ಕಂಪ್ಲಿಯಲ್ಲಿ ಶ್ರೀಘ್ರದಲ್ಲಿಯೇ ಜಿಟಿಟಿಸಿ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು : ಜೆ.ಎನ್.ಗಣೇಶ್…

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶ್ರೀಘ್ರದಲ್ಲಿಯೇ ಭೂಮಿ ಪೂಜೆಯನ್ನು ನೆರವೇರಿಸಲಾಗುವುದೆಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, ಸೆ.4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಡೆದ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಇದರಂತೆ ಕಂಪ್ಲಿಯೂ ಸೇರಿದಂತೆ ರಾಯಚೂರು ಗ್ರಾಮೀಣ ಭಾಗದಲ್ಲಿ ಜಿಟಿಟಿಸಿ ಕಾಲೇಜು ತೆರೆಯಲು ನಿಶ್ಚಯಿಸಿದ್ದು ಕೆಕೆಆರ್ಡಿಬಿಯ 73.75 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.ಯುವಕರಲ್ಲಿ ಕೌಶಲ, ಉದ್ಯಮಶೀಲತೆ ಪ್ರೇರಿಪಿಸಲು, ಸ್ವ-ಉದ್ಯೋಗ ಕಂಡುಕೊಳ್ಳಲು ಹೊಸದಾಗಿ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯಮಿಗಳಾಗಿ ತೊಡಗಿಸಿಕೊಳ್ಳಲು ಜಿಟಿಟಿಸಿ ಕಾಲೇಜು ಕಂಪ್ಲಿ ಭಾಗದ ಯುವಕರಿಗೆ ವರದಾನವಾಗಲಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆಯಿಂದ ಪಾರಾಗಲು ಸಾಧ್ಯವಾಗಲಿದೆ.ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಮುಖ್ಯ ಕೋರ್ಸ್ಗಳಿದ್ದು, ಇದರಲ್ಲಿ ಮೂರು ವರ್ಷ ತರಬೇತಿ ಪಡೆದು ಒಂದು ವರ್ಷ ಇಂಟರ್ನ್ಶಶಿಫ್ ತರಬೇತಿ ವಿದ್ಯಾರ್ಥಿಯಾಗಿ ತರಬೇತಿ ಪಡೆದ ನಂತರವೇ ಪ್ರಮಾಣಪತ್ರವನ್ನು ಒದಗಿಸಲಾಗುವುದು. ೨ರಿಂದ೬ ತಿಂಗಳ ಶಾರ್ಟ್ಟರ್ಮ್ ಕೋರ್ಸ್ಗಳಿದ್ದು ಐಟಿಐ, ಡಿಪ್ಲೋಮೋ, ಇಂಜಿನಿಯರಿಂಗ್ ಪದವೀಧರರು ಈ ಕೋರ್ಸ್ಗೆ ಸೇರಬಹುದಾಗಿದೆ. ಅಲ್ಲದೆ ಒಂದು ವರ್ಷದ ಟೂಲ್ ರೂಮ್ ಮಿಶಿನಿಷ್ಟ್ ಸರ್ಟಿಪಿಕೇಟ್ ಪ್ರೋಗರಾಮ ಕೊರ್ಸ್ ಕೂಡ ಇರಲಿದೆ.ಜಿಟಿಟಿಸಿಯಲ್ಲಿ ಲಭ್ಯವಿರುವ ಕೋರ್ಸ್ : ಜಿಟಿಟಿಸಿಯಲ್ಲಿ ಟೂಲ್ ಮತ್ತು ಡೈ ತಯಾರಿ, ಟೂಲ್ ವಿನ್ಯಾಸ, ಸಿಎನ್, ಸಿಪ್ರೋಗ್ರಾಮರ್ ಮತ್ತು ಮೆಕಾಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನ, ಡಿಪ್ಲಮೋ ಇನ್ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಇನ್ ಮಿಷನರಿ ಸೇರಿದಂತೆ ಏಳು ಕೋರ್ಸ್ ಗಳಿದ್ದು, ಮೊದಲಿಗೆ ಮೂರರಿಂದ ನಾಲ್ಕು ಕೋರ್ಸ್ ಆರಂಭಗೊಳ್ಳಲಿವೆ. ಪ್ರತಿ ಕೋರ್ಸ್ಗೆ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ ಹತ್ತನೇ ತರಗತಿಯಲ್ಲಿ ಉತ್ತೀರ್ಣರದವರು ಮೆರಿಟ್ ಆಧಾರ, ಮೀಸಲಾತಿ ಹಾಗೂ ರೋಸ್ಟರ್ ಪದ್ದತಿಯಡಿಯಲ್ಲಿ ಜಿಟಿಟಿಸಿ ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದೆ.====ಕೋಟ್====ಕಂಪ್ಲಿ ತಾಲ್ಲೂಕಿನ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಅಗತ್ಯತೆಯನ್ನು ಜಿಟಿಟಿಸಿ ಕಾಲೇಜು ನೀಗಿಸಲಿದೆ. ಅರಳಿಹಳ್ಳಿ ತಾಂಡದಲ್ಲಿ 6 ಎಕರೆ ಭೂಮಿ ಜಿಟಿಟಿಸಿಗೆ ಮಂಜೂರಾಗಿದೆ. ಟೆಂಡರ್ ಹಂತದಲ್ಲಿದ್ದು, ಶ್ರೀಘ್ರವೇ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು. ಜೆ.ಎನ್.ಗಣೇಶ್, ಶಾಸಕರು, ಕಂಪ್ಲಿ.===ಕೋಟ್===ಕಂಪ್ಲಿ ತಾಲ್ಲೂಕಿನ ಸಣಾಪುರ ಗ್ರಾ.ಪಂ.ವ್ಯಾಪ್ತಿಯ ಅರಳಿಹಳ್ಳಿಯಲ್ಲಿ ಜಿಟಿಟಿಸಿ ಕಾಲೇಜು ಆರಂಭಿಸಲಾಗುವುದು. ಈಟಿಟಿಸಿ ಶಿಕ್ಷಣದಲ್ಲಿ ಶೇ.70ರಷ್ಟು ಪ್ರಾಯೋಗಿಕ, ಶೇ.30 ರಷ್ಟು ಥಿಯರಿಗೆ ಆದ್ಯತೆ ಇರುತ್ತದೆ. ಶೇ.100ರಷ್ಟುಉದ್ಯೋಗ ಖಾತ್ರಿ ಭರವಸೆಯಿದೆ. ನಿರುದ್ಯೋಗ ನೀಗಿಸುವುದಲ್ಲದೆ, ಉದ್ಯಮಗಿಳಾಗಲು, ಸ್ವ-ಉದ್ಯೋಗ ಮಾಡಲು ಜಿಟಿಟಿಸಿ ಉತ್ತಮ ನೆಲೆ ಒದಗಿಸುತ್ತದೆ. ಅಂಜನ್ ಕುಮಾರ್. ಪ್ರಾಚಾರ್ಯರು, ಜಿಟಿಟಿಸಿ, ಮರಿಯಮ್ಮನಹಳ್ಳಿ.ವರದಿ : ಜಿಲಾನಸಾಬ್ ಬಡಿಗೇರ್
