್ವರು ಚಿತ್ರವನ್ನು ವೀಕ್ಷಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ಭಾಗ್ಯಾ ಈಶ್ವರ ಶ್ರೇಷ್ಠಿ ಮಾತನಾಡಿ ಅತ್ಯಂತ ಚೆಲುವೆಯಾದ ವಾಸವಿ ಅವಳನ್ನು ವಿವಾಹವಾಗಲು ಇಷ್ಟಪಟ್ಟ ರಾಜಕುಮಾರ ವಿಷ್ಣು ಒತ್ತಾಯ.ಅದಕ್ಕೆ ಒಪ್ಪದ ವಾಸವಿ ಅಗ್ನಿ ಪ್ರವೇಶ ಮಾಡುವುದರ ಮೂಲಕ ವಿಶ್ವರೂಪಿಣಿಯಾಗಿ ಕಂಗೊಳಿಸಿದ್ದು ಚಿತ್ರದ ಕಥಾವಸ್ತುವನ್ನು ಹೊಂದಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಸಾಪಟ್ಟಣ.ಮಲ್ಲಾಪುರ. ಶ್ರೀ ರಾಮನಗರ ಸೇರಿದಂತೆ ಮತ್ತಿತರ ಭಾಗಗಳಿಂದ ಆಗಮಿಸಿದ ಸಮಾಜ ಬಾಂಧವರಿಗೆ ಚಿತ್ರಮಂದಿರದ ಟಿಕೇಟ್ ಬುಕ್ ಗಳನ್ನು ವಿತರಿಸಲಾಯಿತು.

