ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗುಂದಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಎರಡನೇ ವರ್ಷದ ಮಹಾರಥೋತ್ಸವ,,,,

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗುಂದಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಎರಡನೇ ವರ್ಷದ ಮಹಾರಥೋತ್ಸವ,,,,

ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿರುವ ಕಿಷ್ಕಿಂದೆಯ ಆನೆಗುಂದಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಎರಡನೇ ವರ್ಷದ ಮಹಾ ರಥೋತ್ಸವ ಸಾವಿರಾರು ಸಂಖ್ಯೆಯ ಮಾಲಾಧಾರಿಗಳು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ಮತ್ತು ಅದ್ದೂರಿಯಾಗಿ ನಡೆಯಿತು,,,, ಗುರುಸ್ವಾಮಿ ಯಾಗಿರುವ ಶ್ರೀ ಪವನ್ ಗುರುಸ್ವಾಮಿ ನೇತೃತ್ವದಲ್ಲಿ ಎರಡನೇ ವರ್ಷದಮಹಾರಥೋತ್ಸವ ಅದ್ದೂರಿಯಾಗಿ ಮತ್ತು ವೈಭವದಿಂದ ನಡೆದಿದ್ದು ಗಂಗಾವತಿ ಹೊಸಪೇಟೆ , ಕೊಪ್ಪಳ ಕನಕಗಿರಿ ಹಾಗೂ ಇನ್ನಿತರ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಮಾಲಾಧಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು,,,, ರಾಜಮಾತೆಯಾಗಿರುವ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು,,, ಆನೆಗುಂದಿ ರಾಜವಂಶಸ್ಥರಾಗಿರುವ ಶ್ರೀ ಕೃಷ್ಣದೇವರಾಯಲು ಶ್ರೀಮತಿ ರತ್ನಶ್ರೀ ರಾಯಲು ಗುರುಸ್ವಾಮಿ ಆಗಿರುವ ಶ್ರೀ ತಾತಯ್ಯ ಗುರುಸ್ವಾಮಿ ಹಾಗೂ ಆನೆಗುಂದಿ ಗ್ರಾಮದ ಗಣ್ಯಮಾನ್ಯರು ರಾಜ ವಂಶಸ್ಥರು ಮಹಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು ,,,, ಆನೆಗುಂದಿಯ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ಶ್ರೀ ಅಯ್ಯಪ್ಪ ಸ್ವಾಮಿ ಮಹಾರಥೋತ್ಸವ ಪ್ರಮುಖ ರಾಜಭೀದಿಗಳಲ್ಲಿ ಸಂಚರಿಸಿ ಅರಮನೆ ಮುಂಭಾಗದ ರಸ್ತೆಯ ಮೂಲಕ ಮತ್ತೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ತೇರು ಬೀದಿಯನ್ನು ತಲುಪಿತು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಪ್ರಥಮವಾಗಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಮಹಾರಥೋತ್ಸವ ಪ್ರಾರಂಭವಾಗಿದ್ದು ಎರಡನೇ ವರ್ಷದ ಮಹಾರಥೋತ್ಸವ ವಿಜೃಂಭಣೆಯಿಂದ ಮತ್ತು ವೈಭವದಿಂದ ನಡೆಯಿತು ಎಂದು ಆನೆಗುಂದಿಯ ಗುರುಸ್ವಾಮಿ ಯಾಗಿರುವ ಶ್ರೀ ಪವನ್ ಗುರುಸ್ವಾಮಿಯವರು ಸಮಸ್ತ ಭಕ್ತಾದಿಗಳಿಗೆ ತಿಳಿಸಿದರು,,,,

Leave a Reply

Your email address will not be published. Required fields are marked *